For the best experience, open
https://m.samyuktakarnataka.in
on your mobile browser.

ಸರ್ಕಾರ ಉರುಳಿದರೂ ಜಾತಿಗಣತಿ ಜಾರಿ ಮಾಡಲೇಬೇಕು

05:20 PM Oct 06, 2024 IST | Samyukta Karnataka
ಸರ್ಕಾರ ಉರುಳಿದರೂ ಜಾತಿಗಣತಿ ಜಾರಿ ಮಾಡಲೇಬೇಕು

ಬೆಂಗಳೂರು: ಸರ್ಕಾರ ಬಿದ್ದರೆ ಪರವಾಗಿಲ್ಲ, ರಾಜ್ಯದಲ್ಲಿ ಜಾತಿಗಣತಿ ಜಾರಿ ಮಾಡಲೇಬೇಕು ಎಂದು ಕಾಂಗ್ರೆಸ್ ಎಂಎಲ್​ಸಿ ಬಿ.ಕೆ. ಹರಿಪ್ರಸಾದ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಜಾತಿಗಣತಿ ಜಾರಿ ವಿಚಾರ ಕಾಂಗ್ರೆಸ್​​​ ಪ್ರಣಾಳಿಕೆಯಲ್ಲೇ ಇದೆ. ಆದರೆ ಜಾತಿಗಣತಿ ಜಾರಿಗೆ ಸರ್ಕಾರ ಮೀನಾಮೇಷ ಎಣಿಸದೆ ಮೊದಲು ಜಾರಿ ಮಾಡಲಿ ಎಂದು ಆಗ್ರಹಿಸಿದರು. ಜಾತಿಗಣತಿ ಜಾರಿಯಿಂದಾಗಿ ಎಲ್ಲ ಸಮುದಾಯಗಳಿಗೆ ಅನುಕೂಲವಾಗಲಿದೆ. ಜಾತಿಗಣತಿ ಜಾರಿಯಿಂದಲೇ ಸರ್ಕಾರ ಉರುಳುವುದು ಎಂದಾದರೆ ಹಾಗೆಯೇ ಆಗಲಿ ಎಂದಿದ್ದಾರೆ.

Tags :