For the best experience, open
https://m.samyuktakarnataka.in
on your mobile browser.

ಸಬ್ ಇನ್ಸ್ ಪೆಕ್ಟರ್ ಮೇಲೆ ಎಫ್ಐಆರ್

07:44 PM Feb 14, 2024 IST | Samyukta Karnataka
ಸಬ್ ಇನ್ಸ್ ಪೆಕ್ಟರ್ ಮೇಲೆ ಎಫ್ಐಆರ್

ಮಂಡ್ಯ: ಕ್ಷುಲ್ಲಕ ಕಾರಣಕ್ಕಾಗಿ ಮಹಿಳೆಯೊಬ್ಬರನ್ನು ಠಾಣೆಗೆ ಕರೆದೊಯ್ದು ಮಾರಣಂತಿಕವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಮಂಡ್ಯ ಪೂರ್ವ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಯ್ಯನಗೌಡ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.

ಹಸುಗಳನ್ನು ರಸ್ತೆಗೆ ಕಟ್ಟುತ್ತಾರೆ ಎಂದು ಠಾಣೆಗೆ ನನ್ನ ಮಗಳು ರೂಪ ಅವರನ್ನು ಕರೆತಂದು ಹಲ್ಲೆ ಮಾಡಿದ್ದಾರೆಂದು ಅವರ ತಾಯಿ ಗೌರಮ್ಮ ಸಬ್ ಇನ್ಸ್ಪೆಕ್ಟರ್ ಅಯ್ಯನಗೌಡ ಅವರ ಮೇಲೆ ಪೂರ್ವ ಠಾಣೆಯಲ್ಲಿ ದೂರು ನೀಡಿದ್ದು ಎಫ್ ಐ ಆರ್ ದಾಖಲಾದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಎಸ್ ಪಿ ಎನ್.ಯತೀಶ್ ಅವರನ್ನು ಅಮಾನತು ಮಾಡಿದ್ದಾರೆ.

ಕಳೆದ ರಾತ್ರಿ ಅಶೋಕನಗರದ ರೂಪ ಎಂಬ ಮಹಿಳೆಯನ್ನು ಠಾಣೆಗೆ ಕರದೊಯ್ದು ಅಯ್ಯನಗೌಡ ಅವರ ಮೇಲೆ ಮನಸೋ ಇಚ್ಛೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ರೂಪ ರವರ ಮೇಲೆ ದೌರ್ಜನ್ಯಾವೆಸಗಿರುವ ಅಯ್ಯನಗೌಡ ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ವಿವಿಧ ಪ್ರಗತಿಪರ ಮಹಿಳಾ ಸಂಘಟನೆಗಳು ಜಿಲ್ಲಾ ಪೊಲೀಸ್ ಪೋಲಿಸ್ ವರಿಷ್ಠಾಧಿಕಾರಿಗಳನ್ನು ಅಗ್ರಹಿಸಿದ್ದರು.

ಮನೆಯ ಮುಂದೆ ಹಸು ಕಟ್ಟಿದ್ದ ಕಾರಣವನ್ನು ನೆಪವಾಗಿಟ್ಟುಕೊಂಡು ಅಶೋಕನಗರ ನಿವಾಸಿ ರೂಪ ಅವರನ್ನು ಬಲವಂತವಾಗಿ ಜೀಪಿಗೆ ಹತ್ತಿಸಿಕೊಂಡ ಅಯ್ಯನಗೌಡ ಠಾಣೆಗೆ ಕರೆತಂದು ಅವಾಚ್ಯ ಶಬ್ದಗಳಿಂದ ಬೈದು ಬೆಲ್ಟು ಹಾಗೂ ಲಾಠಿಯಿಂದ ಥಳಿಸಿದರು.
ರೂಪವರನ್ನು ಠಾಣೆಗೆ ಕರೆದುಕೊಂಡು ಬಂದ ಸಂದರ್ಭದಲ್ಲಿ ಮಹಿಳಾಪೇದೆಗಳು ಇರಲಿಲ್ಲ ಪುರುಷ ಪೇದೆಗಳೊಂದಿಗೆ ಅಯ್ಯನಗೌಡ ರೂಪ ಅವರನ್ನು ಬಲವಂತವಾಗಿ ಠಾಣೆಗೆ ಕರೆದುಕೊಂಡು ಬಂದ ನಂತರ ಒಂದು ಕೋಣೆಯೊಳಗೆ ಲಾಕ್ ಮಾಡಿಕೊಂಡು ಮಹಿಳಾ ಪೇದೆಯೊಳಗೊಂಡಂತೆ ಪುರುಷ ಪೇದೆಗಳ ಜೊತೆ ಸೇರಿ ರೂಪ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಒಬ್ಬ ಮಹಿಳೆಯನ್ನು ಯಾವುದೇ ದೂರು ಇಲ್ಲದಿದ್ದರೂ ಬಲವಂತವಾಗಿ ಠಾಣೆಗೆ ಕರೆತಂದ ಮುಖ ಮೂತಿ ನೋಡದೆ ಮನಸೋ ಇಚ್ಛೆ ಥಳಿಸಿರುವುದಕ್ಕೆ ರೂಪ ಅವರ ಮೈ ಮೇಲಿನ ಗಾಯಗಳು ಸಾಕ್ಷಿಯಾಗಿದೆ ಎಂದು ವಿವಿಧ ಪ್ರಗತಿಪರ ಸಂಘಟನೆಗಳು ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ಅಯ್ಯನಗೌಡ ಅವರ ಮೇಲೆ ಕ್ರಮ ಕೈ ಗೊಳ್ಳಲು ಅಗ್ರಹಿಸಿದ್ದರು.
ಸಬ್ ಇನ್ಸ್ ಪೆಕ್ಟರ್ ಅಯ್ಯನಗೌಡ ಅವರು ಈ ಹಿಂದೆ ಬೆಸಗರಹಳ್ಳಿ, ಕೆ.ಎಂ. ದೊಡ್ಡಿ, ಪಾಂಡವಪುರ ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ದರ್ಪ ದೌರ್ಜನ್ಯ ದಿಂದ ವರ್ತಿಸಿದ ಹಿನ್ನೆಲೆಯಲ್ಲಿ ರೈತರು, ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಪಾಂಡವಪುರ ಠಾಣೆಯಲ್ಲಿ ಇದ್ದಾಗ ರೈತರೊಂದಿಗೆ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ರೈತರು ಅಯ್ಯನಗೌಡ ವಿರುದ್ಧ ಘೇರಾವ್ ಮಾಡಿದ್ದರು ಹೀಗೆ ತಾವು ಕೆಲಸ ಮಾಡಿದ ಠಾಣೆಯಲ್ಲಿದ್ದಾಗಲ್ಲೆಲ್ಲ ಒಂದಲ್ಲ ಒಂದು ರೀತಿ ದೌರ್ಜನ್ಯ ದಿಂದ ನಡೆದುಕೊಂಡಿರುವ ಇತಿಹಾಸ ಇರುವ ಅಯ್ಯನಗೌಡ ಅವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸೇವೆಯಿಂದಲೇ ವಜಾ ಮಾಡಬೇಕೆಂದು ವಿವಿಧ ಸಂಘಟನೆಗಳ ಮುಖಂಡರು ಎಸ್. ಪಿ. ಎನ್. ಯತೀಶ್ ಅವರಿಗೆ ಮನವಿ ಮಾಡಿದ್ದಾರೆ.