For the best experience, open
https://m.samyuktakarnataka.in
on your mobile browser.

ಸಮಯಪ್ರಜ್ಞೆ ತೋರಿ ಅವಘಡ ತಪ್ಪಿಸಿದ ೧೧ ಸಿಬ್ಬಂದಿಗೆ ನೈಋತ್ಯ ರೈಲ್ವೆ ಸನ್ಮಾನ

09:33 PM May 14, 2024 IST | Samyukta Karnataka
ಸಮಯಪ್ರಜ್ಞೆ ತೋರಿ ಅವಘಡ ತಪ್ಪಿಸಿದ ೧೧ ಸಿಬ್ಬಂದಿಗೆ ನೈಋತ್ಯ ರೈಲ್ವೆ ಸನ್ಮಾನ
ಕರ್ತವ್ಯದಲ್ಲಿ ಸಮಯ ಪ್ರಜ್ಞೆ ಮೆರೆದು ಸಂಭವನೀಯ ಅಪಘಾತ ತಪ್ಪಿಸಿದ ೧೧ ಸಿಬ್ಬಂದಿಗೆ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಅರವಿಂದ ಶ್ರೀವಾಸ್ತವ್ ಅವರು ಮಂಗಳವಾರ ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಿದರು. ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಕೆ.ಎಸ್.ಜೈನ್ ಮತ್ತು ಇತರ ಹಿರಿಯ ಅಧಿಕಾರಿಗಳಿದ್ದರು.

ಹುಬ್ಬಳ್ಳಿ: ಕರ್ತವ್ಯದಲ್ಲಿ ಸಮಯ ಪ್ರಜ್ಞೆ ತೋರಿ ಸಂಭವನೀಯ ಅಪಘಾತಗಳನ್ನು ತಪ್ಪಿಸಿದ ನೈಋತ್ಯ ರೈಲ್ವೆ ವಲಯದ ವಿವಿಧ ವಿಭಾಗಗಳ ಉದ್ಯೋಗಿಗಳಿಗೆ ಮಂಗಳವಾರ ಪ್ರಶಸ್ತಿ, ಪ್ರಶಂಸನಾ ಪತ್ರ ನೀಡಿ ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ್ ಅವರು ಗೌರವಿಸಿದರು.
ರೈಲ್ ಸೌಧದದಲ್ಲಿ ನಡೆದ ಸುರಕ್ಷತಾ ಸಭೆಯಲ್ಲಿ ವಿವಿಧ ವಿಭಾಗಗಳ ಪ್ರಧಾನ ಮುಖ್ಯಸ್ಥರ ಸಮ್ಮುಖದಲ್ಲಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಕೆ.ಎಸ್.ಜೈನ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಹ ಉಪಸ್ಥಿತರಿದ್ದರು.
ಪ್ರಶಸ್ತಿ ಪುರಸ್ಕೃತರ ಹೆಸರು, ಸ್ಥಳ ಮತ್ತು ಹುದ್ದೆ ವಿವರ:
೧. ಬೋರೇಗೌಡ ಆರ್, ಕೀಮ್ಯಾನ್/ಕುಣಿಗಲ್,
೨- ಶೇಖರ್ ಎಲ್ ಲಮಾಣಿ, ಗ್ಯಾಂಗ್ ಮೇಟ್ /ಕುಲೆಮ್,
೩- ಶೈಲೇಂದ್ರ ಕುಮಾರ್, ಲೋಕೋ ಪೈಲಟ್,
೪- ಜಿತೇಂದ್ರ ಜಂಗಿದ್, ಸಹಾಯಕ ಲೋಕೋ ಪೈಲಟ್,
೫- ಎಂ ಎಸ್ ಲಕ್ಷ್ಮೀಶ, ಲೋಕೋ ಪೈಲಟ್,
೬- ಮುತೀವುಲ್ಲಾ ಖಾನ್, ಲೋಕೋ ಪೈಲಟ್/ಮೈಸೂರು,
೭- ಕೆ ಶಿವಕುಮಾರ್, ಟೆಕ್ನಿಷಿಯನ್/ಹರಿಹರ,
೮- ಲಕ್ಷ್ಮಪ್ಪ ಎಸ್ ಎಲಿಗಾರ್, ಟೆಕ್ನಿಷಿಯನ್-I/ಹರಿಹರ,
೯- ಜೆ. ಮಹಮ್ಮದ್ ಸಾಧಿಕ್, ಕಿರಿಯ ಎಂಜಿನಿಯರ್/ ಹರಿಹರ,
೧೦- ವಿರೂಪಾಕ್ಷಯ್ಯ, ಕೀಮ್ಯಾನ್ / ನಿಡ್ವಂಡ,
೧೧- ಪವನ್ ಕುಮಾರ್, ಟೆಕ್ನಿಷಿಯನ್-೨/ ಕ್ಯಾಸಲ್ ರಾಕ್.