For the best experience, open
https://m.samyuktakarnataka.in
on your mobile browser.

ಶ್ರೀರಂಗಪಟ್ಟಣ ತಲುಪಿದ ಮಿತ್ರ ಪಕ್ಷಗಳ ಮೈಸೂರು ಚಲೋ ಚಳುವಳಿ

09:42 PM Aug 08, 2024 IST | Samyukta Karnataka
ಶ್ರೀರಂಗಪಟ್ಟಣ ತಲುಪಿದ ಮಿತ್ರ ಪಕ್ಷಗಳ ಮೈಸೂರು ಚಲೋ ಚಳುವಳಿ

ಶ್ರೀರಂಗಪಟ್ಟಣ: ಅಕ್ರಮ ಮೂಡ ನಿವೇಶನ ಹಗರಣದ ವಿರುದ್ಧ ಸಿಡಿದೆದ್ದಿರುವ ಕರ್ನಾಟಕ ರಾಜ್ಯದ ವಿರೋಧ ಪಕ್ಷಗಳಾದ ಹಾಗೂ ಮಿತ್ರ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಪಕ್ಷಗಳ ಮುಖಂಡರು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿರುವ ಅಕ್ರಮ ಮೂಡ ನಿವೇಶನದ ಆರೋಪ ಹಿನ್ನಲೆ ರಾಜೀನಾಮೆ ನೀಡಬೇಕೆಂದು ಮೈಸೂರು ಚಲೋ ಚಳುವಳಿಯನ್ನು ಹಮ್ಮಿಕೊಂಡು ಪಾದಯಾತ್ರೆ ನಡೆಸುತ್ತಿದ್ದಾರೆ.
ಬುಧವಾರ ಸಂಜೆ ಮಂಡ್ಯದ ತೂಬಿನಕೆರೆವರೆಗೆ ತಲುಪಿ ಇಂದು ಗುರವಾರ ಬೆಳಿಗ್ಗೆ 11ಗಂಟೆ ಸಮಯದಲ್ಲಿ ತೂಬಿನಕೆರೆ ನಿಂದ 6.30ರ ಸಂಜೆ ಶ್ರೀರಂಗಪಟ್ಟಣ ತಲುಪಿತು.
ಕಾರ್ಯಕ್ರಮ ಉದ್ದೇಶಿಸಿ ಬಿಜೆಪಿ ಪಕ್ಷದ ಮುಖಂಡರಾದ ಆರ್. ಅಶೋಕ್ ಮಾತನಾಡಿ, ಆಡಳಿತ ಪಕ್ಷದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ಮೂಡ ನಿವೇಶನ ಹಗರಣ ಆರೋಪದ ವಿಚಾರವಾಗಿ ನಾವುಗಳು ಮೈಸೂರು ಚಲೋ ಪಾದಯಾತ್ರೆಯನ್ನು ಹಮ್ಮಿಕೊಂಡಿರುವ ಈ ಸಮಯದಲ್ಲಿ ಜನಾಂದೋಲನ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಉದ್ದೇಶವಾದರೂ ಏಕೆ ಎಂಬ ಪ್ರಶ್ನೆಯನ್ನು ಮುಂದಿಟ್ಟು "ನಾನು ಕಳ್ಳನಲ್ಲ ನಾನು ಕಳ್ಳನಲ್ಲ" ಎಂದು ಹೇಳಿದರೆ ನಂಬಲು ಇಲ್ಲಿ ಯಾರು ದಡ್ಡರಿಲ್ಲ ನೀವು ಕಳ್ಳರು ಅಲ್ಲ ಎಂದಿದ್ದರೆ ವಿಧಾನಸಭೆಯಲ್ಲಿ ಮೂಡ ನಿವೇಶನದ ಸರಿಯಾದ ದಾಖಲಾತಿಯನ್ನು ನೀಡಬೇಕಿತ್ತು, ಅದನ್ನು ನೀಡದೆ ಮೈಸೂರಿನಲ್ಲಿ ಜನಾಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಉದ್ದೇಶವೇನು ಎಂದು ಹಾಗೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಪ್ರಜೆಗಳಿಗೆ ಕರೆಂಟು ಉಚಿತ, ಮಹಿಳೆಯರಿಗೆ ಬಸ್ ಟಿಕೆಟ್ ಉಚಿತ, ಮನೆ ಯಜಮಾನಿಗೆ ತಿಂಗಳಿಗೆ 2000 ರೂ. ಉಚಿತ ಹಾಗೂ ಪದವೀಧರರಿಗೆ 3000 ಉಚಿತ ಹೀಗೆ ಹಲವು