ಸಚಿವ ಖರ್ಗೆ ಅವರಿಂದ ಪ್ರಧಾನಿಗೆ ಅವಮಾನ: ಸಂಸದ ಕಿಡಿ
02:08 PM Jan 19, 2024 IST | Samyukta Karnataka
ಕಲಬುರಗಿ: ರಾಜ್ಯದ ಶಿಷ್ಟಾಚಾರದಂತೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೆ ಅವಮಾನ ಮಾಡಿದ್ದಾರೆ ಎಂದು ಸಂಸದ ಡಾ. ಉಮೇಶ ಜಾಧವ ಕಿಡಿಕಾರಿದರು.
ನಗರ ಹೊರವಲಯದ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೀಳ್ಕೊಡುಗೆ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಳೆದ ೨೦೧೯ ರಲ್ಲಿಯೂ ಪ್ರಧಾನಿ ಮೋದಿ ಕಲಬುರಗಿಗೆ ಬಂದಾಗ ಆಗ ಸಹ ಅವಮಾನಿಸಿದರು. ಆಗಲೂ ಜಿಲ್ಲಾ ಉಸ್ತುವಾರಿ ಸಚಿವ ಖರ್ಗೆ ಅವರೇ ಆಗಿದ್ದರು. ಪಕ್ಕದ ರಾಯಚೂರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಬಂದು ಶಿಷ್ಟಾಚಾರ ಪಾಲಿಸಿದ್ದಾರೆ. ಹೀಗಾಗಿ ಪ್ರಧಾನಿ ಹುದ್ದೆಗೆ ಗೌರವ ಕೊಡಬೇಕಿತ್ತು ಎಂದರು. ನಮ್ಮ ಜೊತೆ ಒಂದು ನಿಮಿಷ ಕಾಲ ಚರ್ಚಿಸಿ, ಒಳ್ಳೆಯ ಕೆಲಸ ಮಾಡುವಂತೆ ಮಾರ್ಗದರ್ಶನ ಮಾಡಿದ್ದಾರೆ. ವೈದ್ಯರು ಇರುವುದರಿಂದ ಜನಪರ ಕೆಲಸ ಮಾಡಿ, ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ತಿಳಿಹೇಳಿದ್ದಾರೆ ಎಂದು ವಿವರಿಸಿದರು.