ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸರಳವಾಗಿ ಸೋಲೊಪ್ಪುವವಳು ನಾನಲ್ಲ, ಮತ್ತೆ ಹೊಸ ಅಧ್ಯಾಯ ಶುರು

07:20 PM Jul 01, 2024 IST | Samyukta Karnataka

ಬಾಗಲಕೋಟೆ: ನಾನು ಸರಳವಾಗಿ ಸೋಲೊಪ್ಪುವ ಹೆಣ್ಣಲ್ಲ ಮುಂದೆ ವಿಧಾನಸಭೆ ಅಥವಾ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿಯೇ ಸಿದ್ಧ ಎಂದು ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ನನಗೆ ಕೊನೆ ಕ್ಷಣದಲ್ಲಿ ಟಿಕೆಟ್ ತಪ್ಪಿದೆ ಹಾಗಂತ ಮನೆಯಲ್ಲಿ ಕೂರುವುದಿಲ್ಲ. ಇಂದಿನಿಂದ ನನ್ನ ವಿವಿಕೆ ಪ್ರತಿಷ್ಠಾನದ ಮೂಲಕ ಹೊಸ ಅಧ್ಯಾಯ ಶುರು ಮಾಡುವೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಕಾಣಿಸಿಕೊಳ್ಳದಿರುವುದಕ್ಕೆ ಉತ್ತರಿಸಿದ ಅವರು, ಸಂಯುಕ್ತಾ ಪಾಟೀಲ ಅವರ ನಾಮಪತ್ರ ಸಲ್ಲಿಕೆ ದಿನ ಆಹ್ವಾನಿಸಿದರು ಬಂದಿದ್ದೆ ಮುಂದೆ ಅವರು ನನ್ನ ಕರೆಯಲಿಲ್ಲ. ನಾನು ಕೊಪ್ಪಳ ಉಸ್ತುವಾರಿ ಆಗಿದ್ದರಿಂದ ಪಕ್ಷದ ಸೂಚನೆ ಮೇರೆಗೆ ಅಲ್ಲಿಗೆ ತೆರಳಿದೆ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಕ್ಕಿದರೆ ಕನಿಷ್ಠ ಒಂದು ಲಕ್ಷ ಮತಗಳಿಂದ ಗೆಲ್ಲುತ್ತಿದ್ದೆ ಎಂದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಆಗಿದ್ದೇನೆ. ಹುನಗುಂದದಲ್ಲಿ ಪತಿ ವಿಜಯಾನಂದ ನಿಲ್ತಾರೆ. ಆದರೆ ಮೇಟಿ ಅವರು ಕೊನೆ ಚುನಾವಣೆ ಎಂದಿದ್ದರು ಹೀಗಾಗಿ ಅವರು ನಿಲ್ಲದಿದ್ದರೆ ನಾನು ಆಕಾಂಕ್ಷಿ. ಪಕ್ಷ ಸೂಚಿಸಿದ ಕಡೆಗಳಲ್ಲಿ ನಾನು ಸ್ಪರ್ಧಿಸಲು ಸಿದ್ಧ ಎಂದರು. ೨೦೨೮ರ ವಿಧಾನಸಭಾ ಚುನಾವಣೆ ಹಾಗೂ ೨೦೨೯ರ ಲೋಕಸಭಾ ಚುನಾವಣೆಗಳಿಗೆ ಆಕಾಂಕ್ಷಿಯಾಗಿದ್ದೇನೆ. ಹೈಕಮಾಂಡ್ ಅವಕಾಶ ಮಾಡಿಕೊಟ್ಟ ಕಡೆಯಲ್ಲಿ ಸ್ಪರ್ಧಿಸುತ್ತೇನೆ ಎಂದರು.

Next Article