ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸಹನೆಯಿಂದಲೇ ಪ್ರಕರಣ ಎದುರಿಸುತ್ತಿರುವೆ: ಮುರುಘಾ ಶರಣ

06:16 PM Oct 07, 2024 IST | Samyukta Karnataka

ದಾವಣಗೆರೆ: ಶರಣರು, ಸ್ವಾಮೀಜಿಗಳು ಮತ್ತು ಸಂತರ ಪ್ರಬಲವಾದ ಅಸ್ತçವೇ ಸಹನೆ ಆಗಿರುವುದರಿಂದ ಆರೋಪವನ್ನು ಸಹ ಅಖಂಡ ಸಹನೆಯಿಂದಲೇ ಎದುರಿಸುತ್ತಿದ್ದೇನೆ. ಸತ್ಯಕ್ಕೆ ಜಯ ಸಿಗುವ ನಿರೀಕ್ಷೆಯಿದೆ ಎಂದು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ದಾವಣಗೆರೆಯ ಶಿವಯೋಗಾಶ್ರಮಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಖಂಡವಾದ ಸಹನೆಯಿಂದ ಎಂತಹ ಆಪತ್ತನ್ನಾದರೂ ಗೆಲ್ಲಬಹುದು. ಸ್ವಾಮಿಗಳಿಗೆ, ಸಂತರಿಗೆ ಸಹನೆಯಿದ್ದರೆ ಮಾತ್ರ ಎಲ್ಲವನ್ನೂ ಸಹಿಸಬಹುದು. ಎಲ್ಲದರಲ್ಲೂ ಸಹನೆಯಿದೆ ಎಂದರೆ ತೇಜೋವಧೆಯಲ್ಲೂ ಸಹನೆ ತೆಗೆದುಕೊಳ್ಳಬೇಕು. ಸತ್ಯಕ್ಕೆ ಜಯವಿದೆ ಎನ್ನುವ ನಿರೀಕ್ಷೆಯಿದೆ. ಪ್ರಕರಣ ಮುಂದುವರೆಯುತ್ತಿದ್ದು ಈಗಲೇ ಈ ಬಗ್ಗೆ ಮಾತನಾಡುವುದಿಲ್ಲ ಎಂದರು.

ಜೈಲಿಗೆ ಹೋಗುವ ಮುನ್ನ ಮತ್ತು ಹೊರಬಂದಾಗ ಅದೇ ನಗು ಮುಖವಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶರಣರು, ನೋಡುವವರ ದೃಷ್ಠಿಯಲ್ಲಿ ಹಾಗೆ ಕಾಣಿಸುತ್ತಿರಬೇಕು. ಜೈಲಿನಲ್ಲಿದ್ದಾಗ ಸುಮಾರು ೩೫೦ ಪುಸ್ತಕಗಳನ್ನು ಓದಿದ್ದೇನೆ. ಜ್ಞಾನ ಸಂಪಾದನೆಗೆ ಹೆಚ್ಚಿನ ಒತ್ತು ಕೊಟ್ಟು ಸಮಯವನ್ನು ಸದುಪಯೋಗ ಪಡಿಸಿಕೊಂಡಿದ್ದೇನೆ. ಐದು ಪುಸ್ತಕಗಳನ್ನು ಬೇರೆ ವಿಚಾರಕ್ಕೆ ಸಂಬಂಧಿಸಿದಂತೆ ಬರೆದಿದ್ದೇನೆ ಎಂದು ತಿಳಿಸಿದರು.

ಸದ್ಯಕ್ಕೆ ಶಿವಯೋಗಾಶ್ರಮದಲ್ಲಿಯೇ ವಾಸ್ತವ್ಯ ಹೂಡಲಿದ್ದು, ಭಕ್ತರಿಗಾಗಿಯೇ ನಾವಿರುವುದರಿಂದ ಭಕ್ತರ ಭೇಟಿಗೂ ಅವಕಾಶವಿದೆ ಎಂದರು.

Next Article