ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸಾಹಿತ್ಯದ ಮೂಲಕ ರಾಜಕಾರಣ ಬದಲಾವಣೆ ಸಾಧ್ಯ

04:59 PM Dec 21, 2024 IST | Samyukta Karnataka

ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯ ನಂತರ ಅನೇಕ ರಾಜಕೀಯ ಬರಹಗಳನ್ನು ನಾವು ಕಾಣಬಹುದು. ರಾಜಕಾರಣದ ಮೇಲೆ ಪ್ರಭಾವ ಬೀರಿದ ಅಂಕಣಕಾರರನ್ನು ನೋಡಿದ್ದೇವೆ

ಮಂಡ್ಯ : ಸಾಹಿತ್ಯದ ಮೂಲಕ ರಾಜಕಾರಣವನ್ನು ಬದಲಾಯಿಸಲು ಸಾಧ್ಯವಿದೆ. ಸಾಹಿತ್ಯ ಕ್ಷೇತ್ರದಲ್ಲಿರುವವರು ರಾಜಕಾರಣಕ್ಕೆ ಮಾರ್ಗದರ್ಶನ ಮಾಡಬೇಕಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಚ್.ಕೆ. ಪಾಟೀಲ್ ಅವರು ಅಭಿಪ್ರಾಯಪಟ್ಟರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆಯ ದಿನವಾದ ಇಂದು ರಾಜಮಾತೆ ಕೆಂಪನಂಜಮ್ಮಣಿ ಮತ್ತು ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಧಾನ ವೇದಿಕೆಯಲ್ಲಿ ನಡೆದ 'ಸಾಹಿತ್ಯದಲ್ಲಿ ರಾಜಕೀಯ: ರಾಜಕೀಯದಲ್ಲಿ ಸಾಹಿತ್ಯ' ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ ಮಹಾರಾಜರ ಕಾಲದಿಂದಲೂ ಸಾಹಿತ್ಯ ಪೋಷಣೆಯಾಗುತ್ತಿದೆ. ರಾಜಕಾರಣದ ಮೇಲೆ ಸಾಹಿತ್ಯ ಪ್ರಭಾವ ಉಂಟುಮಾಡಿದೆ. ಸಾಹಿತಿಯು ಆಗಿದ್ದ ಗಾಂಧೀಜಿಯವರ ಚಿಂತನೆಗಳು ಸಮಾಜದ ಬದಲಾವಣೆಗೆ ಕಾರಣವಾಗಿವೆ ಎಂದರು. ವಿಧಾನಸಭೆ, ವಿಧಾನಪರಿಷತ್ತಿನಲ್ಲಿ ಮಾಡಲಾಗುವ ಮೌಲಿಕ ಭಾಷಣವನ್ನು ಸಾಹಿತ್ಯದ ಭಾಗವಾಗಿ ಏಕೆ ಪರಿಗಣಿಸಬಾರದು? ನೆಹರೂ ಅವರು ಸಂಸತ್ತಿನಲ್ಲಿ ಮಾಡಿದ ಭಾಷಣ ಮೈ ನವಿರೇಳಿಸುತ್ತದೆ. ರಾಜಕಾರಣ ಮತ್ತು ಸಾಹಿತ್ಯಕ್ಕೂ ಸಂಬಂಧ ಇಲ್ಲ ಎನ್ನಬಾರದೆಂಬ ಅನಿಸಿಕೆಯನ್ನು ಸಚಿವರಾದ ಎಚ್.ಕೆ ಪಾಟೀಲ್ ಅವರು ವ್ಯಕ್ತಪಡಿಸಿದರು.

 ಆಶಯ ನುಡಿಗಳನ್ನಾಡಿದ ರಾಜಕೀಯ ಚಿಂತಕರಾದ ಬಿ.ಎಲ್ ಶಂಕರ್ ಅವರು ಗಾಂಧೀಜಿ ಅವರ ವಿಚಾರ, ಡಾ. ಬಿ.ಆರ್ ಅಂಬೇಡ್ಕರ್ ಅವರ ವಿದ್ವತ್ತು ಸಾಹಿತ್ಯ ರಚನೆ ಚಿಂತನೆ ಮೇಲೆ ಅಗಾಧ ಪರಿಣಾಮ ಬೀರಿವೆ. ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯ ನಂತರ ಅನೇಕ ರಾಜಕೀಯ ಬರಹಗಳನ್ನು ನಾವು ಕಾಣಬಹುದು. ರಾಜಕಾರಣದ ಮೇಲೆ ಪ್ರಭಾವ ಬೀರಿದ ಅಂಕಣಕಾರರನ್ನು ನೋಡಿದ್ದೇವೆ ಎಂದರು. ರಾಜಕಾರಣಿಗಳಿಗಿರಬೇಕಾದ ಸಾಹಿತ್ಯ ಪ್ರಜ್ಞೆ ಕುರಿತು ವಿಷಯ ಮಂಡನೆ ಮಾಡಿದ ರಾಜಕೀಯ ಚಿಂತಕರಾದ ಡಾ. ಕೆ ಅನ್ನದಾನಿ ಅವರು ಅನುಭವ ಮಂಟಪ ಎಂಬ ಮೊದಲ ಸಂಸತ್ತು ರಚಿಸಿದ ಹೆಗ್ಗಳಿಕೆ ಬಸವಣ್ಣನವರದ್ದು. ತಾರತಮ್ಯವನ್ನು ಅವರು ಹೋಗಲಾಡಿಸಿದರು. ನಾನೂ ಕೂಡ ಸಾಹಿತ್ಯದ ಜತೆ ನಂಟು ಇಟ್ಟುಕೊಂಡಿದ್ದೇನೆ ಎಂದರು. ರಾಜಕೀಯ ವಿಶ್ಲೇಷಕರಾದ ರವೀಂದ್ರ ರೇಷ್ಮೆ ಅವರು ಸಾಹಿತ್ಯ ಕೃತಿಗಳಲ್ಲಿ ಕಂಡು ಬರುವ ರಾಜಕೀಯ ಚಿತ್ರಣ ಕುರಿತು ವಿಷಯ ಮಂಡನೆ ಮಾಡಿದರು. ಕಾರ್ಯಕ್ರಮದಲ್ಲಿ ಸಮ್ಮೇಳನದ ಅಧ್ಯಕ್ಷರಾದ ಗೊ.ರು. ಚನ್ನಬಸಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಮಹೇಶ್ ಜೋಶಿ, ಶಾಸಕರಾದ ನರೇಂದ್ರಸ್ವಾಮಿ, ಜಿಲ್ಲಾಧಿಕಾರಿಯವರಾದ ಕುಮಾರ, ಇನ್ನಿತರರು ಉಪಸ್ಥಿತರಿದ್ದರು.
Tags :
#87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ#ಕನ್ನಡ#ಕನ್ನಡಜಾತ್ರೆ#ಮಂಡ್ಯ
Next Article