For the best experience, open
https://m.samyuktakarnataka.in
on your mobile browser.

ಶ್ರೀ ಅನ್ನದಾನೇಶ್ವರ ಮಠಕ್ಕೂ ವಕ್ಫ್ ಕಂಟಕ

04:10 PM Nov 04, 2024 IST | Samyukta Karnataka
ಶ್ರೀ ಅನ್ನದಾನೇಶ್ವರ ಮಠಕ್ಕೂ ವಕ್ಫ್ ಕಂಟಕ

ಆದರ್ಶ ಕುಲಕರ್ಣಿ

ನರೇಗಲ್ಲ : ರೈತರ ಆಸ್ತಿ ಪಹಣಿಯಲ್ಲಿ ಬರುತ್ತಿದ್ದ ವಕ್ಫ್ ಹೆಸರಿನ ಬಿಸಿ ಈಗ ಮಠ ಮಂದಿರಗಳಿಗೂ ತಟ್ಟಿದ್ದು, ಸಮಸ್ಯೆ ಎದುರಾಗತೊಡಗಿದೆ. ಕಳೆದ ಕೆಲದಿನಗಳಿಂದ ರಾಜ್ಯದಲ್ಲಿ ವಕ್ಫ್ ಬೋರ್ಡ್ಗಳು ರೈತರ ಜಮೀನು ಸೇರಿದಂತೆ ಕೆಲ ಮಠಗಳ ಆಸ್ತಿಯನ್ನು ವಷಪಡಿಸಿಕೊಂಡಿದೆ ಎಂಬ ಮಾಹಿತಿ ದೊರಕುತಿದ್ದು. ಇದೀಗ ಸ್ಥಳೀಯ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠದ ಎಸ್‌ಎವಿವಿಪಿ ಸಮಿತಿಯ ಕೆ.ವಿ.ಬಿ.ಎಂ ಉಚಿತ ಪ್ರಸಾದ ನಿಲಯದ ಸರ್ವೆ ನಂ: ೪೧೦/೨ಬಿ ರ ಆಸ್ತಿಯಲ್ಲಿ ರಹಮಾನ ಶಾವಲಿ ದರ್ಗಾ ವಕ್ಸ್ ಆಸ್ತಿಯನ್ನು ವಶಕ್ಕೆ ತೆಗೆದು ನೋಂದಣಿಯಾಗಿದೆ ಎಂಬ ಮಾಹಿತಿ ದೊರಕುತ್ತಿದೆ.

ನರೇಗಲ್ಲ ಸ್ವಾತಂತ್ರ‍್ಯ ಪೂರ್ವದಲ್ಲಿಯೇ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಹೈದ್ರಾಬಾದ್-ಕರ್ನಾಟಕದ ಶೈಕ್ಷಣಿಕ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಪಟ್ಟಣದ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠದ ಎಸ್‌ಎವಿವಿಪಿ ಸಮಿತಿಯ ಕೆ.ವಿ.ಬಿ.ಎಂ ಉಚಿತ ಪ್ರಸಾದ ನಿಲಯದ ಸರ್ವೆ ನಂ: ೪೧೦/೨ಬಿ ರ ಆಸ್ತಿಯಲ್ಲಿ ರಹಮಾನ ಶಾವಲಿ ದರ್ಗಾ ವಕ್ಸ್ ಆಸ್ತಿ ಎಂದು ನೋಂದಣಿ ಆಗಿದ್ದು, ಶ್ರೀಮಠದ ಭಕ್ತರಲ್ಲಿ ಆತಂಕ ಸೃಷ್ಠಿಯಾಗಿದೆ.

ಲಿಂ. ಡಾ. ಅಭಿನವ ಅನ್ನದಾನ ಸ್ವಾಮೀಜಿಗಳು ಶ್ರೀಮಠದ ಪೀಠಾಧಿಪತಿಗಳಾಗಿದ್ದಾಗ ಪಹಣಿಯ ಕಾಲಂ ನಂ. ೧೧ ರಲ್ಲಿ ೨೦೧೯-೨೦೨೦ ರಲ್ಲಿ ರೆಹಮಾನ ಶಾವಲಿ ದರ್ಗಾ ವಕ್ಸ್ ಆಸ್ತಿ ಎಂದು ಸೇರ್ಪಡೆಯಾಗಿದೆ. ಕೆ.ವಿ.ಬಿ.ಎಂ ಉಚಿತ ಪ್ರಸಾದ ನಿಲಯದ ಆಸ್ತಿ ನಂ. ೪೧೦/೨ಬಿ ರ ೧೫ ಎಕರೆ ೦೬ ಗುಂಟೆ ಜಮೀನಿನಲ್ಲಿ ೧೧ ಎಕರೆ ೧೯ ಗುಂಟೆ ಜಮೀನು ರೆಹಮಾನ ಶಾವಲಿ ದರ್ಗಾ ವಕ್ಸ್ ಆಸ್ತಿ ಎಂದು ಸೇರ್ಪಡೆಯಾಗಿದ್ದು, ಚೇರ್ಮನ್ ಕೆ.ವಿ.ಬಿ.ಎಂ ಉಚಿತ ಪ್ರಸಾದ ನಿಲಯ ನರೇಗಲ್ಲ ಹೆಸರಿಗೆ ೩ ಎಕರೆ ೨೭ ಗುಂಟೆ ಜಮೀನು ಎಂದು ನಮೂದಾಗಿರುವುದು ಕಂಡು ಬಂದಿದೆ.

೫೦೦ ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠವು ಸ್ವಾತಂತ್ರ‍್ಯ ಪೂರ್ವದಲ್ಲಿಯೇ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ ಅಕ್ಷರದೊಂದಿಗೆ ಅನ್ನವನ್ನು ನೀಡುವ ಉದ್ದೇಶ ಹೊಂದಿದ ಮಠವಾಗಿದೆ. ೧೯೫೬ರಲ್ಲಿ ಹಾಲಕೆರೆ ಶಾಖಾ ಮಠದಲ್ಲಿ ಲಿಂ. ಶ್ರೀ ಗುರು ಅನ್ನದಾನ ಸ್ವಾಮೀಜಿಗಳು ಕೋಡಿಕೊಪ್ಪ ವೀರಪ್ಪಜ್ಜನವರು ಹಾಗೂ ಬಾಗಲಕೋಟೆ ವೈರಾಗ್ಯದ ಮಲ್ಲಣಾರ್ಯರ ಉಚಿತ ಪ್ರಸಾದ ನಿಲಯವನ್ನು ಪ್ರಾರಂಭಿಸಿದ್ದರು.

ಉಚಿತ ಪ್ರಸಾದ ನಿಲಯಕ್ಕೆ ಸ್ಥಳೀಯ ರೈತರ ಸಹಕಾರದಿಂದ ಸಾಕಷ್ಟು ಭೂಮಿಯನ್ನು ಶ್ರೀಮಠಕ್ಕೆ ನೀಡಲಾಗಿತ್ತು. ಆದರೆ, ೨೦೧೯-೨೦ ರಲ್ಲಿ ಉಚಿತ ಪ್ರಸಾದ ನಿಲಯದ ೧೫.೦೬ ಎಕರೆ ಆಸ್ತಿಯಲ್ಲಿ ರೆಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ ಎಂದು ಹೇಗೆ ನಮೂದಾಗಿದೆ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

Tags :