ಸಂಡೂರಲ್ಲಿ ಬಿಜೆಪಿ ಬಾವುಟ ಹಾರಿಸ್ತೇವೆ
ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣ ಇದೆ. ಪತಿ ಸಂಸದ ಇದ್ದಾರೆ, ಇದೀಗ ಮತ್ತೆ ಪತ್ನಿಗೆ ಟೆಕೆಟ್ ಕೊಟ್ಟಿದ್ದಾರೆ.
ಬಳ್ಳಾರಿ: ಸಂಡೂರು ಉಪ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಬಾವುಟ ಹಾರಿಸುತ್ತೇವೆ ಎಂದು ಮಾಜಿ ಸಚಿವ ಬೈರತಿ ಬಸವರಾಜ ಹೇಳಿದರು.
ಬಳ್ಳಾರಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸಂಡೂರು ಕ್ಷೇತ್ರದಲ್ಲಿ ಪ್ರಚಾರ ಮಾಡ್ತಿದ್ದೇನೆ. ಹಿಂದುಳಿದ ವರ್ಗಗಳ ಮುಖಂಡರ ಭೇಟಿ ಮಾಡಿ, ಮನವೊಲಿಸಿ ಬಿಜೆಪಿ ಬೆಂಬಲಿಸುವಂತೆ ಕೇಳಲಾಗಿದೆ. ಜನಾರ್ದನ ರೆಡ್ಡಿ ಸೇರಿದಂತೆ ಬಹುತೇಕ ನಾಯಕರು ಪ್ರಚಾರ ಮಾಡ್ತಿದ್ದಾರೆ. ಆರೇಳು ಗ್ರಾಮಗಳಿಗೆ ಭೇಟಿ ಕೊಟ್ಟಾಗ ಬಿಜೆಪಿ ಬಹುಮತದಿಂದ ಗೆಲ್ತಾರೆ ಅಂತಾ ಅನ್ನಿಸ್ತಿದೆ. ಇನ್ನೂ ಮೂರು ದಿನ ನಾನು ಪ್ರಚಾರ ಮಾಡ್ತೇನೆ. ಮೂಡಾ ಹಗರಣ ದೊಡ್ಡ ಮಟ್ಟದಲ್ಲಿ ನಡೆದಿದೆ ಈ ಬಗ್ಗೆ ತನಿಖೆ ನಡೆಯುತ್ತಿದೆ. ವಾಲ್ಮೀಕಿ ನಿಗಮದ ಹಣ ಲೋಕಸಭೆ ಚುನಾವಣೆಯಲ್ಲಿ ಬಳಕೆಯಾಗಿದೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಇಡಿ ವರದಿಯನ್ನೂ ಕೊಟ್ಟಿದೆ. ಬಳ್ಳಾರಿ ಸಂಸದರನ್ನ ಅಮಾನತ್ತು ಮಾಡಬೇಕು ಎಂದು ಒತ್ತಾಯ ಮಾಡ್ತಿದ್ದೇವೆ ಎಂದ ಬೈರತಿ ಬಸವರಾಜ, ಪ್ರಾಮಾಣಿಕ ಅಭ್ಯರ್ಥಿ ಬಂಗಾರು ಹನುಮಂತ ಗೆಲ್ಲಿಸಬೇಕು ಎಂದು ಸಂಡೂರು ಜನರಲ್ಲಿ ಮನವಿ ಮಾಡುತ್ತಿದ್ದೇವೆ. ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕಾರಣ ಇದೆ. ಪತಿ ಸಂಸದ ಇದ್ದಾರೆ, ಇದೀಗ ಮತ್ತೆ ಪತ್ನಿಗೆ ಟೆಕೆಟ್ ಕೊಟ್ಟಿದ್ದಾರೆ. ಹೀಗಾಗಿ ಈ ಚುನಾವಣೆಯಲ್ಲಿ ಗೆಲ್ತೇವೆ. ಯೋಗೇಶ್ವರ್ ಅವರ ಮನಸಲ್ಲಿ ಬೇರೆ ಪಕ್ಷಕ್ಕೆ ಹೋಗುವ ತೀರ್ಮಾನ ಮಾಡಿದ್ರು. ಹೀಗಾಗಿ ಅವರು ಕಾಂಗ್ರೆಸ್ ಗೆ ಹೋಗಿದ್ದಾರೆ. ನಮ್ಮ ನಾಯಕರು ಅವರನ್ನ ಉಳಿಸಿಕೊಳ್ಳೋದಕ್ಕೆ ಪ್ರಯತ್ನ ಮಾಡಿದ್ರು. ಸೋತ್ರು ಅವರನ್ನು ಎಂಎಲ್ಸಿ ಮಾಡಲಾಗಿತ್ತು. ಆದರೆ ಅವರು ಈ ಮೊದಲೇ ಕಾಂಗ್ರೆಸ್ ಗೆ ಹೋಗೋ ತೀರ್ಮಾನ ಮಾಡಿದ್ರು ಅನ್ನಿಸ್ತಿದೆ. ಅಲ್ಲಿನ ಜನರು ಎಲ್ಲವನ್ನೂ ತೀರ್ಮಾನ ಮಾಡ್ತಾರೆ ಎಂದರು.