For the best experience, open
https://m.samyuktakarnataka.in
on your mobile browser.

ಸಚಿವ ಸಂಪುಟ ಸಭೆ: ಕೆಂಭಾವಿ ತಾಲೂಕು ಬೇಡಿಕೆಗೆ ಸಿಗುತ್ತಾ ಮನ್ನಣೆ..?

10:42 AM Sep 17, 2024 IST | Samyukta Karnataka
ಸಚಿವ ಸಂಪುಟ ಸಭೆ  ಕೆಂಭಾವಿ ತಾಲೂಕು ಬೇಡಿಕೆಗೆ ಸಿಗುತ್ತಾ ಮನ್ನಣೆ

ಯಾದಗಿರಿ: ದಶಕದ ನಂತರ ಕಲ್ಯಾಣ ಕರ್ನಾಟಕದ ಕಲಬುರಗಿ ನಗರದಲ್ಲಿ ಸಚಿವ ಸಂಪುಟ ಸಭೆ ಕಕ ಉತ್ಸಾಹ ದಿನದಂದೇ ನಡೆಯುತ್ತಿರುವುದರಿಂದ ಈ ಭಾಗದ ಹಲವು ಬೇಡಿಕೆಗಳಿಗೆ ಸ್ಪಂದನೆ ದೊರೆಯುವ ನಿರೀಕ್ಷೆ ಜನತೆಯಲ್ಲಿದೆ.

ಅದರಂತೆ ಜಿಲ್ಲೆಯ ಕೆಂಭಾವಿ ಪಟ್ಟಣವನ್ನು ತಾಲೂಕು ಪಟ್ಟಣವನ್ನಾಗಿ ಮೇಲ್ದರ್ಜೆಗೇರಿಸುವ ಬಹುದಿನಗಳ ಬೇಡಿಕೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿಂದೆ 2010 ರಲ್ಲಿ ಅಂದಿನ ಸಿಎಂ ಯಡಿಯೂರಪ್ಪ ಅವರು ಯಾದಗಿರಿ ಜಿಲ್ಲಾ ಕೇಂದ್ರ ಘೋಷಣೆ ಮಾಡಿದಂತೆ ಎಂದು ಸಿದ್ದರಾಮಯ್ಯ ಅವರು ಕೆಂಭಾವಿ ತಾಲೂಕು ಘೋಷಣೆ ಮಾಡುತ್ತಾರೆ ಎಂಬ ಆಶಾಭಾವನೆಯಲ್ಲಿ ಜನತೆ ಎದುರು ನೋಡುತ್ತಿದೆ.

