For the best experience, open
https://m.samyuktakarnataka.in
on your mobile browser.

ಸತೀಶ್ ಮುಖ್ಯಮಂತ್ರಿಯಾಗಲಿ, ಹರಕೆ ಹೊತ್ತ ಅಯ್ಯಪ್ಪ ಸ್ವಾಮಿ ಭಕ್ತ

05:24 PM Jan 13, 2025 IST | Samyukta Karnataka
ಸತೀಶ್ ಮುಖ್ಯಮಂತ್ರಿಯಾಗಲಿ  ಹರಕೆ ಹೊತ್ತ ಅಯ್ಯಪ್ಪ ಸ್ವಾಮಿ ಭಕ್ತ

ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ಅಭಿಮಾನಿಯೊಬ್ಬರು ಶಬರಿಮಲೆಯ ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತು ಎಲ್ಲರ ಗಮನ ಸೆಳೆದಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದ ಅಯ್ಯಪ್ಪ ಮಾಲಾಧಾರಿ ಸಂತೋಷ ಸಂಕಪಾಳೆ ಎಂಬುವರು ಅಯ್ಯಪ್ಪಸ್ವಾಮಿ ಮಾಲೆ ಧರಸಿ ಶಬರಿಮಲೈಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಎದುರು ಸಚಿವ ಸತೀಶ್ ಜಾರಕಿಹೊಳಿ ಅವರ ಭಾವಚಿತ್ರ ಹಿಡಿದು ಈ ವಿಶೇಷ ಹರಕೆ ಹೊತ್ತಿದ್ದಾರೆ.
ಮಕರ ಸಂಕ್ರಾಂತಿಯ ಮುನ್ನ ಶಬರಿ ಮಲೆಯ ಸ್ವಾಮಿ ಅಯ್ಯಪ್ಪನ ವೃತ ಆಚರಿಸುವ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಈ ಬಾರಿ ಕರದಂಟು ನಾಡಿನ ಅವರ ಅಭಿಮಾನಿ ವಿಶೇಷವಾಗಿ ಹರಕೆ ಹೊತ್ತಿದ್ದಾರೆ.
ಹಿಂದೆ ಸಚಿವ ಸತೀಶ್ ಜಾರಕಿಹೊಳಿ ಅವರ ಅಭಿಮಾನಿಗಳಿಂದ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಅಭಿಯಾನ ಪ್ರಾರಂಭಿಸಲಾಗಿತ್ತು. ಇದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಕೂಡಾ ಆಗಿತ್ತು. ಆದರೆ ಈಗ ಅಯ್ಯಪ್ಪ ಸ್ವಾಮಿಯ ಮಾಲಾಧಾರಿ ಸಂತೋಷ ಅವರು ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವರಿಗೆ ವಿನೂತನ ಹರಕೆ ಹೊತ್ತು ಎಲ್ಲರ ಗಮನ ಸೆಳೆದಿದ್ದಾರೆ.