ಯೋಜನೆಗಳನ್ನು ನೀಡಿ ಈಗ ಸರ್ಕಾರದ ಬೊಕ್ಕಸ ಖಾಲಿ ಮಾಡಿ ಮದ್ಯಪಾನದ ದರವನ್ನು ಹೆಚ್ಚಿಸಿ ಗಂಡಸರ ಜೇಬಿಗೆ ಕತ್ತರಿ ಹಾಕಿ ಈ ಉಚಿತ ಯೋಜನೆಗಳನ್ನು ಸರಿದೂಗಿಸುವ ನಿಟ್ಟಿನಲ್ಲಿ ಲೂಟಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಲೂಟಿ ಸರ್ಕಾರ ಎಂಬ ಮಾತಿನ ಚಾಟಿ ಬೀಸಿದರು.
ಜೆಡಿಎಸ್ ಪಕ್ಷದ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಮೈಸೂರು ಚಲೋ ಪಾದಯಾತ್ರೆ ಬೆಂಗಳೂರಿನ ಕೆಂಗೇರಿ ಇಂದ ಪ್ರಾರಂಭವಾದ ಪಾದಯಾತ್ರೆ ಇಂದು ಶ್ರೀರಂಗಪಟ್ಟಣ ತಲುಪಿ ಶತಕ ಬಾರಿಸಿದ್ದೇವೆ. 100 ಕಿಲೋಮೀಟರ್ ಅತ್ಯಂತ ಯಶಸ್ವಿಯಾಗಿ ತಲುಪಲು ಸಹಕರಿಸಿದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿ.
ಕಾಂಗ್ರೆಸ್ ಪಕ್ಷ ಹಿಂದೆ ಇದ್ದ ಭಾರತೀಯ ಜನತಾ ಪಾರ್ಟಿಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪವನ್ನು ಮಾಡಿದ್ದರು. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುತ್ತೇವೆ ಎಂದು ಸುಳ್ಳು ಭರವಸೆಯನ್ನು ಸಹ ನೀಡಿದ್ದರು. ಆದರೆ ಇಂದು ಹಿಂದುಳಿದ ವರ್ಗಗಳಿಗೆ ಅನ್ಯಾಯವನ್ನು ಎಸೆಗುತ್ತಿದ್ದಾರೆ ಇಂದು ಮೂಡದಲ್ಲಿ 14 ನಿವೇಶನಗಳು ಸ್ವತಃ ಈ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕುಟುಂಬದವರ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ದಲಿತರಿಗೆ ಸೇರಿದಂತಹ ನಿವೇಶನಗಳನ್ನು ಬರೆಸಿಕೊಳ್ಳುವಂತ ಪ್ರಯತ್ನ ನಡೆಯುತ್ತಿದೆ. ಅವರು 50 ನಿವೇಶನ ಬರೆಸಿಕೊಂಡರು ಪರವಾಗಿಲ್ಲ ಆದರೆ ಕಾನೂನು ಬಾಹಿರವಾಗಿ ಬರೆಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯದ ಜನರಿಗೆ ಅರಿವನ್ನು ಮೂಡಿಸಿ ಅರ್ಥ ಮಾಡಿಸಲು ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಒಂದಾಗಿ ಮೈಸೂರು ಚಲೋ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಸಚ್ಚಿದಾನಂದ, ಬಿಜೆಪಿಯ ಮಾಜಿ ಸಚಿವರಾದ ಆರ್ ಅಶೋಕ್, ಜೆಡಿಎಸ್ ಪಕ್ಷದ ಮಾಜಿ ಸಚಿವರಾದ ನಾಗಮಂಗಲ ವಿಧಾನಸಭಾ ಕ್ಷೇತ್ರದ ಸುರೇಶ್ ಗೌಡ ಹಾಗೂ ಜೆಡಿಎಸ್ ಬಿಜೆಪಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.