ಯಾದಗಿರಿ ಜಿಲ್ಲೆಯ ಅತಿ ದೊಡ್ಡ ಹೋಬಳಿ ಕೇಂದ್ರವಾಗಿರುವ ಕೆಂಭಾವಿ ವಲಯದಲ್ಲಿ 1,15,000 ಜನಸಂಖ್ಯೆ ಹೊಂದಿದೆ. ಈ ಪಟ್ಟಣವನ್ನು ತಾಲೂಕ ಸ್ಥಳವನ್ನಾಗಿ ಮಾಡಬೇಕು ಎಂದು ಸುಮಾರು 4 ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ನ್ಯಾಯಾಲಯದ ಮೋರೆ ಕೂಡ ಹೋಗಿದ್ದು, ಅಲ್ಲಿಯೂ ಸಹಿತ ಇದನ್ನು ತಾಲೂಕೆಂದು ಪರಿಗಣಿಸಿ ಎಂದು ಸೂಚಿಸಿದೆ. ಈ ಪಟ್ಟಣವು ಎಲ್ಲಾ ಸವಲತ್ತು ಒಳಗೊಂಡಿದೆ. ಪುರಸಭೆ ಕೇಂದ್ರವಾದ ಕೆಂಭಾವಿ ತಾಲೂಕ ಕೇಂದ್ರವನ್ನಾಗಿ ಘೋಷಣೆ ಮಾಡದ ಪ್ರಯುಕ್ತ ನಮಗೆ ಅನ್ಯಾಯವಾಗುತ್ತಿದೆ . ಗ್ರಾಮೀಣ ಸೌಲಭ್ಯಗಳು ಎಲ್ಲಾ ಸ್ಥಗಿತಗೊಂಡಿವೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇಕಡ ಐದರಷ್ಟು ಮೀಸಲಾತಿ ಶಾಲೆ, ಸಿಇಟಿ ಎಲ್ಲಿ ನೇಮಕಾತಿಯಲ್ಲಿ ಇಲ್ಲಿನ ಜನತೆ ಈಗಾಗಲೇ ವಂಚಿತರಾಗಿದ್ದಾರೆ. ನಾಗರಿಕರು ಇದೇ ಕ್ಷೇತ್ರದವರು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರನ್ನು ಒತ್ತಾಯ ಮಾಡತ್ತಿದ್ದಾರೆ ಇದು ಈ ಪಟ್ಟಣವು ಕ್ಷೇತ್ರವನ್ನು ತಾಲೂಕ ಒಂದು ತಾಲೂಕ ಸುರಪುರ ಕ್ಷೇತ್ರ ಶಹಾಪುರ ಹೀಗಾಗಿ ಈ ವಲಯದ ಜನತೆಗೆ ಯಾವ ಪ್ರಮಾಣದಲ್ಲಿ ಅಭಿವೃದ್ಧಿಯಾಗಬೇಕು ಆ ಪ್ರಮಾಣದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಮೇಲಾಗಿ ಸಚಿವರು ಕೂಡ ಕ್ಯಾಬಿನೆಟದಲ್ಲಿ ಇದ್ದ ಪ್ರಯುಕ್ತ ಈ ಬಾರಿ ನಮ್ಮ ಕನಸು ನನಸಾಗಬಹುದು ಎನ್ನುವ ಸಣ್ಣ ನಂಬಿಕೆ ಇಲ್ಲಿನ ಜನತೆಯದಾಗಿದೆ.

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವರದಿ ತರಿಸಿಕೊಂಡಿದ್ದರು ಜಿಲ್ಲಾಧಿಕಾರಿಗಳು ಈ ಪಟ್ಟಣವು ತಾಲೂಕಾಗಲು ಎಲ್ಲಾ ಸೌಲಭ್ಯಗಳನ್ನು ಹೊಂದಿದೆ ಎಂದು ವರದಿ ಕೊಟ್ಟಿದೆ ಕಲ್ಯಾಣ ಕರ್ನಾಟಕದ ಭಾಗದ ಜನತೆಗೆ ಎಲ್ಲಾ ಸೌಲಭ್ಯಗಳು ಕೊಡುತ್ತೇವೆ ಎಂದು ಹೇಳುವ ಮುಖ್ಯಮಂತ್ರಿಗಳು. ಈ ಪಟ್ಟಣಕ್ಕಿಂತಲೂ ಕಡಿಮೆ ಜನಸಂಖ್ಯೆ ಇರುವ ಗ್ರಾಮ ಪಂಚಾಯತಿ ಕೇಂದ್ರ ಸ್ಥಳ ಹೊಂದಿದಂತ ಸುಮಾರು 10 ಕಡೆಗಳಲ್ಲಿ ತಾಲೂಕ ಕೇಂದ್ರಗಳನ್ನಾಗಿ ಘೋಷಣೆ ಮಾಡಿದ್ದೀರಿ ನಮ್ಮದು ಪುರಸಭೆ ಕೇಂದ್ರ ಸ್ಥಳ ವಾಗಿದೆ ತಾಲೂಕ ಕೇಂದ್ರವನ್ನಾಗಿ ಮಾಡಿ ಎಂದು ಇಲ್ಲಿಯ ಜನತೆಯ ಒತ್ತಾಸೆಗೆ ಮುಖ್ಯಮಂತ್ರಿಗಳು ಇಂದು ಕಲಬುರ್ಗಿಯಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಕೊಡುತ್ತಾರಾ ಅಥವಾ ಇಲ್ಲವಾ ಎಂದು ಇನ್ನೂ ಕೆಲ ಗಂಟೆಗಳಲ್ಲಿ ಗೊತ್ತಾಗಲಿದೆ.

Tags :