ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸಂವಿಧಾನ ತಿದ್ದುಪಡಿಗೆ ೪೦೦ಕ್ಕೂ ಹೆಚ್ಚು ಸ್ಥಾನದ ಅವಶ್ಯಕತೆ

09:27 PM Mar 10, 2024 IST | Samyukta Karnataka

ಸಿದ್ದಾಪುರ: ಕಾಂಗ್ರೆಸ್‌ನವರು ಸಂವಿಧಾನದಲ್ಲಿ ಬೇಡದ್ದನ್ನೆಲ್ಲ ತುರುಕಿದ್ದು ಅದರ ತಿದ್ದುಪಡಿ ಮಾಡಬೇಕಿದೆ. ಇದಕ್ಕಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ೪೦೦ಕ್ಕಿಂತಲೂ ಹೆಚ್ಚು ಸ್ಥಾನವನ್ನು ನೀಡಿ ಗೆಲ್ಲಿಸಬೇಕಾಗಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.ಅವರು ಶನಿವಾರ ತಾಲೂಕಿನ ಹಲಗೇರಿಯಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಸಿಎಎ ಕಾನೂನು ಲೋಕಸಭೆಯಲ್ಲಿ ಪಾಸ್ ಆಯಿತು. ರಾಜ್ಯಸಭೆಯಲ್ಲಿ ಅಲ್ಪಮತದಿಂದ ಪಾಸ್ ಆಯಿತು. ಆದರೆ ಕೆಲವು ರಾಜ್ಯಗಳು ಇದನ್ನು ಜಾರಿಗೆ ತರಲು ಮೀನಮೇಷ ಎಣಿಸುತ್ತಿವೆ. ಆದ್ದರಿಂದ ಕನಿಷ್ಠ ೨೦ ರಾಜ್ಯದಲ್ಲಾದರೂ ನಾವು ಅಧಿಕಾರ ಪಡೆಯಬೇಕಿದೆ. ಸಾವಿರ ವರ್ಷದಿಂದ ನಮ್ಮ ಹಿಂದೂ ಸಮಾಜವನ್ನು ತುಳಿಯಲಾಗುತ್ತಿದೆ. ಈಗ ನಾವು ಉತ್ತರ ಕೊಡುವ ಸ್ಥಾನಕ್ಕೆ ಬಂದಿದ್ದೇವೆ. ಜಗತ್ತು ನಮ್ಮ ಕಡೆಗೆ ತಿರುಗಿ ನೋಡುತ್ತಿದೆ. ಇದಕ್ಕೆ ಕಾರಣ ಮೋದಿ ನೇತೃತ್ವದ ಬಿಜೆಪಿ ಸರಕಾರ ಎಂದರು.

ಜಗತ್ತಿಗೆ ಇಂದು ಭಾರತ ಅನಿವಾರ್ಯವಾಗಿದೆ. ಅವರಿಗೆ ನಮ್ಮ ಮೇಲೆ ಪ್ರೀತಿ ಇಲ್ಲ, ಆದರೆ ಭಯ ಇದೆ. ಇದರಿಂದ ಅವರು ನಮ್ಮನ್ನು ಒಪ್ಪುತ್ತಿದ್ದಾರೆ. ಇನ್ನೂ ಒಂದೆರಡು ಶತಮಾನಗಳ ಕಾಲ ಅವರು ನಮ್ಮನ್ನು ಒಪ್ಪುವಂತೆ ಮಾಡಲು ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು. ಎಂದು ಹೇಳಿದರು.

Next Article