For the best experience, open
https://m.samyuktakarnataka.in
on your mobile browser.

ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಆದ ಪಸಂದಾಗವ್ನೆ

02:36 PM Dec 04, 2023 IST | Samyukta Karnataka
ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಆದ ಪಸಂದಾಗವ್ನೆ

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ "ಕಾಟೇರಾ" ಸಿನಿಮಾ ಡಿಸೆಂಬರ್‌ 29ರಂದು ತೆರೆಗೆ ಅಪ್ಪಳಿಸಲಿದ್ದು, ಇಂದು ಈ ಚಿತ್ರದ 'ಪಸಂದಾಗವ್ನೆ ' ಎಂಬ ಹಾಡು ಆನಂದ್‌ ಆಡಿಯೋ ಅವರ ಯೂ ಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.
ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಗಾಯಕಿ ಮಂಗ್ಲಿ ಹಾಡಿದ್ದಾರೆ. ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕನಸಿನ ರಾಣಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ಅಭಿನಯದ್ದಾರೆ. ತರುಣ್ ಸುಧೀರ್ ನಿರ್ದೇಶನದ ಕಾಟೇರ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಿಸಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಸೃಷ್ಟಿಸಿರುವ ಈ ಗೀತೆಗೆ ನಟ ಡಾಲಿ ಡಾಲಿ ಧನಂಜಯ್ ಪಸಂದಾಗೈತೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಬಿಡುಗಡೆಯಾದ 2 ಗಂಟೆಯಲ್ಲಿ 3 ಲಕ್ಷಕ್ಕೂ ಅಧಿಕ ಜನ ವಿಕ್ಷಿಸಿದ್ದಾರೆ. ಈ ಹಾಡನ್ನು ನಿವೊಮ್ಮೆ ನೋಡಿ ನಿಮಗೂ ಪಸಂದಾಗತೈತಿ…