ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಷೇರುಪೇಟೆಯಲ್ಲಿ ಭಾರಿ ರಕ್ತಪಾತ

12:45 AM Mar 14, 2024 IST | Samyukta Karnataka

ನವದೆಹಲಿ: ಷೇರುಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ೯೦೬ ಅಂಕ ಕುಸಿದಿದ್ದು, ಹೂಡಿಕೆದಾರರು ೧೪ ಲಕ್ಷ ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಮಾರುಕಟ್ಟೆ ಬಂಡವಾಳ ೩೭೨ ಲಕ್ಷ ಕೋಟಿ ರೂ.ಗೆ ಇಳಿದಿದೆ. ನಿಫ್ಟಿ ಸೂಚ್ಯಂಕದಲ್ಲಿ ೩೩೮ ಅಂಕಗಳು ಕುಸಿದು ೨೧,೯೯೭.೭೦ರ ಮಟ್ಟಕ್ಕೆ ತಲುಪಿದೆ. ನಿಫ್ಟಿ ಸಣ್ಣ ಗಾತ್ರದ ಷೇರುಗಳ ಬೆಲೆ ಶೇಕಡ ೫ರಷ್ಟು ಕುಸಿತಗೊಂಡಿದ್ದು, ಡಿಸೆಂಬರ್ ೨೦೨೨ರ ನಂತರ ಈ ಪ್ರಮಾಣದ ಕುಸಿತ ಇದೇ ಮೊದಲು.
ಬಹುಕ್ಷೇತ್ರಗಳ ಬೃಹತ್ ಸಂಸ್ಥೆ ರಿಲಯನ್ಸ್, ನಿರ್ಮಾಣ ಮತ್ತು ಇಂಜಿನಿಯರಿಂಗ್ ದೈತ್ಯ ಲಾರ್ಸನ್ ಅಂಡ್ ಟೂಬ್ರೋಗಳ ಕುಸಿತ ೫೦೦ ಪಾಯಿಂಟ್‌ಗಳ ಕುಸಿತಕ್ಕೆ ಕಾರಣವಾಯಿತು. ಇಂಧನ ಕಂಪನಿಗಳಾದ ಎನ್‌ಟಿಪಿಸಿ, ಪವರ್ ಗ್ರಿಡ್‌ಗಳ ಷೇರು ಬೆಲೆ ತಳ ಕಂಡಿದ್ದು, ಇದಕ್ಕೆ ಇನ್ನಷ್ಟು ಪೂರಕವಾಯಿತು.
ಕೆಲವು ತಿಂಗಳಿಂದ ಷೇರುಗಳ ಬೆಲೆ ಏರಿಕೆಯಾಗಿದ್ದು ಭಾರಿ ಪ್ರಮಾಣದಲ್ಲಿ ಹೂಡಿಕೆದಾರರು ಷೇರುಗಳನ್ನು ಖರೀದಿಸಿದ್ದು, ಕುಸಿತ ಉಂಟಾಗುತ್ತಿದ್ದಂತೆ, ಅಂಥವರು ಆತಂಕಕ್ಕೊಳಗಾಗಿ ಮಾರಾಟಕ್ಕೆ ಮುಂದಾದರು.

Next Article