For the best experience, open
https://m.samyuktakarnataka.in
on your mobile browser.

ಸಂಸತ್ತಿನ ಬಜೆಟ್ ಅಧಿವೇಶನ: ವಿಪಕ್ಷಗಳಿಗೆ ಸಲಹೆ ನೀಡಿದ ಮೋದಿ

11:32 AM Jan 31, 2024 IST | Samyukta Karnataka
ಸಂಸತ್ತಿನ ಬಜೆಟ್ ಅಧಿವೇಶನ  ವಿಪಕ್ಷಗಳಿಗೆ ಸಲಹೆ ನೀಡಿದ ಮೋದಿ

ನವ ದೆಹಲಿ: ಇಂದಿನಿಂದ ಸಂಸತ್ತಿನಲ್ಲಿ ಮಧ್ಯಂತರ ಬಜೆಟ್​​​​ ಅಧಿವೇಶನ ನಡೆಯಲಿದ್ದು, ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು
ಕಳೆದ 10 ವರ್ಷಗಳಲ್ಲಿ ಸಂಸದರು ಸಂಸತ್ತಿನಲ್ಲಿ ತಮಗಿಷ್ಟವಾದದ್ದನ್ನು ಮಾಡಿದ್ದಾರೆ. ಇವರನ್ನು ಅಪರಾಧಿಗಳು ಎಂದು ನಾನು ಕರೆಯಬೇಕೆ? ಪ್ರಜಾಪ್ರಭುತ್ವದ ಮರ್ಯಾದೆ ಕಳೆದಿದ್ದಾರೆ ಇದು ಅವರ ಅಭ್ಯಾಸವಾಗಿರಬಹುದು, ಆದರೆ, ಒಂದು ಬಾರಿ ಸಂಸದರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮುಂದಿನ ದಿನದಲ್ಲಿ ನಿಮ್ಮ ಕ್ಷೇತ್ರದಲ್ಲಿ ಈ ಬಗ್ಗೆ ಪ್ರಶ್ನೆ ಮಾಡಬಹುದು ಎಂದು ಹೇಳಿದರು.
ಅಧಿವೇಶನದಲ್ಲಿ ವಿರೋಧ ಪಕ್ಷಗಳು ಧ್ವನಿ ಎತ್ತಿದೆ, ಆದರೆ, ನಮ್ಮನ್ನು ವಿರೋಧಿಸಬೇಕು ಎಂಬ ಕಾರಣಕ್ಕೆ ವಿರೋಧಿಸಬೇಡಿ. ಅದು ಸಂಸತ್ತಿನ ಸಮಯಕ್ಕೆ ಹಾಗೂ ಚರ್ಚೆಗೆ ತೊಂದರೆ ಮಾಡಬಹುದು. ಈ ದೇಶಕ್ಕೆ ಅಥವಾ ನಮಗೆ ಬೆಳಕು ಚೆಲ್ಲುವವರನ್ನು ಆತ್ಮೀಯವಾಗಿ ಸ್ಮರಿಸಲಾಗುವುದು. ಸಂಸತ್ತಿನಲ್ಲಿ ವಿಷಾದಿಸುವ ಅವಕಾಶವಿದೆ. ಇದನ್ನು ಬಿಡಬೇಡಿ ಎಂದು ತಿಳಿಸಿದರು.
ಜನವರಿ 31 ರಂದು ಆರಂಭ ಆಗಿರುವ ಸಂಸತ್ ಬಜೆಟ್ ಅಧಿವೇಶನ, ಫೆಬ್ರುವರಿ 9ರವರೆಗೆ ನಡೆಯಲಿದೆ. ಇನ್ನು ಫೆಬ್ರುವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ.