For the best experience, open
https://m.samyuktakarnataka.in
on your mobile browser.

ಸಚಿವ ಖರ್ಗೆ ತಮ್ಮ ಜವಾಬ್ದಾರಿ ಅರಿಯಲಿ

12:01 PM Dec 07, 2023 IST | Samyukta Karnataka
ಸಚಿವ ಖರ್ಗೆ ತಮ್ಮ ಜವಾಬ್ದಾರಿ ಅರಿಯಲಿ

ಬೆಳಗಾವಿ (ಸುವರ್ಣ ವಿಧಾನಸೌಧ): ಸಚಿವ ಪ್ರಿಯಾಂಕ ಖರ್ಗೆ ಜನಪರ ಇಲ್ಲ, ಜನರ ಭಾವನೆಗಳಿಗೆ ಗೌರವ‌ಕೊಡಲಿ, ಅವರ ವಯಸ್ಸು ಮತ್ತು ಜವಾಬ್ದಾರಿ ಅರಿತು ಕೆಲಸ ಮಾಡಲಿ ಎಂದು ಮಾಜಿ ಸಚಿವ ಸಿ.ಎನ್. ಅಶ್ವಥ್ ನಾರಾಯಣ ಟಾಂಗ್ ನೀಡಿದರು.
ವೀರ ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡಿರುವ ಬಗ್ಗೆ ಮೊಗಶಾಲೆಯಲ್ಲಿ ಗುರುವಾರ ಪ್ರತಿಕ್ರಿಯಿಸಿದ ಅವರು, ಕಲಬುರಗಿ ಜಿಲ್ಲೆಯ ಅಭಿವೃದ್ಧಿ ಪಡಿಸಲಿ, ಅಲ್ಲಿಯ ಜನರ ಪ್ರೀತಿ ವಿಶ್ವಾಸ ಗಳಿಸಲಿ ಎಂದು ಸಲಹೆ ನೀಡಿದರು.
ಅಗೌರವ ಹಾಗೂ ಗೊಂದಲ ಮೂಡಿಸುವ ಹೇಳಿಕೆ ನೀಡುವುದನ್ನು ನಿಲ್ಲಿಸಿ, ತಮ್ಮ ಇಲಾಖೆಯ ಕಾರ್ಯಭಾರ ಮಾಡಲಿ. ಅದರಿಂದ ಜನಪ್ರೀಯಗಳಿಸಲಿ ಎಂದರು.
ಎಸ್ ಇ ಪಿ ಅಧ್ಯಕ್ಷ ಯಾರು? ಎಲ್ಲಿವರು?
ರಾಜ್ಯದಲ್ಲಿ ಎನ್‌ಇಪಿ ಬದಲಾಗಿ ಎಸ್‌ಇಪಿ ಜಾರಿಗೆ ತರಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ, ಈ ಹಿಂದೆ ೧೯೬೮ ರಲ್ಲಿ ಪ್ರಥಮ ಎನ್‌ಇ‌ಪಿ ಜಾರಿಯಾದ ಬಳಿಕ ೧೯೭೮ ರಲ್ಲಿ ಎರಡನೇ ಎನ್‌ಇಪಿ ಜಾರಿಯಾಗಿದ್ದು, ಈಗ ಮೂರನೇ ಎನ್‌ಇಪಿ ಜಾರಿಗೆ ಮಾಡಲಾಗಿದೆ. ಆದರೆ ವಿನಾಕಾರಣ ಗೊಂದಲ, ಅಸ್ಪಷ್ಟ ಮೂಡಿಸುತ್ತಿದ್ದಾರೆ. ಈ ಬಗ್ಗೆ ಅವರಲ್ಲಿಯೇ ಗೊಂದಲವಿದೆ. ಹಾಗಾದರೆ ಎಸ್‌ಇಪಿ ಕಮೀಟಿ ಅಧ್ಯಕ್ಷರು ಉತ್ತರ ಭಾರತದವರನ್ನು ಮಾಡಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟ ಮಾಡದೆ ಹಿಂದಿನ ಎನ್‌ಇಪಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಸಿಎಂ ಮತ್ತು ಡಿಸಿಎಂ ವಿರುದ್ಧ ಗರಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ನೇತೃತ್ವದ ಸರ್ಕಾರ ಜನರ, ರೈತರ ಕಾಳಜಿ ಇಲ್ಲ, ಬರ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.