ಸಾಲಗಾರರ ಕಾಟ: ವ್ಯಕ್ತಿ ಆತ್ಮಹತ್ಯೆ
02:04 PM Jan 19, 2025 IST
|
Samyukta Karnataka
ಹುಬ್ಬಳ್ಳಿ : ವ್ಯಕ್ತಿಯೋರ್ವ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಉಣಕಲ್ ದುರ್ಗಮ್ಮನ ಓಣಿ ನಿವಾಸಿ ಸಿದ್ದಪ್ಪ ಕೆಂಚಣ್ಣವರ (42) ಎಂಬಾತನೇ ಮೃತಪಟ್ಟಿದ್ದಾರೆ.
ಈತ ಮನೆಯಲ್ಲಿ ಡೆತ್ ನೋಟ ಬರೆದಿಟ್ಟು ಹುಬ್ಬಳ್ಳಿ ಹೊರವಲಯದ ಧಾರಾವತಿ ಆಂಜನೇಯ ದೇವಸ್ಥಾನದ ಬಳಿಯಲ್ಲಿ ಲಾರಿ ಚಕ್ರಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ಸದ್ಯ ಘಟನಾ ಸ್ಥಳಕ್ಕೆ ಗೋಕುಲ ಮತ್ತು ಉತ್ತರ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ರವಾನಿಸಿದ್ದಾರೆ.
ಡೆತ್ ನೋಟ್'ನಲ್ಲಿ ಮೃತ ಸಿದ್ದಪ್ಪ ತಾನು ಬಡ್ಡಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
Next Article