For the best experience, open
https://m.samyuktakarnataka.in
on your mobile browser.

ಸವಾರನ ಜೀವ‌ ಕಾಪಾಡಿದ ಬಸವರಾಜ ಕ್ಯಾವಟರ್

10:04 PM Jan 18, 2025 IST | Samyukta Karnataka
ಸವಾರನ ಜೀವ‌ ಕಾಪಾಡಿದ ಬಸವರಾಜ ಕ್ಯಾವಟರ್

ಕೊಪ್ಪಳ: ರಸ್ತೆ ಬದಿಯಲ್ಲಿ ಅಪಘಾತವಾಗಿ ಜೀವನ್ಮರಣ ಹೋರಾಟದಲ್ಲಿದ್ದ ಬೈಕ್ ಸವಾರನ ಜೀವವನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿರುವ ವೈದ್ಯ ಬಸವರಾಜ ಕ್ಯಾವಟರ್ ಅವರು ಕಾಪಾಡಿದ್ದಾರೆ.
ತಾಲ್ಲೂಕಿನ ಹಟ್ಟಿ ಕ್ರಾಸ್ ಬಳಿ ಬೈಕ್ ಮತ್ತು ಕಾರ್ ನಡುವೆ ಅಪಘಾತವಾಗಿ ಬೈಕ್ ಮೇಲಿದ್ದ ಬಿದ್ದಿದ್ದ ಬೊಮ್ಮನಾಳ ಗ್ರಾಮದ ಶರಣಪ್ಪ ಗಾಯಗೊಂಡಿದ್ದ. ಈ ವೇಳೆ ಹಿಂಬದಿಯಿಂದ ಬಂದ ಟ್ರ್ಯಾಕ್ಟರ್ ಬೈಕ್ ಸವಾರನ ಕಾಲಿನ ಮೇಲೆ ಹರಿದು ಹೋಗಿತ್ತು. ಅಲ್ಲದೆ, ಕಾಲು ನಜ್ಜುಗುಜ್ಜಾಗಿತ್ತು. ಇದರಿಂದ ತೀವ್ರ ರಕ್ತಸ್ರಾವವಾಗಿ ನಿತ್ರಾಣಗೊಂಡು ಸ್ಥಳದಲ್ಲೇ ಸಾವು ಬದುಕಿನ ನಡುವೆ ಬೈಕ್ ಸವಾರ ಒದ್ದಾಡ್ಡಿದ್ದಾನೆ.
ಘಟನೆ ನಡೆದು 40ಕ್ಕೂ ಹೆಚ್ಚು ನಿಮಿಷವಾದರೂ ನೆರೆದಿದ್ದ ಸ್ಥಳೀಯರು ಆಂಬುಲೆನ್ಸ್ ಮತ್ತು ಸಹಾಯಕ್ಕಾಗಿ ಪರದಾಡುತ್ತಿದ್ದರು. ಈ ವೇಳೆ ಕುಷ್ಟಗಿ ಕಡೆಯಿಂದ ಕೊಪ್ಪಳಕ್ಕೆ ಕಡೆಗೆ ವೈದ್ಯ ಬಸವರಾಜ ಕ್ಯಾವಟರ್ ಅವರು ಬರುತ್ತಿರುವಾಗ ಅಪಘಾತವಾಗಿ ಬೈಕ್ ಸವಾರ ಕೆಳಗಡೆ ನಿತ್ರಾಣವಾಗಿ ಬಿದ್ದಿರುವುದನ್ನು ಗಮನಿಸಿದ್ದಾರೆ.
ಸರ್ಕಾರಿ ಆಂಬ್ಯುಲೆನ್ಸ್ ಬರುವುದು ತಡ ಆಗುತ್ತಿರುವುದನ್ನು ಗಮನಿಸಿ,‌ ಅಲ್ಲದೆ, ಸವಾರನ ಜತೆಗೆ ಕುಟುಂಬಸ್ಥರು ಯಾರು ಇರಲಿಲ್ಲ. ಹೀಗಾಗಿ ಕ್ಯಾವಟರ್ ಅವರು ತಾವೇ ಮುಂದೆ ನಿಂತು, ಕೂಡಲೇ ತಮ್ಮದೇ ಆಸ್ಪತ್ರೆಯ ಆ್ಯಂಬುಲೆನ್ಸ್ ಕರೆಯಿಸಿ, ಆಸ್ಪತ್ರೆಗೆ ದಾಖಲು ಮಾಡಿಸಿದ್ದಾರೆ.