For the best experience, open
https://m.samyuktakarnataka.in
on your mobile browser.

ಸಾಲಕ್ಕೆ ಯಾರು ಹೊಣೆ

10:24 PM May 02, 2024 IST | Samyukta Karnataka
ಸಾಲಕ್ಕೆ ಯಾರು ಹೊಣೆ

ಹುಬ್ಬಳ್ಳಿ: ಕಳೆದ ಹತ್ತು ವರ್ಷಗಳಲ್ಲಿ ದೇಶದ ಸಾಲ ೧೬೮.೭೨ ಲಕ್ಷ ಕೋಟಿ ಆಗಿದೆ. ಭಾರತೀಯ ರೂಪಾಯಿ ಶೇ ೪೧.೩೭ ರಷ್ಟು ಕುಸಿದಿದೆ. ಇದಕ್ಕೆಲ್ಲ ಯಾರು ಹೊಣೆ ಎಂದು ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು.
ಇಂತಹ ಹಲವಾರು ವಿಷಯಗಳನ್ನು ಒಳಗೊಂಡ ಫ್ಲೆಕ್ಸ್‌ಳನ್ನು ಹಿಡಿದು ಸಂತೋಷ ಲಾಡ್ ಧಾರವಾಡದ ಕಲಗೇರಿ ಭಾಗದ ಜನರಲ್ಲಿ ಜಾಗೃತಿ ಮೂಡಿಸಿದರು.
ದೇಶದ ಜನರಿಗೆ ಕಳೆದ ಹತ್ತು ವರ್ಷಗಳಲ್ಲಿ ಸಾಲ ಎಷ್ಟು ಹೆಚ್ಚಳವಾಗಿದೆ. ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ. ಅಗತ್ಯ ವಸ್ತು, ತೈಲ ಬೆಲೆ ಎಷ್ಟು ಆಗಿದೆ ಎಂಬುದರ ಅರಿವು ಇರಬೇಕು. ಈ ಹತ್ತು ವರ್ಷದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಬೆಲೆ ಇಳಿಕೆಗೆ, ರೂಪಾಯಿ ಮೌಲ್ಯವರ್ಧನೆಗೆ ಏನೂ ಮಾಡಲಿಲ್ಲ. ಹೋಗಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಈ ಹತ್ತು ವರ್ಷಗಳಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರ ನೀಡಲಿಲ್ಲ. ಇದಕ್ಕೆಲ್ಲ ಯಾರು ಹೊಣೆ ಎಂಬ ಪ್ರಶ್ನೆಗಳನ್ನು ಇಟ್ಟುಕೊಂಡು ಪ್ರಚಾರ ನಡೆಸಿದರು.
ಹಿಂದೂ ಮುಸ್ಲಿಂ ವಿಷಯಗಳೇ ಚರ್ಚೆಗೆ ಬರುತ್ತಿವೆ. ಈ ಬಗ್ಗೆ ಜನರೇ ಅರಿವು ಹೊಂದಬೇಕು. ಬಿಜೆಪಿಯನ್ನು ತಿರಸ್ಕರಿಸಿ. ಕಾಂಗ್ರೆಸ್ ಯಾಕೆ ಬೇಕು ಎಂಬುದನ್ನು ಜನರೇ ತೀರ್ಮಾನಿಸಬೇಕು ಎಂದು ಮನವಿ ಮಾಡಿದರು.