For the best experience, open
https://m.samyuktakarnataka.in
on your mobile browser.

`ಸಕಲ ಜೀವಜಾಲದ ಪ್ರಕೃತಿಗೆ ದೇವರೇ ಪ್ರೇರಣೆ'

04:04 AM Dec 04, 2024 IST | Samyukta Karnataka
 ಸಕಲ ಜೀವಜಾಲದ ಪ್ರಕೃತಿಗೆ ದೇವರೇ ಪ್ರೇರಣೆ

ಧನ್ಯತೆಯ ಸಂಕೇತ ಪುಣ್ಯಗಳ ಪ್ರತಿಪಾಕದ ಒಂದು ನಿದರ್ಶನ. ಈ ದೃಷ್ಟಿಯಲ್ಲಿ ಶ್ರೀ ಕೃಷ್ಣ ಪರಮಾತ್ಮನ ತುಟಿ, ನೇರವಾಗಿ ಆ ತುಟಿಯ ಸಂಪರ್ಕವಾಗುವಂತಹ ಕೊಳಲು ಅಥವಾ ವೇಣು ಏನು ಮಾಡಿದೆ? ಸಸ್ಯಗಳು ಎಲ್ಲ ವೃಕ್ಷಗಳಿಗೂ ಜೀವವಿದೆ. ಆದರೆ ಆ ಬಿದುರು, ಅದೊಂದು ಜೀವ ಅದನ್ನು ಕತ್ತರಿಸಿ ಮಾಡಿದ ಕೊಳಲಿದು. ಹಾಗಾದರೆ ಇಲ್ಲಿ ಇದ್ದದ್ದು ಯಾರು?
ಯಾರು ಇಲ್ಲ ಯಾರಿಗೂ ಸಾಧ್ಯವಿಲ್ಲ. ಅಂದರೂ ಕೂಡ ಆ ಶ್ರೀಕೃಷ್ಣ ಪರಮಾತ್ಮನ ತುಟಿಯ ಚುಂಬನದ ಸೌಭಾಗ್ಯ ಪಡೆಯುವ ವ್ಯಕ್ತಿತ್ವ, ಯೋಗ್ಯತೆ, ಭಾಗ್ಯ, ಸೌಭಾಗ್ಯ, ಸಮೃದ್ಧಿ ಶ್ರೀ ಮಹಾಲಕ್ಷ್ಮಿಯ ಹೊರತು ಇನ್ಯಾರಿಗೂ ಇಲ್ಲ. ಇದನ್ನರಿತ ಶ್ರೀಮಹಾಲಕ್ಷ್ಮಿಯೂ ಶ್ರೀಕೃಷ್ಣ ಕೈಯಲ್ಲಿ ಕೊಳಲು ತೆಗೆದುಕೊಂಡ ಕ್ಷಣವೇ ತನ್ನ ವಿಶೇಷ ಸನ್ನಿಧಾನವನ್ನು ಆ ಕೊಳಲಿನಲ್ಲಿ ಇಟ್ಟಿದ್ದಾಳೆ. ಲಕ್ಷ್ಮೀ ಎಲ್ಲ ಕಡೆ ಇದ್ದಾಳೆ. ಅವಳು ನಿತ್ಯಮುಕ್ತಳು. ಆ ಶ್ರೀಕೃಷ್ಣ ಚುಂಬನದ ಸೌಭಾಗ್ಯವನ್ನು ಅನುಭವಿಸಲು ಇನ್ಯಾರಿಗೂ ಯೋಗ್ಯತೆ ಇಲ್ಲ.
ಯೋಗ್ಯತೆಯನ್ನು ಶ್ರೀಮಹಾಲಕ್ಷ್ಮಿ ಮಾತ್ರ ಕೊಟ್ಟಿದ್ದಾನೆ ಅನ್ನೋದಕ್ಕಾಗಿ ಶ್ರೀಲಕ್ಷ್ಮಿದೇವಿ ತಾನು ಅಲ್ಲಿ ಸನ್ನಿಹಿತಳಾಗಿದ್ದಾಳೆ. ಇನ್ನಿತರ ಪರಮಾತ್ಮನ ಆಭರಣಗಳಲ್ಲಿ ಬೇರೆ ಬೇರೆ ದೇವತೆಗಳು ಸನ್ನಿಹಿತವಾಗಿದ್ದರಂತೆ. ಭಗವಂತನ ಎಲ್ಲ ಆಭರಣಗಳಲ್ಲಿ ಬ್ರಹ್ಮಾದಿ ದೇವತೆಗಳೆಲ್ಲ ಸನ್ನಿಹಿತರಾಗಿ ಭಗವಂತನ ಸೇವೆ ಮಾಡುತ್ತಾರೆ. ದೇವರಿಗೆ ಇವೆಲ್ಲ ದೇವತೆಗಳಿಂದ ಶೋಭೆಯಲ್ಲ. ಇವೆಲ್ಲ ದೇವತೆಗಳು ದೇವರ ಮೈ ಏರಿದರೆ ಶೋಭೆ. ಎಂಬ ಆ ರೀತಿಯ ಚಿಂತನೆಯಿಂದ ನಾವು ತಿಳಿಯಬೇಕು. ಲಕ್ಷ್ಮಿದೇವಿ ಒಂದು ನುಡಿ ನುಡಿಯಬೇಕೆಂದರೆ ದೇವರು ಓದಿದರೆ ಮಾತ್ರ ಸಾಧ್ಯ ಎಂದು ತಿಳಿಸುವುದಕ್ಕೆ ಅಲ್ಲಿ ಬಂದು ಶ್ರೀಲಕ್ಷ್ಮಿ ಕುಳಿತುಕೊಂಡಳು.
ಇಡೀ ಜಗತ್ತಿನ ಆ ಒಡತಿಯಾದ ಆ ಮಹಾಲಕ್ಷ್ಮಿಯ ಕೊಳಲಿನಲ್ಲಿ ತಾನು ಬಂದು ತನ್ನನ್ನು ದೇವರು ಉರಿದಾಗ ತಾನು ಶಬ್ದ ಮಾಡಿ ನನ್ನ ಶಬ್ದ ಇದು ಭಗವಂತನ ಅಧೀನ ಎಂದು ತೋರಿಸಿಕೊಟ್ಟಳು. ಇಡೀ ಜಗತ್ತಿಗೆ ಒಡತಿಯಾದ ಲಕ್ಷ್ಮಿಯ ಸ್ಥಿತಿಗತಿಗಳೇ ಹೀಗಿದ್ದರೆ ಇನ್ನು ಪಾಮರರ ಪಾಡೇನು?
ಏನು ಮಾಡಿದರು ದೇವರ ಪ್ರೇರಣೆಯಿಂದ ಮಾಡಬೇಕು. ಎನ್ನುವುದಕ್ಕೋಸ್ಕರ ತಾನೇ ದೇವರು ಅಲ್ಲಿ ಊದಿದಾಗ ಕೊಳಲು ಹೇಗೆ ಶಬ್ದ ಮಾಡದೆ ಕೂಡಲು ಸಾಧ್ಯವಿಲ್ಲ. ಹಾಗೆ ಯೋಗಿಗಳ ಜ್ಞಾನಿಗಳ ಋಷಿಗಳ ಪ್ರೇರಣೆಯೇ ಭಗವಂತ. ಆ ಮೂಲಕ ಎಲ್ಲದೆ ಜೀವಗಳಲ್ಲು ಪ್ರೇರಣೆ ಮಾಡಿದಂತಾಯಿತು. ಹೀಗಾಗಿ ಜಗತ್ತಿನ ಎಲ್ಲಾ ಜೀವರಾಶಿಗಳಲ್ಲಿ ಒಂದು ರೀತಿಯ ಚಲನವನ್ನು ಪ್ರಾರಂಭವಾಯಿತು. ಕೆಲವರು ಊದಿದರೂ ಕೆಲವರು ಹಾಡಿದರು ಕೆಲವರು ನರ್ತನ ಮಾಡಿದರು. ಅಂತೂ ಇಲಿ ಜಗತ್ತು ಅವಕ್ಕಾಗಿ ಭಗವಂತನ ಅದ್ಭುತವಾದ ಆ ವೇಣನಾದವನ್ನು ಕೇಳಿದೆ. ಅದು ಸರ್ವತೋಮುಖನಾದ ಆ ಭಗವಂತನೇ ನಮ್ಮ ಮುಖದಲ್ಲಿ ಇದ್ದು ನಿಂತು ನುಡಿದು ನುಡಿಸಿ ನುಡಿಸಿದ್ದು.
ಆ ರೀತಿಯ ಆ ಭಗವಂತನ ಪ್ರಚೋದನೆ ಪ್ರೇರಣೆ ನಮ್ಮ ಜೀವನದ ಪ್ರತಿಯೊಂದು ಹಂತದಲ್ಲಿದೆ ಎನ್ನುವ ಅನುಸಂಧಾನ ನಮಗೆ ನಿಮಗೆ ಯಾವಾಗಲೂ ಇರಬೇಕು ಎನ್ನುವುದಕ್ಕೆ ಅಂದು ಕೊಳಲಿನಲ್ಲಿ ಲಕ್ಷ್ಮೀದೇವಿ ತಾನು ಪ್ರವೇಶ ಮಾಡಿ ಧ್ವನಿಯನ್ನು ಮಾಡಿದ್ದು ಕೊಳಲಿನಿಂದ ಧ್ವನಿ ಮಾಡಿದರೆ ಮಾತ್ರ ದೇವರು ಓದಿದ್ದು ಎಂದು ತಿಳಿಯಬೇಡಿ.