ಸಾಕು ಮಗಳನ್ನು ಕರೆದೊಯ್ದ ಪ್ರೇಮಿ ಮತ್ತು ನೆರವಾದ ಆರೋಪಿಗಳ ಬಂಧನ
ಕಾಪು : ಸಾಕು ಮಗಳು ಮನೆಯಿಂದ ನಾಪತ್ತೆಯಾದ ಕಾರಣ ಮನನೊಂದು ನೇಣಿಗೆ ಶರಣಾದ ಸಮಾಜ ಸೇವಕ ಕೆ.ಲೀಲಾಧರ ಶೆಟ್ಟಿ ದಂಪತಿಯ ಸಾವಿಗೆ ಕಾರಣರಾದ ಸಾಕು ಪುತ್ರಿಯನ್ನು ಕಾಪು ಪೊಲೀಸರು ಕುಂಬಳೆಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಅಪ್ರಾಪ್ತ ವಯಸ್ಸಿನ ಸಾಕು ಮಗಳು, ಆಕೆಯ ಪ್ರಿಯಕರ ಮತ್ತು ಆತನಿಗೆ ನೆರವಾದ ಇತರ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ಮುಂದುವರಿಸಿದ್ದಾರೆ.
ಬಾಲಕಿಯ ಪ್ರಿಯಕರ ಶಿರ್ವ ನಿವಾಸಿ ಗಿರೀಶ್, ಆತನಿಗೆ ನೆರವಾದ ರೂಪೇಶ್, ಅಜೀಜ್ ಮತ್ತು ಜಯಂತ್ ಪೊಲೀಸ್ ವಶದಲ್ಲಿರುವ ಆರೋಪಿಗಳು. ಬಂದಿತರನ್ನು ತೀವ್ರ ವಿಚಾರಣೆಗೊಳಪಡಿಸಿರುವ ಪೊಲೀಸರು ಎರಡು ಸ್ಕೂಟಿಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಗಿರೀಶ್ ವಿರುದ್ದ ಅಪಹರಣ, ಅತ್ಯಾಚಾರ ಮತ್ತು ಪೋಕ್ಸೋ ಆಕ್ಟ್ ನಂತೆ ಪ್ರಕಾರ ದಾಖಲಾಗಿದ್ದು ಉಳಿದ ಮೂವರ ವಿರುದ್ದ ಆರೋಪಿಗೆ ಸಹಕರಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕಾಪು ಪೊಲೀಸರು ತಿಳಿಸಿದ್ದಾರೆ.
ಉಡುಪಿ ಎಸ್ಪಿ ಡಾ. ಅರುಣ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ, ಡಿವೈಎಸ್ಪಿ ಅರವಿಂದ ಕಲಗುಜ್ಜಿ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ, ಕಾಪು ಎಸ್ಸೈ ಅಬ್ದುಲ್ ಖಾದರ್, ಕ್ರೈಂ ಎಸ್ಸೈ ಪುರುಷೋತ್ತಮ್ ನೇತೃತ್ವದಲ್ಲಿ ಸಿಬಂದಿಗಳು ಕಾರ್ಯಾಚರಣೆ ನಡೆಸಿದ್ದರು.