ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸರ್ಕಾರದ ಸಂಪನ್ಮೂಲ ಹೇರಳವಾಗಿ ಬಳಕೆಯಾಗಿದೆ

03:51 PM Nov 23, 2024 IST | Samyukta Karnataka

ಹುಬ್ಬಳ್ಳಿ: ಉಪ ಚುನಾವಣೆಯಲ್ಲಿ ಬಹುತೇಕ ಜನರು ಆಡಳಿತ ಪಕ್ಷದ ಪರ ಇರುತ್ತಾರೆ‌. ಸಚಿವರು, ಶಾಸಕರು, ಸಂಪನ್ಮೂಲದ ಬಳಕೆ ಹೇರಳವಾಗಿ ಬಳಕೆಯಾಗುತ್ತದೆ. ಆದರೂ, ನಾವು ಜನರ ತೀರ್ಪು ಒಪ್ಪಿಕೊಳ್ಳುತ್ತೇವೆ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ನಾನು ಸುಮಾರು ಹದಿನೈದು ದಿನ ಕೆಲಸ ಮಾಡಿದ್ದೇನೆ. ಬಸವರಾಜ ಬೊಮ್ಮಾಯಿಯವರು ಈ ಕ್ಷೇತ್ರದಲ್ಲಿ ಐದು ಲಕ್ಷ ರೂಪಾಯಿಯ ಸುಮಾರು 15,000 ಮನೆಗಳನ್ನು ಕಟ್ಟಿಸಿಕೊಟ್ಟಿದ್ದಾರೆ‌. ಒಂದು ಮನೆಗೆ ನಾಲ್ಕು ಮತ ಬಂದರೂ ಸುಮಾರು ಆರವತ್ತು ಸಾವಿರ ಮತಗಳು ಬರಬೇಕಿತ್ತು. ಬಡವರಿಗೆ ಗೋವುಗಳನ್ನು ಕೊಡಿಸಿದ್ದಾರೆ. ಆಸ್ಪತ್ರೆ ‌ಕಟ್ಟಿಸಿದ್ದಾರೆ. ಅಭಿವೃದ್ಧಿ ಅಂದರೆ ಶಿಗ್ಗಾವಿ ಕ್ಷೇತ್ರಕ್ಕೆ ಹೋಗಿ ನೋಡಬೇಕು. ಈಗ ಯಾಸಿರ್ ಖಾನ್ ಪಠಾಣ ಆಯ್ಕೆಯಾಗಿದ್ದಾರೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರು ಮಾಡಲು ಕ್ಷೇತ್ರದಲ್ಲಿ ಏನೂ ಉಳಿದಿಲ್ಲ ಎಂದು ಹೇಳಿದರು.
ಕ್ಷೇತ್ರದ ಹಣೆಬರಹವೂ ಇರುತ್ತದೆ. ಇವರಿಂದ ಕ್ಷೇತ್ರದ ಪುಣ್ಯ ಹೆಚ್ಚಾಗಿದೆ ಎಂದು ಭಾವಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿರಬಹುದು. ಜನರ ತೀರ್ಪನ್ನು ನಾವು ತಲೆಬಾಗಿ ಸ್ವೀಕರಿಸಬೇಕಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಜನತೆಯೇ ಜನಾರ್ದನ ಎಂದು ನಂಬಿದ್ದೇವೆ. ನಾವು ಹಿಂದೆ 17 ಜನ ಶಾಸಕರನ್ನು ರಾಜಿನಾಮೆ ಕೊಡಿಸಿ 13 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವು, ಶ್ರೀಮಂತ ಪಾಟೀಲ್ ಅವರ ಕ್ಷೇತ್ರದ ಉಸ್ತುವಾರಿ ಹೊತ್ತು ನಾನು ಗೆಲ್ಲಿಸಿಕೊಂಡು ಬಂದಿದ್ದೆ. ಈಗ ಶಿಗ್ಗಾವಿ ಸವಣೂರಿನಲ್ಲಿ ಕಾಂಗ್ರೆಸ್‌ನವರು ಗೆಲುವು ಸಾಧಿಸಿದ್ದಾರೆ. ಬಸವರಾಜ ಬೊಮ್ಮಾಯಿಯವರು ಶಿಗ್ಗಾವಿ ಕ್ಷೇತ್ರದಲ್ಲಿ 45 ಕಿಲೋ‌ಮೀಟರ್ ದೂರದಿಂದ ನದಿ ನೀರು ತಿರುಗಿಸಿ ತುಂತುರು ಹನಿ ನೀರಾವರಿ ಮಾಡಿದ್ದಾರೆ. ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿದ್ದ ಶಿಗ್ಗಾವಿ ಅಭಿವೃದ್ಧಿ ಹೊಂದಿದ ತಾಲೂಕುಗಳ ಪಟ್ಟಿಯಲ್ಲಿ ಸೇರುವಂತೆ ಬೊಮ್ಮಾಯಿಯವರು ಕೆಲಸ ಮಾಡಿದ್ದರು. ಆದರೂ, ಜನರ ತೀರ್ಪಿಗೆ ತಲೆ ಬಾಗುತ್ತೇವೆ ಎಂದರು.
ಯಾವುದೇ ಚುನಾವಣೆಯನ್ನು ಯಾವುದೇ ರಾಜಕಾರಣಿ ನಿರ್ಲಕ್ಷ್ಯ ಮಾಡುವುದಿಲ್ಲ. ಕೆಲವು ಸಾರಿ ನಾವು ತಪ್ಪು ಮಾಡದಿದ್ದರೂ ಸೋಲುತ್ತೇವೆ. ಕೆಲವರು ತಪ್ಪು ಮಾಡಿದರೂ ಗೆಲ್ಲುತ್ತಾರೆ. ತೀರ್ಪನ್ನು ಒಪ್ಪಿಕೊಳ್ಳಬೇಕು. ಒಪ್ಪಿಕೊಂಡಿದ್ದೇವೆ ಎಂದರು.
ಇನ್ನು ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟಕ್ಕೆ ದೊಡ್ಡ ಪ್ರಮಾಣದ ಜನ ಬೆಂಬಲ ದೊರೆತಿದೆ. ದೇಶದ ಜನರು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಒಪ್ಪಿಕೊಂಡಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಹೇಳಿದರು.

Next Article