For the best experience, open
https://m.samyuktakarnataka.in
on your mobile browser.

ಶ್ರೀರಾಮ ಪ್ರಾಣಪ್ರತಿಷ್ಠಾಪನೆ: ಶ್ರೀರಂಗಪಟ್ಟಣದಲ್ಲಿ ಭಜನೆ, ಮಜ್ಜಿಗೆ ಪಾನಕ ವಿತರಣೆ

07:43 PM Jan 21, 2024 IST | Samyukta Karnataka
ಶ್ರೀರಾಮ ಪ್ರಾಣಪ್ರತಿಷ್ಠಾಪನೆ  ಶ್ರೀರಂಗಪಟ್ಟಣದಲ್ಲಿ ಭಜನೆ  ಮಜ್ಜಿಗೆ ಪಾನಕ ವಿತರಣೆ

ಶ್ರೀರಂಗಪಟ್ಟಣ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆ ನಾಳೆ(ಜ.22) ಶ್ರೀರಂಗಪಟ್ಟಣದಲ್ಲಿ ವಿವಿಧ ಆಂಜನೇಯ ದೇವಾಲಯ ಹಾಗೂ ಪ್ರಮುಖ ಸ್ಥಳಗಳಲ್ಲಿ ಶ್ರೀರಾಮ ಜಪ, ಭಜನೆ ಜೊತೆಗೆ ಸಾರ್ವಜನಿಕರಿಗೆ ಮಜ್ಜಿಗೆ ಪಾನಕ ವಿತರಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.
ಪಟ್ಟಣದ ಪೇಟೆ ನಾರಯಣಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀರಾಮ ಜಪ ಹಾಗೂ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಬಂಧೀಗೌಡ ವೃತ್ತ, ಅಂಬೇಡ್ಕರ್ ವೃತ್ತ, ಖಾಸಗಿ ಬಸ್ ನಿಲ್ದಾಣ, ಮೂಡಲ ಬಾಗಿಲು ಅಜನೆಯ ದೇವಾಲಯದ ಆವರಣ ಹಾಗೂ ಕೋಟೆ ಆಂಜನೇಯ ದೇವಾಲಯಗಳ ಬಳಿ ಸಾವಿರಾರು ಸಾರ್ವಜನಿಕರಿಗೆ ಮಜ್ಜಿಗೆ ಮತ್ತು ಪಾನಕ ವಿತರಣೆಗೆ ಬಿಜೆಪಿ, ಹಿಂದೂಜಾಗರಣಾ ವೇದಿಕೆ, ವಿಶ್ವ ಹಿಂದೂಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಸಜ್ಜಾಗಿದ್ದಾರೆ.
ಬರೋಬ್ಬರಿ 500 ವರ್ಷಗಳ ಅಜ್ಞಾತ ವನವಾಸದಿಂದ ಶ್ರೀರಾಮಚಂದ್ರನು ಆಯೋಧ್ಯೆಯಲ್ಲಿ ವಿರಾಜಮಾನರಾಗಲಿದ್ದು, ಈ ಸುಸಂದರ್ಭದಲ್ಲಿ ಶ್ರೀರಂಗಪಟ್ಟಣದ ಜನತೆ ಪ್ರತೀ ಮನೆಗಳಲ್ಲೂ ಜ್ಯೋತಿ ಬೆಳಗಿಸಿ ಶ್ರೀರಾಮನಿಗೆ ಭಕ್ತಿಯ ಹೂ ಮಳೆ ಸುರಿಸುವಂತೆ ಕರೆ ನೀಡಲಾಗಿದ್ದು, ಜೊತೆಗೆ ತಾಲೂಕಿನ ಪ್ರಮುಖ ಶ್ರೀರಾಮನ ದೇವಾಲಯಗಳಲ್ಲೂ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಶ್ರೀರಾಮನ ಪ್ರಾಣ ಪ್ರತಿಷ್ಠಾನೆ ಕಾರ್ಯವನ್ನು ಕಣ್ಣುಂಬಿಕೊಳ್ಳಲು ಪ್ರತೀ ಗ್ರಾಮಗಳಲ್ಲೂ ತಳಿರು ತೋರಣಗಳನ್ನು ಕಟ್ಟಿ ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ.
ಪಟ್ಟಣದ ಕುವೆಂಪು ವೃತ್ತದ ಬಳಿಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಿರ್ಮಾಣಗೊಂಡಿರುವ ಶ್ರೀರಾಮಚಂದ್ರ ಹಾಗೂ ಪ್ರಧಾನಮಂತ್ರಿಗಳ ಬೃಹತ್ ಕಟೌಟ್ ರಾರಾಜಿಸುತ್ತಿದ್ದು, ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣಗೊಂಡು ಆಯೋಧ್ಯೆಯಲ್ಲಿ ಶ್ರೀರಾಮನನ್ನು ಕಣ್ತುಂಬಿಕೊಳ್ಳಲು ಜನತೆ ಕಾತರಗೊಂಡಿದ್ದಾರೆ.