ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ
05:39 PM Dec 11, 2023 IST | Samyukta Karnataka
ಬೆಳಗಾವಿ(ವಿಧಾನ ಪರಿಷತ್): ರಾಜ್ಯದಲ್ಲಿ ಭೀಕರ ಬರ ನಿರ್ವಹಣೆ ಬಗ್ಗೆ ಆಡಳಿತ, ಪ್ರತಿಪಕ್ಷ ಸದಸ್ಯರ ಮಧ್ಯೆ ಬಿರುಸಿನ ಚರ್ಚೆಗೆ ಮೇಲ್ಮನೆಯಲ್ಲಿ ಸೋಮವಾರ ಕಾರಣವಾಯಿತು.
ಪರಿಷತ್‌ನಲ್ಲಿ ಸೋಮವಾರದ ಕಲಾಪದಲ್ಲಿ ನಿಯಮ ೬೮ರಡಿ ಬರ ಬಗ್ಗೆ ಚರ್ಚೆ ವೇಳೆಯಲ್ಲಿ ಬಿಜೆಪಿ ಸದಸ್ಯ ಚಲುವಾದಿ ನಾರಾಯಣ ಸ್ವಾಮಿ ಕೇಳಿದ ಪ್ರಶ್ನೆಗೆ ಆಡಳಿತ, ಪ್ರತಿಪಕ್ಷದ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ರಾಜ್ಯದಲ್ಲಿ ಭೀಕರ ಬರ ನಿರ್ವಹಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದ್ದು, ಆಯಾ ಜಿಲ್ಲಾ ಉಸ್ತವಾರಿ ಸಚಿವರು, ತಾಲೂಕು ಕೇಂದ್ರಕ್ಕೆ ತೆರಳಿ ರೈತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ, ಕ್ಷೇತ್ರದಲ್ಲಿ ಕಾಲಿಟ್ಟರೆ ಜನ, ರೈತರು ಬಂದು ಬರ ಬಗ್ಗೆ ಚರ್ಚಿಸುತ್ತಿದ್ದಾರೆ. ಇದರಿಂದ ಸಾಕಾಗಿ ತಲೆನೋವು ಉಂಟಾಗಿದೆ ಎಂದು ಆಡಳಿತ ಪಕ್ಷದ ಶಾಸಕರೇ ಖುದ್ದು ಬರ ನಿರ್ವಹಣೆ ಬಗ್ಗೆ ತಾತ್ಸಾರ ಮನೋಭಾವ ತಳಿದಿದ್ದಾರೆ ಎಂದು ಬಿಜೆಪಿ ಸದಸ್ಯ ಚಲುವಾದಿ ನಾರಾಯಣ ಸ್ವಾಮಿ ಕಿಡಿಕಾರಿದರು.