ಸಂಯುಕ್ತ ಕರ್ನಾಟಕದ ಯುಗಾದಿ ವಿಶೇಷಾಂಕ ಬಿಡುಗಡೆ
11:08 PM Apr 01, 2024 IST | Samyukta Karnataka
ಬೆಂಗಳೂರು: ಸಂಯುಕ್ತ ಕರ್ನಾಟಕ ಕಚೇರಿಯಲ್ಲಿ ಖ್ಯಾತ ಚಿತ್ರನಟ, ನಿರ್ದೇಶಕ ರಮೇಶ್ ಅರವಿಂದ್ ಅವರು ಸಂಯುಕ್ತ ಕರ್ನಾಟಕದ ಯುಗಾದಿ ವಿಶೇಷಾಂಕವನ್ನು ಸೋಮವಾರ ಬಿಡುಗಡೆಗೊಳಿಸಿದರು. ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷ, ಮೇಲ್ಮನೆ ಸದಸ್ಯರಾದ ಯು.ಬಿ.ವೆಂಕಟೇಶ್, ಧರ್ಮದರ್ಶಿಗಳಾದ ಅಶೋಕ್ ಹಾರನಹಳ್ಳಿ, ಗುರುರಾಜ ಕರಜಗಿ, ಕಾರ್ಯದರ್ಶಿ ಹರಿ ಚನ್ನಕೇಶವ, ಸಮೂಹ ಸಂಪಾದಕ ಹುಣಸವಾಡಿ ರಾಜನ್, ಸಂಪಾದಕ ವಸಂತ ನಾಡಿಗೇರ, ಮುಖ್ಯ ಹಣಕಾಸು ಅಧಿಕಾರಿ ಬಾಲಕೃಷ್ಣ, ಕರ್ಮವೀರ ಸಂಪಾದಕ ಜಿ. ಅನಿಲಕುಮಾರ್ ಉಪಸ್ಥಿತರಿದ್ದರು.