ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮದಲ್ಲಿ ಗೊಂದಲ

01:00 AM Feb 08, 2024 IST | Samyukta Karnataka

ಹರ್ಷ ಕುಲಕರ್ಣಿ
ಹುಬ್ಬಳ್ಳಿ: ಸರ್ಕಾರಿ ಸಾರಿಗೆ ಸಂಸ್ಥೆಯಲ್ಲಿ ನೌಕರಿ ಮಾಡಿ ಇನ್ನೇನು ನೆಮ್ಮದಿ ಜೀವನ ಕಳೆಯಬೇಕು ಅಂದುಕೊAಡಿದ್ದ ಸಾರಿಗೆ ಸಂಸ್ಥೆ ನಿವೃತ್ತ ನೌಕರರ ಕನಸಿಗೆ ರಾಜ್ಯ ಸರ್ಕಾರ ತಣ್ಣೀರೆರಚಿದೆ.
ನಿವೃತ್ತಿ ನಂತರದ ಆರ್ಥಿಕ ಸೌಲಭ್ಯಗಳನ್ನು ನೀಡದೇ ಸತಾಯಿಸುತ್ತಿದೆ. ಇದರಿಂದ ನೊಂದ ೫ ಸಾವಿರಕ್ಕೂ ಹೆಚ್ಚು ನಿವೃತ್ತರು ಬೃಹತ್ ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ತಮಗೆ ನ್ಯಾಯಯುತವಾಗಿ ಬರಬೇಕಾದ ಹಿಂಬಾಕಿ (ಅರಿರ‍್ಸ್) ಸೇರಿದಂತೆ ಇತರೆ ಸೌಲಭ್ಯ ಪಡೆದುಕೊಳ್ಳಲು ಕಚೇರಿ ಅಲೆದಾಡುತ್ತ ಬದುಕನ್ನು ಸವೆಸುತ್ತಿರುವ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ೫ ಸಾವಿರಕ್ಕೂ ಹೆಚ್ಚು ನಿವೃತ್ತರು ಸರ್ಕಾರದ ಧೋರಣೆಗೆ ರೋಸಿ
ಹೋಗಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರಿಗೆ ೨೦೧೬ರಲ್ಲಿ ಶೇ. ೧೫ರಷ್ಟು ವೇತನ ಪರಿಷ್ಕರಣೆ ಮಾಡಲಾಗಿತ್ತು. ಇದರನ್ವಯ ನಾಲ್ಕು ವರ್ಷದ ಬಳಿಕ ಅಂದರೆ ೨೦೨೦ಕ್ಕೆ ಮಾಡಬೇಕಿದ್ದ ವೇತನ ಪರಿಷ್ಕರಣೆಯನ್ನು ೨೦೨೩ಕ್ಕೆ ಮಾಡಲಾಗಿದೆ. ಇದರಿಂದ ೨೦೨೩ಕ್ಕೆ ನಿವೃತ್ತರಾದ ನೌಕರರಿಗೆ ಅನ್ಯಾಯವಾಗಿದೆ ಎಂಬುದು ಸದ್ಯದ
ಆರೋಪ.
ನಿಗಮದ ಅಭಿವೃದ್ಧಿಗೆ ಜೀವನ ಸವೆಸಿರುವ ನಿವೃತ್ತ ನೌಕರರು, ವೇತನ ಪರಿಷ್ಕರಣೆ ವಿಚಾರದಲ್ಲಿ ತಾರತಮ್ಯ ಮಾಡಿರುವ ಸರ್ಕಾರದ ವಿರುದ್ಧ ಬೀದಿಗಿಳಿದು ಅಸಮಾಧಾನ ಹೊರಹಾಕಲಿದ್ದಾರೆ. ಸದ್ಯ ಕಾರ್ಯ ನಿರ್ವಹಿಸುತ್ತಿರುವ ಸಾರಿಗೆ ಸಂಸ್ಥೆ ನೌಕರರಿಗೆ ಶೇ. ೧೫ರಷ್ಟು ವೇತನ ಪರಿಷ್ಕರಣೆ ನೀಡಿರುವ ಸರ್ಕಾರ, ನಿವೃತ್ತರಿಗೆ ಕೊಡಬೇಕಾದ ಅರಿಯರ್ಸ್ ಮರೆಯಿತೆ ಎಂಬ ಅನುಮಾನ ಕಾಡುತ್ತಿದೆ. ಇದೇ ವಿಚಾರವಾಗಿ ಸಾರಿಗೆ ನಿಗಮಗಳ ನಿವೃತ್ತ ನೌಕರರು ತಮ್ಮ
ಕುಟುಂಬ ಸಮೇತ ಪ್ರತಿಭಟನೆಗೆ ಯೋಜನೆ ರೂಪಿಸುತ್ತಿದ್ದಾರೆ.
ಏನು ಆಗಬೇಕಿತ್ತು
ಶಕ್ತಿ ಯೋಜನೆಯಿಂದಾಗಿ ಮೊದಲೇ ನಷ್ಟದಲ್ಲಿರುವ ಸಾರಿಗೆ ನಿಗಮಕ್ಕೆ ಹೊಸ ತಲೆನೋವು ಆರಂಭವಾಗಿದೆ. ನಿಯಮಾನುಸಾರ ೨೦೧೬ಕ್ಕೆ ವೇತನ ಪರಿಷ್ಕರಣೆ ಆಗಿದೆ. ಇದಾದ ಬಳಿಕ ೨೦೨೦ಕ್ಕೆ ಮತ್ತೆ ಪರಿಷ್ಕರಣೆ ಆಗಬೇಕಿತ್ತು. ಆದರೆ, ೨೦೨೦ಕ್ಕೆ ವೇತನ ಪರಿಷ್ಕರಿಸದೇ ನೇರವಾಗಿ ೨೦೨೪ಕ್ಕೆ ವೇತನ ಪರಿಷ್ಕರಣೆ ಮಾಡಲಾಗಿದೆ. ಹೀಗಾಗಿ ೮ ವರ್ಷ ವೇತನ ಪರಿಷ್ಕರಣೆ ಆಗಿಯೇ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಸದ್ಯ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಶೇ.೧೫ರಷ್ಟು ವೇತನ ಪರಿಷ್ಕರಣೆ ಆಗಿದೆ. ಆದರೆ, ೨೦೨೦, ೨೦೨೧, ೨೦೨೨, ೨೦೨೩ ಹಾಗೂ ೨೦೨೪ರ ಜನವರಿ ಒಳಗೆ ನಿವೃತ್ತರಾದವರಿಗೆ ಹಾಲಿ ದಿನದವರೆಗೂ ಹಿಂಬಾಕಿ ಕೊಡಬೇಕು ಎಂಬುದು ನಿವೃತ್ತರ ವಾದ.

Next Article