For the best experience, open
https://m.samyuktakarnataka.in
on your mobile browser.

ಸಂಜುಗೆ ಕೋರ್ಟ್ ಮುಕ್ತಿ

01:45 PM Jan 13, 2025 IST | Samyukta Karnataka
ಸಂಜುಗೆ ಕೋರ್ಟ್ ಮುಕ್ತಿ

ಎಲ್ಲಾ ಅಂದುಕೊಂಡಂತೆ ಆಗಿದ್ದರೆ 'ಸಂಜು ವೆಡ್ಸ್ ಗೀತಾ 2' ಜ.10ಕ್ಕೆ ತೆರೆಕಾಣಬೇಕಿತ್ತು. ಆದರೆ ತೆಲುಗು ಚಿತ್ರದ ನಿರ್ಮಾಪಕರೊಬ್ಬರು ಸಂಜು… ಬಿಡುಗಡೆಯಾಗದಂತೆ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರಿ೦ದ ಸಿನಿಮಾ ಬಿಡುಗಡೆಯಾಗಲಿಲ್ಲ. ಇದೀಗ ಕೋರ್ಟ್‌ನಲ್ಲಿ ನಿರ್ಮಾಪಕ ಛಲವಾದಿ ಕುಮಾರ್ ನಾಲ್ಕೂವರೆ ಕೋಟಿ ಮೊತ್ತದ ಆಸ್ತಿ ಪತ್ರ ನೀಡಿ ಜಾಮೀನು ಪಡೆದುಕೊಂಡಿದ್ದಾರೆ. ಹೀಗಾಗಿ ಜ.17 ರಂದು ಸಂಜು-ಗೀತಾ' ದರ್ಶನವಾಗಲಿದೆ. ಬರೋಬ್ಬರಿ 16 ರಿಂದ 17 ಕೋಟಿ ಬಂಡವಾಳ ಹೂಡಿ ಈ ಸಿನಿಮಾ ನಿರ್ಮಿಸಲಾಗಿದೆ ಅನ್ನೋದು ಚಿತ್ರತಂಡದ ಮಾತು, ಸಂಜು ವೆಡ್ಸ್ ಗೀತಾದಲ್ಲಿ ಪ್ರೇಮಕಥೆ ಜೊತೆ ಹೆಣ್ಣಿನ ಮೇಲೆ ನಡೆಯುವ ಅನಾಚಾರ, ಲೈಂಗಿಕ ದೌರ್ಜನ್ಯಗಳ ಬಗ್ಗೆಯೂ ನಿರ್ದೇಶಕ ನಾಗಶೇಖರ್ ಬೆಳಕು ಚೆಲ್ಲಿದ್ದರು. ಪಾರ್ಟ್ ನಲ್ಲಿಯೂ ಅವರ ಕಳಕಳಿ ಮುಂದುವರಿದಿದೆ. ಈ ಬಾರಿ ಲವ್ ಸ್ಟೋರಿ ಜೊತೆ ಜೊತೆಗೆ ರೇಷ್ಮೆ ಬೆಳೆಗಾರರ ಸಂಕಷ್ಟ, ವಿಷಾದಗಳ ಬಗ್ಗೆ ವಿವರಿಸಲಾಗಿದೆಯಂತೆ. ಶಿಡ್ಲಘಟ್ಟದಿಂದ ಶುರುವಾಗಿ ಸಿಟ್ಟರ್ಲ್ಯಾಂಡ್‌ ವರೆಗೂ ಕಥೆಯ ಹರಿವು ಹರಿದಿದೆ ಎನ್ನುತ್ತಾರೆ ನಿರ್ದೇಶಕ.
ಸಿನಿ
ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಈ ಚಿತ್ರದ ನಾಯಕ ನಾಯಕಿ, 'ಬಹುತೇಕ ಇನ್ನೂರು ಚಿತ್ರಮಂದಿರಗಳಲ್ಲಿ ಸಂಜು ಪ್ರದರ್ಶನ ಕಾಣುತ್ತಿದ್ದು, ಯುಎಸ್ಎಯಲ್ಲಿ 31ಕ್ಕೂ ಹೆಚ್ಚು ಸ್ಟೀನ್‌ಗಳಲ್ಲಿ ಸಂಜು ವೆಡ್ಸ್ ಗೀತಾ 2 ರಿಲೀಸ್ ಮಾಡಿಸುತ್ತಿದ್ದೇವೆ' ಎಂದರು ಕಿಟ್ಟಿ
ಸಂಜು ವೆಡ್ಸ್ ಗೀತಾ ಸಿನಿಮಾಗೆ ಹಾಡು ಮಾಡಿಕೊಡುವ ಅವಕಾಶ ಬಂದದ್ದು ಸುಯೋಗವೇ ಸರಿ ಎನ್ನುತ್ತಾರೆ ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್. ಛಲವಾದಿ ಕುಮಾರ್ ಈ ಚಿತ್ರದ ನಿರ್ಮಾಪಕ.