ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸಾವಿನ ಮನೆಗಳಿಗೆ ಸ್ಕೆಜ್: ಖದೀಮನ ಬಂಧನ

07:48 PM Jan 21, 2024 IST | Samyukta Karnataka

ಶ್ರೀರಂಗಪಟ್ಟಣ: ಸಾವಿನ ಮನೆಗಳಿಗೆ ಸ್ಕೆಚ್ ಹಾಕಿ ಬರೋಬ್ಬರಿ 36 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಸೇರಿದಂತೆ ಇತರ ಬೆಲೆ ಬಾಳುವ ಪದಾರ್ಥಗಳನ್ನು ದೋಚಿದ್ದ ಆಸಾಮಿಯೋರ್ವ ತಾಲ್ಲೂಕಿನ ಅರಕೆರೆ ಠಾಣಾ ಪೋಲೀಸರ ಬಲೆಗೆ ಸಿಲುಕಿ ಬಂಧಿತನಾಗಿದ್ದಾನೆ.
ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದ ಮನು ಅಲಿಯಾಸ್ ತಾಂಬು(23) ಬಂಧಿತ ಆರೋಪಿಯಾಗಿದ್ದಾನೆ. ಜ. 6ರಂದು ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಮಹದೇವಪುರ ಗ್ರಾಮದಲ್ಲಿ ಶಿವಕುಮಾರ್ ಎಂಬುವವರು ಮೃತಪಟ್ಟಿದ್ದು, ಅವರ ಶವಸಂಸ್ಕಾರಕ್ಕಾಗಿ ಕುಟುಂಬ ಸದಸ್ಯರು ತೆರಳಿದ್ದಾಗ ಮನೆಯ ಬೀರುವಿನಲ್ಲಿದ್ದ 135 ಗ್ರಾಂ ತೂಕದ ಚಿನ್ನದ ಒಡವೆಗಳು ಕಳ್ಳತನವಾಗಿದ್ದವು. ಈ ಸಂಬಂಧ ಆ ದಿನವೇ ಠಾಣೆಯಲ್ಲಿ ದೂರು ನೀಡಲಾಗಿತ್ತು. ಜೊತೆಗೆ ಇದೇ ರೀತಿ ಆರತಿ ಉಕ್ಕಡ ಹಾಗೂ ಪಾಂಡವಪುರ ತಾಲೂಕಿನ ಹರವು, ಡಾಮಡಹಳ್ಳಿ ಗ್ರಾಮಗಳಲ್ಲೂ ಸಹ ಇದೇ ರೀತಿಯ ಸಾವಿನ ಮನೆಗಳಲ್ಲೂ ಪ್ರಕರಣಗಳು ದಾಖಲುಗೊಂಡಿದ್ದವು.
ಜ. 16ರಂದು ಪಾಂಡವಪುರ ರೈಲ್ವೆ ನಿಲ್ದಾಣದ ಬಳಿ ಆರೋಪಿ ಮನುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿ, ಆರೋಪಿಯು ಒಟ್ಟು 10 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ತಾನು ಕಳ್ಳತನ ಮಾಡಿದ್ದ ಒಡವೆಗಳನ್ನು ಕೆಆರ್‌ಎಸ್‌ನಲ್ಲಿನ ಮುತ್ತೂಟ್ ಫೈನಾನ್ಸ್ ಪಿನ್ ಕಾರ್ಪ್, ಪಾಂಡವಪುರ ಟೌನ್‌ನಲ್ಲಿರುವ ಐಐಎಫ್‌ಎಲ್ ಫೈನಾನ್ಸ್ ಹಾಗೂ ಬನ್ನಂಗಾಡಿ ಗ್ರಾಮದ ಎಂಡಿಸಿಸಿ ಬ್ಯಾಂಕಿನಲ್ಲಿ ಅಡಮಾನ ಇಟ್ಟಿರುವುದಾಗಿಯೂ ಒಪ್ಪಿಕೊಂಡಿದ್ದಾನೆ.
ಬಂಧಿತ ಆರೋಪಿಯಿಂದ 521 ಗ್ರಾಂ ತೂಕದ ರೂ. 30.21 ಲಕ್ಷದ ಚಿನ್ನಾಭರಣ, ರೂ. 3.50 ಲಕ್ಷ ಮೌಲ್ಯದ ಕ್ಯಾಮೆರಾ ಮತ್ತು ಲೆನ್ಸ್‌ಗಳು. ರೂ. 50 ಸಾವಿರ ಮೌಲ್ಯದ ಒಂದು ಬೈಕ್ ಹಾಗೂ ರೂ. 2ಲಕ್ಷ ಮೌಲ್ಯದ ಒಂದು ಕಾರು ಸೇರಿದಂತೆ ಒಟ್ಟು ರೂ. 36 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Next Article