ಸಾರಿಗೆ ವ್ಯವಸ್ಥೆ ಸರಿಪಡಿಸದಿದ್ದರೆ ಹೋರಾಟ
ಸುರಪುರ: ಚುನಾವಣೆಯಲ್ಲಿ ಡಿ.ಸಿ ಪೆನಲ್ ವಿಭಾಗಿಯ ನಿಯಂತ್ರಣ ಅಧಿಕಾರಿ ಪೆನಲ್ ಆಯ್ಕೆಯಾಗಿಲ್ಲ ಎಂದು ಸುರಪುರ ಘಟಕದ ಎಲ್ಲಾ ಮಾರ್ಗಗಳನ್ನು ರದ್ದುಗೊಳಿಸಿ ಬೇರೆ ಕಡೆ ಓಡಿಸುತ್ತಿರುವ ವಿಭಾಗೀಯ ನಿಯಂತ್ರಣ ಅಧಿಕಾರಿ ನಡತೆ ಸರಿಯಲ್ಲ ಎಂದು ರಾಜೇಗೌಡ ಅವರು ಎಚ್ಚರಿಕೆ ನೀಡಿದ್ದಾರೆ.
ಸುರಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀಘ್ರವಾಗಿ ಸರಿಪಡಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಖಡಕ್ ಸಂದೇಶ ನೀಡಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ ಶಾಲೆ-ಕಾಲೇಜು ವಿದ್ಯಾರ್ಥಿಗಳು ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ದೂರಿದರು. ಸುರಪುರ ಘಟಕದಿಂದ ಸಂಚರಿಸುತ್ತಿದ್ದ ಬಸ್ಸುಗಳನ್ನು ರದ್ದುಗೊಳಿಸಿದ್ದಾರೆ. ಚಿಕ್ಕಮಗಳೂರು ಸುರಪುರ ಸೊಲ್ಲಾಪುರ್ ಹುಣಸಿಗಿ ಹೈದರಾಬಾದ್ ಸುರಪುರ ಗುಲ್ಬರ್ಗ ಸಗರನಾಡು ಮಾರ್ಗಗಳು ಗ್ರಾಮಾಂತರ ಪ್ರದೇಶದ ಬಸ್ಸುಗಳನ್ನು ಕಿತ್ತು, ಬಾಗಲಕೋಟೆ ಮುಧೋಳ ರಾಯಚೂರು ಮನಬಂದಂತೆ ಮಾರ್ಗಗಳನ್ನು ಸೃಷ್ಟಿ ಮಾಡಿದ್ದಾರೆ. ಚಾಲಕ, ನಿರ್ವಾಹಕರಿಗೆ ಕಿರುಕುಳ ಕೊಡುತ್ತಿದ್ದಾರೆ. ಸರಿಯಾಗಿ ಕೆಲಸ ಮಾಡದಿದ್ದರೆ ದಂಡ ಹಾಕುವುದು ವರ್ಗಾವಣೆ ಮಾಡುವುದು ದಂದೆ ಮಾಡಿಕೊಂಡಿದ್ದು ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಸುರಪುರ ಶಹಪುರ್ ಘಟಕಗಳಲ್ಲಿ ಕೆಲಸ ನಿರ್ವಹಿಸಲು ಯಾವೊಬ್ಬ ಅಧಿಕಾರಿಗಳು ಕೂಡ ಬರುತ್ತಿಲ್ಲ. ಎಲ್ಲರೂ ರಜೆ ಹಾಕಿ ತೆರಳಿದ್ದಾರೆ. ಈ ವಿಭಾಗಿಯ ನಿಯಂತ್ರಣ ಅಧಿಕಾರಿಗಳ ಈ ಬಗ್ಗೆ ಸಾರಿಗೆ ಸಚಿವರು ತಕ್ಷಣ ಗಮನ ಹರಿಸಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.