For the best experience, open
https://m.samyuktakarnataka.in
on your mobile browser.

ಸರ್ವಿಸ್ ಸೆಂಟರ್‌ನಲ್ಲಿ ಬೆಂಕಿ: 30 ಕಾರು ಭಸ್ಮ

05:52 PM Jan 22, 2025 IST | Samyukta Karnataka
ಸರ್ವಿಸ್ ಸೆಂಟರ್‌ನಲ್ಲಿ ಬೆಂಕಿ  30 ಕಾರು ಭಸ್ಮ

ಪಣಜಿ: ಗೋವಾದ ವೆರ್ಣಾ ಇಂಡಸ್ಟಿಯಲ್ ಎಸ್ಟೇಟ್‌ನಲ್ಲಿನ ರೆನೊ ಮತ್ತು ಸ್ಕೋಡಾ ಕಾರುಗಳ ಸರ್ವಿಸ್ ಸೆಂಟರ್‌ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 30ಕ್ಕೂ ಹೆಚ್ಚು ಕಾರುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಆರಂಭದಲ್ಲಿ ಬಯಲು ಪ್ರದೇಶದಲ್ಲಿ ಒಣಹುಲ್ಲಿಗೆ ಹತ್ತಿಕೊಂಡ ಬೆಂಕಿ ಗಾಳಿಗೆ ಹರಡುತ್ತ ಮುಂದೆ ಹೋಗಿ ಕಾರುಗಳ ಸರ್ವಿಸ್ ಸೆಂಟರ್‌ಗಳ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹತ್ತಿಕೊಂಡಿದೆ. ಈ ಬೆಂಕಿ ಅಕ್ಕಪಕ್ಕದಲ್ಲಿದ್ದ ಕಾರುಗಳಿಗೆ ಮಿಂಚಿನ ವೇಗದಲ್ಲಿ ವ್ಯಾಪಿಸಿ ದೊಡ್ಡ ಪ್ರಮಾಣದಲ್ಲಿ ಅವಘಡ ಸಂಭವಿಸಿದೆ. ಅಕ್ಕಪಕ್ಕದಲ್ಲಿಯೇ ಇದ್ದ ಈ ಎರಡೂ ಕಾರ್ ಸರ್ವಿಸ್ ಸೆಂಟರ್ ಮುಂಭಾಗದಲ್ಲಿ ನಿಲ್ಲಿಸಿದ್ದ ಬಹುತೇಕ ಎಲ್ಲ ಕಾರುಗಳು ಬೆಂಕಿಗಾಹುತಿಯಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯಲ್ಲಿ ಕೋಟ್ಯಂತರ ರೂ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.