For the best experience, open
https://m.samyuktakarnataka.in
on your mobile browser.

ಶೆಟ್ಟರ ಕಾಂಗ್ರೆಸ್‌ಗೆ ಬಂದಾಗ ಆಡಿದ ಮಾತು ನೆನಪು ಮಾಡಿಕೊಳ್ಳಲಿ

08:47 PM Jan 19, 2025 IST | Samyukta Karnataka
ಶೆಟ್ಟರ ಕಾಂಗ್ರೆಸ್‌ಗೆ ಬಂದಾಗ ಆಡಿದ ಮಾತು ನೆನಪು ಮಾಡಿಕೊಳ್ಳಲಿ

ಬೆಳಗಾವಿ: ಜಗದೀಶ ಶೆಟ್ಟರ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಬಂದಾಗ ಆಡಿದ ನುಡಿ ಮುತ್ತುಗಳನ್ನು ನೆನಪು ಮಡಿಕೊಳ್ಳಲಿ. ಅವರು ಬಂದರೆ ನಾನೇ ಅವರನ್ನು ಟೂರ್ ಕರೆದುಕೊಂಡು ಹೋಗುತ್ತೇನೆ. ಸಂಸದರಾಗಿ, ಲೋಕಸಭಾ ಸದಸ್ಯರಾಗಿ ಎಲ್ಲೆಲ್ಲಿ ಏನೇನು ಮಾಡಿದ್ದಾರೆ ಎಂಬುದನ್ನು ಅವರು ನಮಗೆ ಹೇಳಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾಂಗ್ರೆಸ್ ಸಮಾವೇಶ ಬಗ್ಗೆ ಟೀಕಿಸಿದ್ದ ಸಂಸದ ಜಗದೀಶ ಶೆಟ್ಟರ ಹೇಳಿಕೆಗೆ ತಿರುಗೇಟು ನೀಡಿದರು.
ಜನವರಿ ೨೧ರಂದು ನಡೆಯಲಿರುವ ಜೈ ಬಾಪು ಜೈ ಭೀಮ್ ಮತ್ತು ಜೈ ಸಂವಿಧಾನ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಳ್ಳುತ್ತಿವೆ. ಅವುಗಳ ಪ್ರಾಯೋಗಿಕ ಪರಿಶೀಲನೆ ನಡೆಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೂಡ ಸಂಘಟನೆಯ ಜವಾಬ್ದಾರಿಯನ್ನು ಹೊರಿಸಲಾಗಿದೆ. ಬೂತ್ ಕಮಿಟಿ ಅಧ್ಯಕ್ಷರು ಬೆಳಗಾವಿಗೆ ಆಗಮಿಸಿದ್ದು, ಸಮಾವೇಶಕ್ಕೆ ಆಗಮಿಸುವವರ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆಗಳನ್ನು ಪರಿಶೀಲಿಸಲಾಗುತ್ತಿದೆ. ಜ. ೨೧ ರಂದು ಬೆಳಗ್ಗೆ ವಿಶೇಷ ವಿಮಾನದ ಮೂಲಕ ಬೆಳಗಾವಿ ಸುವರ್ಣಸೌಧಕ್ಕೆ ಆಗಮಿಸಿ ಮಹಾತ್ಮಾ ಗಾಂಧಿಜೀಯವರ ಮೂರ್ತಿಯನ್ನು ಅನಾವರಣಗೊಳಿಸಿ ನಂತರ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಅವರು ಮಾಹಿತಿ ನೀಡಿದರು.