ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸರಕಾರದ ವಿರುದ್ಧ ಸಿಡಿದೆದ್ದ ಮಠಾಧೀಶರು: ವಕ್ಫ್ ಹಟಾವೋ-ಅನ್ನದಾತ ಬಚಾವೋ" ಪ್ರತಿಭಟನೆ

06:58 PM Nov 19, 2024 IST | Samyukta Karnataka

ವಕ್ಫ್ ಹೆಸರು ಕಿತ್ತು ಹಾಕುವಂತೆ ಒತ್ತಾಯಿಸಿ 21ರಂದು ಕಲಬುರಗಿಯಲ್ಲಿ ವಿವಿಧ ಸಂಘಟನೆಗಳಿಂದ ಪಾದಯಾತ್ರೆ

ಕಲಬುರಗಿ: ನೇಗಿಲಯೋಗಿ ಸ್ವಾಭಿಮಾನ ವೇದಿಕೆ ವತಿಯಿಂದ ಜಿಲ್ಲೆಯ ನೂರಕ್ಕೂ ಅಧಿಕ ಮಠಾಧೀಶರು ಹಾಗೂ ಸಾವಿರಾರು ರೈತರೊಂದಿಗೆ 21ರಂದು ನಗರದಲ್ಲಿ "ವಕ್ಫ್ ಹಟಾವೋ-ಅನ್ನದಾತ ಬಚಾವೋ" ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಆಂದೋಲಾ ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹಾಗೂ ಶ್ರೀನಿವಾಸ ಸರಡಗಿಯ ಶಕ್ತಿಪೀಠದ ಶ್ರೀ ಅಪ್ಪಾರಾವ ದೇವಿ ಮುತ್ಯಾ ತಿಳಿಸಿದರು.
ನಗರದಲ್ಲಿ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದವರೆಗೆ ಜಿಲ್ಲೆಯ ಮಠಾಧೀಶರು, ರೈತಪರ ಸಂಘಟನೆಗಳು, ಹಿಂದೂ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ಗಂಜ್ ವರ್ತಕರು, ಉದ್ಯಮಿಗಳು ಸೇರಿದಂತೆ ಹಲವು ಸಂಘಟನೆಗಳ ನೇತೃತ್ವದಲ್ಲಿ ಪಾದಯಾತ್ರೆ ಮೂಲಕ ಬೃಹತ್ ಪ್ರತಿಭಟನೆ ನಡೆಸಿ, ನ. 23ರವರೆಗೆ ಮೂರು ದಿನಗಳ ಕಾಲ ನಗರದ ಜಗತ್ ವೃತ್ತದ ಬಸವೇಶ್ವರರ ಮೂರ್ತಿ ಆವರಣದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.
ನಮ್ಮ ಆಸ್ತಿ ನಮ್ಮ ಹಕ್ಕು ಇದರ ಮೇಲೆ ಯಾರೇ ಕಣ್ಣು ಹಾಕಿದರೂ ನಾವು ಸುಮ್ಮನೆ ಕೂರುವುದಿಲ್ಲ. ಅಂತವರಿಗೆ ತಕ್ಕ ಪಾಠ ಕಲಿಸಲಾಗುವುದು. ರೈತರ ಜಮೀನು, ಮಠ ಮಂದಿರಗಳ ಆಸ್ತಿಗಳನ್ನು ಸರ್ಕಾರ ವಕ್ಫ್ ಆಸ್ತಿಗಳನ್ನಾಗಿ ಮಾಡಿದ್ದು, ಸರಕಾರದ ನಡೆಯನ್ನು ಖಂಡಿಸಿ, ಜಿಲ್ಲೆಯ ಸಂತರ ನೇತೃತ್ವದಲ್ಲಿ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಶ್ರೀ ಕೆಂಚಬಸವೇಶ್ವರ ಶಿವಾಚಾರ್ಯರು, ಶ್ರೀ ಗುರುಮೂರ್ತಿ ಶಿವಾಚಾರ್ಯರು ಪಾಳಾ, ಶ್ರೀ ರೇವಣಸಿದ್ದ ಶಿವಾಚಾರ್ಯರು ಶ್ರೀನಿವಾಸ ಸರಡಗಿ, ಶ್ರೀ ರಾಜಶೇಖರ ಶಿವಾಚಾರ್ಯರು ಚೌದಾಪುರಿ ಹಿರೇಮಠ, ಶ್ರೀ ಶಿವಮೂರ್ತಿ ಶಿವಾಚಾರ್ಯ ಬದಲಾದ, ಶ್ರೀ ಪರ್ವತೇಶ್ವರ ಶಿವಾಚಾರ್ಯರು ಬೆಳಗುಂಪಾ, ಶ್ರೀ ಚರಲಿಂಗ ಮಹಾಸ್ವಾಮೀಜಿ ಮಕ್ತಂಪುರ, ಶಿವರಾಜ್ ಸಂಗೋಳಗಿ, ಪ್ರಶಾಂತ್ ಗುಡ್ಡಾ, ಅಶ್ವಿನ್ ಕುಮಾರ್, ಅನಿಲ ತಂಬಾಕೆ, ಶ್ರೀಶೈಲ ಮೂಲಗೆ, ದಯಾನಂದ ಪಾಟೀಲ್, ಸತೀಶ್ ಮಾವೂರ ಇದ್ದರು.

