ಶ್ಯಾಮ ಪ್ರಸಾದ್ ಮುಖರ್ಜಿ ಅವರ ಹೋರಾಟಕ್ಕೆ ಜಯ ಸಿಕ್ಕಿದೆ
ಬೆಂಗಳೂರು: ಒಂದು ದೇಶಕ್ಕೆ ಒಂದು ಸಂವಿಧಾನ, ಒಂದು ಧ್ವಜ, ಒಬ್ಬ ಪ್ರಧಾನಮಂತ್ರಿ ಇರಬೇಕು ಎಂಬ ಪರಿಕಲ್ಪನೆಯೊಂದಿಗೆ ದೇಶಕ್ಕಾಗಿ ಬಲಿದಾನಗೈದ ಜನಸಂಘದ ಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ ಎಂದು ಮಾಜಿ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಭಾರತದ ಏಕತೆ, ಅಖಂಡತೆಗೆ ಮಾರಕವಾಗಿದ್ದ ಆರ್ಟಿಕಲ್ 370ರದ್ದು ಮಾಡಿ ಜಮ್ಮು ಕಾಶ್ಮೀರದಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಅಭಿವೃದ್ಧಿಯ ಹೊಸ ಶಕೆ ಪ್ರಾರಂಭಿಸಿದ್ದ ಪ್ರಧಾನಿ ಶ್ರೀ ನರೇಂದ್ರ ಮೋದಿ ಸರ್ಕಾರದ ನಿರ್ಧಾರವನ್ನ ಎತ್ತಿ ಹಿಡಿಯುವ ಮೂಲಕ ಮಾನ್ಯ ಸುಪ್ರೀಂ ಕೋರ್ಟ್ ಇಂದು ಐತಿಹಾಸಿಕ ತೀರ್ಪು ನೀಡಿದೆ.
ಒಂದು ದೇಶಕ್ಕೆ ಒಂದು ಸಂವಿಧಾನ, ಒಂದು ಧ್ವಜ, ಒಬ್ಬ ಪ್ರಧಾನಮಂತ್ರಿ ಇರಬೇಕು ಎಂಬ ಪರಿಕಲ್ಪನೆಯೊಂದಿಗೆ ದೇಶಕ್ಕಾಗಿ ಬಲಿದಾನಗೈದ ಜನಸಂಘದ ಸ್ಥಾಪಕರಾದ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ.
ಜಮ್ಮು ಕಾಶ್ಮೀರದಲ್ಲಿ ಶಾಂತಿ, ಸುವ್ಯವಸ್ಥೆ ಸ್ಥಾಪಿಸಿ, ಅಲ್ಲಿನ ಪ್ರಜೆಗಳಿಗೆ ಇತರ ಭಾರತೀಯರಂತೆ ಸಮಾನ ಹಕ್ಕು ನೀಡಿ, ಅಭಿವೃದ್ಧಿಯತ್ತ ಕೊಂಡೊಯ್ಯುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ ಶಾ ಅವರ ದೃಢ ಸಂಕಲ್ಪ, ದಿಟ್ಟ ಹೆಜ್ಜೆ ಹಾಗೂ ನಿರಂತರ ಪರಿಶ್ರಮಕ್ಕೆ ಇವತ್ತಿನ ಸುಪ್ರೀಂ ಕೋರ್ಟ್ ನಿರ್ಣಯ ಪುಷ್ಟಿ ನೀಡಿದೆ ಎಂದು ಬರೆದುಕೊಂಡಿದ್ದಾರೆ.