ಸರ್ವ ಜನಾಂಗದ ಶಾಂತಿಯ ತೋಟ ಅಂತ ಮಾತಲ್ಲಷ್ಟೇ…
ಬೆಂಗಳೂರು: ಸರ್ವ ಜನಾಂಗದ ಶಾಂತಿಯ ತೋಟ ಅಂತ ಮಾತಲ್ಲಷ್ಟೇ ಇವರು ಹೇಳುವುದು, ಆದರೆ ಮಾಡುವುದು ಮಾತ್ರ ಅಲ್ಪಸಂಖ್ಯಾತರ ಓಲೈಕೆ, ಸ್ವಜಪಕ್ಷಪಾತ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಕೆಲ ರಾಜಕಾರಣಿಗಳು ತಮ್ಮ ಸ್ವಹಿತಾಸಕ್ತಿಗಳಿಗೆ, ತಮ್ಮ ಬಾಂಧವರನ್ನು ಓಲೈಸಲು, ವೋಟು ಪಡೆಯಲು ಹೇಗೆ ಷಡ್ಯಂತ್ರ ರಚಿಸುತ್ತಾರೆ ಎಂಬುದಕ್ಕೆ ಈ ಪ್ರಕರಣ ಜ್ವಲಂತ ಉದಾಹರಣೆ. 2020 ರಲ್ಲಿ ಶಾಸಕರಾಗಿದ್ದ ಜಮೀರ್ ಅಹಮ್ಮದ್ ಖಾನ್ ಅವರು ಚಾಮರಾಜಪೇಟೆಯಲ್ಲಿರುವ ಪಶುವೈದ್ಯ ಆಸ್ಪತ್ರೆಯ ಜಾಗದಲ್ಲಿ ಆರ್.ಓ ವಾಟರ್ ಪ್ಲಾಂಟ್ ಹಾಗೂ ವ್ಯಾಯಾಮ ಶಾಲೆ ನಿರ್ಮಿಸಲು ಮನವಿ ಸಲ್ಲಿಸಿದ್ದರು.
ಆದರೆ, ಸದರಿ ಜಾಗ ಆಸ್ಪತ್ರೆಗೆ ಮೀಸಲಾಗಿರುವುದರಿಂದ ಅವರ ಮನವಿಯನ್ನು ತಿರಸ್ಕರಿಸಲಾಗಿತ್ತು. 2024-ರಲ್ಲಿ ಅಂದರೆ, ಪ್ರಸ್ತುತ ಕಾಂಗ್ರೆಸ್ ಸರ್ಕಾರದಲ್ಲಿ ವಕ್ಫ್ ಖಾತೆ ಸಚಿವರಾಗಿರುವ ಜಮೀರ್ ಅವರು ಇದೆ ಜಾಗವನ್ನು ಅಲ್ಪಸಂಖ್ಯಾತ ಇಲಾಖೆಗೆ ವರ್ಗ ಮಾಡಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟ ಅಂತ ಮಾತಲ್ಲಷ್ಟೇ ಇವರು ಹೇಳುವುದು, ಆದರೆ ಮಾಡುವುದು ಮಾತ್ರ ಅಲ್ಪಸಂಖ್ಯಾತರ ಓಲೈಕೆ, ಸ್ವಜಪಕ್ಷಪಾತ ಎಂದಿದ್ದಾರೆ.