ಡಿಸಿಪಿ ವಿರುದ್ಧ ಆಂದೋಲಾ ಶ್ರೀ ಗರಂ: 21ರ ಪ್ರತಿಭಟನೆ ಕುರಿತು ಕಲಬುರಗಿ ನಗರ ಉಪ ಪೋಲೀಸ್ ಆಯುಕ್ತರಿಗೆ ಮನವಿ ಕೊಡಲು ಹೋದರೆ, ನಿಮಗೆ ರ‍್ಯಾಲಿ ಮಾಡುವಂತೆ ಯಾರು ಹೇಳಿದ್ದಾರೆ ಅಂತ ಕೇಳುತ್ತಾರೆ. ಕೋಳಿಗೆ ಕೇಳಿ ಮಸಾಲೆ ಅರಿಬೇಕಾ ನಾವು? ಪ್ರತಿಭಟನೆ ಮಾಡಲು ನಮಗೆ ಹಕ್ಕಿದೆ. ಪ್ರತಿಭಟನೆಗೆ ಬಂದೋಬಸ್ತ್ ನೀಡುವುದು ಪೊಲೀಸರ ಜವಾಬ್ದಾರಿ ಎಂದು ಆಂದೋಲಾ ಶ್ರೀಗಳು ಡಿಸಿಪಿ ಕನ್ನಿಕಾ ಸಿಕ್ರಿವಾಲ್ ವಿರುದ್ಧ ಕಿಡಿಕಾರಿದರು.
ಪೊಲೀಸರ ಬೆದರಿಕೆಗೆ ನಾವು ಹೆದರಿ ಪ್ರತಿಭಟನೆ ಕೈಬಿಡುವುದಿಲ್ಲ. ನ್ಯಾಯಬದ್ಧವಾಗಿ ಪ್ರತಿಭಟನೆ ಮಾಡಲಾಗುತ್ತಿದೆ ಹೊರತು, ಯಾರಿಗೋ ಕಲ್ಲು ಹೊಡೆಯುವ ಕೆಲಸ ಮಾಡುತ್ತಿಲ್ಲ. ಮೂರು ದಿನ ಸಂತರ ನೇತೃತ್ವದಲ್ಲಿ ಪ್ರತಿಭಟನೆ ಹಾಗೂ ಧರಣಿ ನಡೆಯಲಿದ್ದು, ನಮ್ಮ ಮೇಲೆ ಕೇಸ್ ಹಾಕುವುದಾದರೆ ಹಾಕಿ ಎಂದು ಉಪ ಪೋಲಿಸ್ ಆಯುಕ್ತರಿಗೆ ಸವಾಲು ಹಾಕಿದರು.

Tags :
#ಕಲಬುರಗಿ#ವಕ್ಫ್‌
Next Article