ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಶ್ರೀವ್ಯಾಸರಾಜ ವಿದ್ಯಾಪೀಠ ನಿರ್ಮಾಣಕ್ಕೆ ಭೂಮಿಪೂಜೆ

08:29 PM Jul 21, 2024 IST | Samyukta Karnataka

ಮೈಸೂರು: ಶ್ರೀವ್ಯಾಸರಾಜ ಮಠದ(ಸೋಸಲೆ) ವತಿಯಿಂದ ಮೈಸೂರು ನಗರದ ಹೊರ ವಲಯದಲ್ಲಿ ಶ್ರೀವ್ಯಾಸರಾಜ ವಿದ್ಯಾಪೀಠ ನಿರ್ಮಾಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಲಾಯಿತು.
ದಡದಹಳ್ಳಿ ಮಾರ್ಗದಲ್ಲಿರುವ ಶ್ರೀನಗರದಲ್ಲಿ ಮೂರು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ವಿದ್ಯಾಪೀಠಕ್ಕೆ ಶ್ರೀ ವಿದ್ಯಾಶ್ರೀಶ ಸ್ವಾಮೀಜಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರು.
ವಿದ್ಯಾಶ್ರೀಶ ತೀರ್ಥರು ಶ್ರೀ ತಾವು ಸ್ಥಾಪಿಸಿದ ಶ್ರೀವ್ಯಾಸತೀರ್ಥ ವಿದ್ಯಾಪೀಠಕ್ಕೆ ನೂತನ ಕಟ್ಟಡವನ್ನು ನಿರ್ಮಾಣ ಮಾಡುವ ಬಯಕೆ ಹೊಂದಿದ್ದು. ಅದರಂತೆ, ಶ್ರೀನಗರದಲ್ಲಿ ೩ ಎಕರೆ ಭೂಮಿಯನ್ನು ಖರೀದಿಸಲಾಗಿತ್ತು. ಇದೀಗ ಬಹು ದಿನಗಳ ಕನಸಿನಂತೆ ಕಟ್ಟಡ ತಲೆ ಎತ್ತಲಿದೆ.
೧೨ ಕೋಟಿ ರೂ. ವೆಚ್ಚದಲ್ಲಿ ಅಂದಾಜಿಸಲಾಗಿದ್ದು, ಪಾಠಶಾಲೆ, ಆಧುನಿಕ ಸೌಕರ್ಯಗಳನ್ನು ಒಳಗೊಂಡ ವಿದ್ಯಾರ್ಥಿನಿಲಯ, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಸಂಶೋಧನಾ ಕೇಂದ್ರ, ಭವ್ಯ ಸಭಾಂಗಣ, ಸಂಸ್ಕೃತ ಪಾಠಶಾಲೆ, ಯಾಗಶಾಲೆ, ಅಧ್ಯಾಪಕರ ವಸತಿಗೃಹ, ಆಟದ ಮೈದಾನ, ಗೋಶಾಲೆ ಸೇರಿದಂತೆ ಹಲವು ಕಟ್ಟಡಗಳು ನಿರ್ಮಾಣವಾಗಲಿವೆ ಎಂದು ಶ್ರೀಗಳು ಹೇಳಿದರು.
ದೇವರ ಅನುಗ್ರಹ ಮತ್ತು ಭಕ್ತರ ಸಹಕಾರದಲ್ಲಿ ಸನಾತನ ವಿದ್ಯೆ ಪ್ರಸಾರದ ಕೇಂದ್ರಕ್ಕೆ ನೆಲೆ ಕಲ್ಪಿಸುವ ಕೆಲಸ ಆರಂಭವಾಗಲಿದೆ. ಗುರು ಪೂರ್ಣಿಮಾ ದಿನ ಇದಕ್ಕೆ ಸಾಕ್ಷಿ ಆಗಿದೆ ಎಂದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್, ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಿ.ಪಿ.ಮಧುಸೂದನ್ ಆಚಾರ್ಯ ಹಾಜರಿದ್ದರು.

Next Article