For the best experience, open
https://m.samyuktakarnataka.in
on your mobile browser.

ಶೇ. 25 ರಷ್ಟು ಉದ್ಯೋಗಿಗಳಾಗುತ್ತಿದ್ದಾರೆ

02:08 PM Dec 18, 2023 IST | Samyukta Karnataka
ಶೇ  25 ರಷ್ಟು ಉದ್ಯೋಗಿಗಳಾಗುತ್ತಿದ್ದಾರೆ

ಕಲಬುರಗಿ: ರಾಜ್ಯದಲ್ಲಿ ಓದಿದ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು ಹೊರಗೆ ಬಂದರೂ ಕೂಡಾ ಬೇರೆ ರಾಜ್ಯದಿಂದ ಬಂದ ಮಕ್ಕಳೊಂದಿಗೆ ಸ್ಫರ್ಧೆ ಮಾಡಲು ಮತ್ತಷ್ಟು ಉತ್ತೇಜನ‌ ನೀಡಬೇಕಿದೆ ಅದಕ್ಕೆ ಬೇಕಾಗುವ ಸಹಕಾರ ನೀಡಬೇಕಿದೆ ಎಂದು ಸಚಿವ ಡಾ.‌ಶರಣಪ್ರಕಾಶ ಪಾಟೀಲ್ ಹೇಳಿದ್ದಾರೆ.
ನಗರದ ಶ್ರೀ ಶರಣ ಬಸವ ವಿಶ್ವ ವಿದ್ಯಾಲಯದ 5 ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆರ್ಟಿಕಲ್ 371 J ಅಡಿಯಲ್ಲಿ ಸಿಗುತ್ತಿರುವ ಸೌಲಭ್ಯ ಪಡೆದುಕೊಳ್ಳುತ್ತಿರುವ ಈ ಭಾಗದ ವಿದ್ಯಾರ್ಥಿಗಳು ಮೆಡಿಕಲ್ ಸೀಟ್ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದ 3500 ಮೆರಿಟ್ ಸೀಟ್ ನಲ್ಲಿ 900 ಸೀಟುಗಳನ್ನು ಈ‌ ಭಾಗದ ಮಕ್ಕಳು ಪಡೆದುಕೊಂಡಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ ಪಾಟೀಲ್ ಹೇಳಿದರು.
12 ನೇ ಶತಮಾತನದ ಶರಣದ ಕಾಯಕ ದಾಸೋಹ ತತ್ವವನ್ನು ಶರಣಬಸವೇಶ್ವರ ಸಂಸ್ಥಾನ ಅನುಸರಿಸುತ್ತಿದೆ. ಈ ಹಿಂದೆ ಅನ್ನ ದಾಸೋಹ ಮಾಡುತ್ತಿದ್ದ ಸಂಸ್ಥಾನ ಈಗ ವಿದ್ಯಾ ದಾಸೋಹ ಮಾಡುತ್ತಿದೆ. ನಮ್ಮ ಭಾಗದಲ್ಲಿ ಶೈಕ್ಷಣಿಕ ಕೊರತೆ ನೀಗಿಸಲು ಮಠ ಮಾನ್ಯಗಳು ಮುಂದೆ ಬಂದು ನಮ್ಮ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ ಎಂದು ಮಠಗಳ ಕೊಡುಗೆಯನ್ನು ಶ್ಲಾಘಿಸಿದರು.
ಖಾಸಗಿಯವರು ಮೆಡಿಕಲ್ ಹಾಗೂ ಇಂಜೀನಿಯರಿಂಗ್ ಶಿಕ್ಷಣಕ್ಕೆ ನೀಡಿದ ಮಹತ್ವದಿಂದಾಗಿ ದೇಶದಲ್ಲಿಯೇ ನಮ್ಮ ರಾಜ್ಯ ಹಲವಾರು ಪ್ರಮುಖ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪನೆ ಮಾಡಿದ್ದಾರೆ. ರಾಜ್ಯದಲ್ಲಿ ಓದಿದ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು ಹೊರಗೆ ಬಂದರೂ ಕೂಡಾ ಬೇರೆ ರಾಜ್ಯದಿಂದ ಬಂದ ಮಕ್ಕಳೊಂದಿಗೆ ಸ್ಫರ್ಧೆ ಮಾಡಲು ಮತ್ತಷ್ಟು ಉತ್ತೇಜನ‌ ನೀಡಬೇಕಿದೆ ಅದಕ್ಕೆ ಬೇಕಾಗುವ ಸಹಕಾರ ನೀಡಬೇಕಿದೆ. ಪ್ರತಿ ಸಲ 1 ಲಕ್ಷ ಮಕ್ಕಳು ಇಂಜೀನಿಯರಿಂಗ್ ನಲ್ಲಿ ಪಾಸಾಗಿ ಬಂದರೂ ಕೇವಲ 25 % ಮಕ್ಕಳು ಮಾತ್ರ ಉದ್ಯೋಗಿಗಳಾಗುತ್ತಿದ್ದಾರೆ. ಹಾಗಾಗಿ ಮಕ್ಕಳು ಸಿಕ್ಕ ಅವಕಾಶಗಳನ್ನು‌ ಸದುಪಯೋಗಪಡೆದುಕೊಂಡು ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕು ಎಂದು ಸಲಹೆ ನೀಡಿದರು.
ವೇದಿಕೆಯ ಮೇಲೆ ಕುಲಾಧಿಪತಿಗಳಾದ ಡಾ ಶರಣಬಸವಪ್ಪ ಅಪ್ಪ, ಚಿರಂಜೀವಿ ದೊಡ್ಡಪ್ಪ ಅಪ್ಪ ಮಹಾದಾಸೋಹ ಪೀಠಾಧಿಪತಿಗಳು ಶರಣಬಸವೇಶ್ವರ ಸಂಸ್ಥಾನ, ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ ಪಾಟೀಲ, ವಿಠ್ಠಲ್ ಮಾಡ್ಯಾಳಕರ್, ಬಸವರಾಜ ಎಸ್ ದೇಶಮುಖ್, ಡಾ ನಿರಂಜನ ವಿ.‌ ನಿಷ್ಠಿ ಸೇರಿದಂತೆ ಹಲವರು ಭಾಗವಹಿಸಿದ್ದರು.