ಸಚಿನ್ ನೇತೃತ್ವದಲ್ಲಿ ನೂತನ ಕ್ರಿಕೆಟ್ ಲೀಗ್
ನವದೆಹಲಿ: ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ISPಐ) ತನ್ನ ಎಲ್ಲಾ ಆರು ಫ್ರಾಂಚೈಸಿಗಳ ಸಹ ಮಾಲೀಕರ ಹೆಸರುಗಳನ್ನು ಬಹಿರಂಗಪಡಿಸಿದೆ. ಮುಂಬೈನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವಾರು ಪ್ರಮುಖ ಐಎಸ್ಪಿಎಲ್ ಕೋರ್ ಕಮಿಟಿ ಸದಸ್ಯರು ಭಾಗವಹಿಸಿದ್ದರು. ಅದರಲ್ಲಿ ಪ್ರಮುಖವಾಗಿ ಗಮನ ಸೆಳೆದಿದ್ದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಅವರಲ್ಲದೆ ಆಶಿಶ್ ಶೆಲಾರ್, ಅಮೋಲ್ ಕಾಳೆ, ಸೂರಜ್ ಸಮತ್ ಮತ್ತು ಭಾರತ ಕ್ರಿಕೆಟ್ ತಂಡದ ದಂತಕಥೆ ರವಿ ಶಾಸ್ತ್ರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹೈದರಾಬಾದ್, ಮುಂಬೈ, ಬೆಂಗಳೂರು, ಚೆನ್ನೈ, ಕೋಲ್ಕತಾ ಮತ್ತು ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) ಆರು ಈ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ನ ತಂಡಗಳಾಗಿವೆ.
ರಾಮ್ ಚರಣ್ (ಹೈದರಾಬಾದ್), ಅಮಿತಾಭ್ ಬಚ್ಚನ್ (ಮುಂಬೈ), ಹೃತಿಕ್ ರೋಷನ್ (ಬೆಂಗಳೂರು), ಸೂರ್ಯ (ಚೆನ್ನೈ), ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ (ಕೋಲ್ಕತ್ತಾ) ಮತ್ತು ಅಕ್ಷಯ್ ಕುಮಾರ್ (ಶ್ರೀನಗರ) ಸೇರಿದಂತೆ ಭಾರತದ ಮನರಂಜನಾ ಉದ್ಯಮದ ಕೆಲವು ದೊಡ್ಡ ಸೂಪರ್ ಸ್ಟಾರ್ಗಳು ಈ ಎಲ್ಲಾ ತಂಡಗಳ ಮಾಲೀಕರಾಗಿದ್ದಾರೆ.
ಆರು ತಂಡಗಳ ಸಹ ಮಾಲೀಕರು
೧. ಎಸ್ಜಿ ಸ್ಪೋರ್ಟ್ಸ್ (ಶ್ರೀನಗರ): ಸಂಜಯ್ ಗುಪ್ತಾ ಮತ್ತು ರೋಹನ್ ಗುಪ್ತಾ, ೨. ಕೆವಿಎನ್ ಎಂಟರ್ಪ್ರೈಸಸ್ ಎಲ್ಎಲ್ಪಿ (ಬೆಂಗಳೂರು): ವೆಂಕಟ್ ಕೆ ನಾರಾಯಣ ೩. ಪಾರ್ಥ್ ಲಿಮಿಟೆಡ್ (ಮುಂಬೈ): ನೀತಿ ಅಗರ್ವಾಲ್, ೪. ಐಎನ್ಆರ್ ಹೋಲ್ಡಿಂಗ್ಸ್ (ಹೈದರಾಬಾದ್): ಇರ್ಫಾನ್ ರಜಾಕ್, ೫. (ಚೆನ್ನೈ): ರಾಜ್ದೀಪ್ಕುಮಾರ್ ಗುಪ್ತಾ ಮತ್ತು ಸಂದೀಪ್ಕುಮಾರ್ ಗುಪ್ತಾ, ೬. ಆಸ್ಪೆಕ್ಟ್ ಗ್ಲೋಬಲ್ ವೆಂಚರ್ಸ್ ಪ್ರೈ. ಲಿಮಿಟೆಡ್ (ಕೋಲ್ಕತ್ತಾ): ಅಕ್ಷ ಕಾಂಬೋಜ್
ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಪೋಷಿಸುವ ಉದ್ದೇಶದೊಂದಿಗೆ ಮಾಡಿರುವ ಸಾಕಾರಗೊಳಿಸುವಲ್ಲಿ ಸಹ ಮಾಲೀಕರು ದೊಡ್ಡ ಪಾತ್ರವಹಿಸುತ್ತಾರೆ ಎಂದು ಐಎಸ್ಪಿಎಲ್ನ ಹೂಡಿಕೆದಾರ ಮತ್ತು ಕೋರ್ ಕಮಿಟಿ ಸದಸ್ಯ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ಐಎಸ್ಪಿಎಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿನ್ ತೆಂಡೂಲ್ಕರ್ ಟೆನಿಸ್ ಚೆಂಡಿನೊಂದಿಗೆ ವೃತ್ತಿಪರ ಲೀಗ್ ಸ್ವರೂಪದ ಮೂಲಕ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮತ್ತು ಹುಡುಕುವ ಐಎಸ್ಪಿಎಲ್ ಪ್ರಮುಖ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಸಹ ಮಾಲೀಕರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಆಟದೊಂದಿಗಿನ ಈ ಹೊಸ ಒಡನಾಟವನ್ನು ಪ್ರಾರಂಭಿಸುತ್ತಿರುವ ಅವರಿಗೆ ನಾನು ಶುಭ ಹಾರೈಸುತ್ತೇನೆ ಎಂದು ಹೇಳಿದ್ದಾರೆ.
ಟಿ೧೦ ಸ್ವರೂಪದ ಈ ಲೀಗ್ನ ಉದ್ಘಾಟನಾ ಋತು ಮಾರ್ಚ್ನಲ್ಲಿ ಪ್ರಾರಂಭವಾಗಲಿದ್ದು, ಪಂದ್ಯಗಳು ಮುಂಬೈನಲ್ಲಿ ನಡೆಯಲಿವೆ. ಪಂದ್ಯಾವಳಿಯು ವೃತ್ತಿಪರ ಲೀಗ್ನ ಮಾದರಿಯನ್ನೇ ಅನುಸರಿಸುತ್ತದೆ.