For the best experience, open
https://m.samyuktakarnataka.in
on your mobile browser.

ಸಿಇಟಿ: ಸಮಸ್ಯೆಗಳಿಗೆ ಸ್ಪಷ್ಟೀಕರಣ

01:45 AM Feb 06, 2024 IST | Samyukta Karnataka
ಸಿಇಟಿ  ಸಮಸ್ಯೆಗಳಿಗೆ ಸ್ಪಷ್ಟೀಕರಣ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕೆಸಿಇಟಿ ೨೦೨೪ ಅರ್ಜಿ ತಿದ್ದುಪಡಿಗೆ ಕಾಲಾವಕಾಶ ಹಾಗೂ ಅರ್ಜಿ ಕಂ ವೆರಿಫಿಕೇಶನ್ ಮಾಡ್ಯೂಲ್ ಕುರಿತು ಕೆಲವು ಸ್ಪಷ್ಟೀಕರಣ ನೀಡಿದೆ.
ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ೨೦೨೪ಕ್ಕೆ ಆನ್‌ಲೈನ್‌ನಲ್ಲಿ ರಿಜಿಸ್ಟ್ರೇಷನ್ ಪಡೆದಿರುವ ಅಭ್ಯರ್ಥಿಗಳು ಫೆಬ್ರವರಿ ೧೦ರ ನಂತರ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು. ಅರ್ಜಿ ಸಲ್ಲಿಸಲು ದತ್ತಾಂಶ ಕೇಂದ್ರದಲ್ಲಿ ಸರ್ವರ್ ಡೌನ್ ಆದ ಕಾರಣ ಸಮಸ್ಯೆ ಎದುರಾಗಿತ್ತು. ಅದನ್ನು ಬಗೆಹರಿಸಲಾಗಿದೆ. ಈ ವರೆಗೆ ೧.೨೫ ಲಕ್ಷ ಅರ್ಜಿಗಳು ಸಲ್ಲಿಕೆ ಆಗಿದೆ. ೯೮ ಸಾವಿರ ಅಭ್ಯರ್ಥಿಗಳು ಶುಲ್ಕ ಪಾವತಿಸಿದ್ದಾರೆ. ಶುಲ್ಕ ಪಾವತಿಯಾದರೆ ಅರ್ಜಿ ಪರಿಶೀಲನೆ ಯಶಸ್ವಿಯಾಗಿ ಮುಗಿದಿದೆ ಎಂದರ್ಥ ಎಂದು ಕೆಇಎ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.
ಸಿಇಟಿ-೨೦೨೪ಕ್ಕೆ ಅರ್ಜಿ ಹಾಕುವವರು ಅರ್ಜಿ ಕಂ ವೆರಿಫಿಕೇಶನ್ ಮಾಡ್ಯೂಲ್ ಕುರಿತು ಕೆಲವು ಸಂಶಯಗಳನ್ನು ಹೊಂದಿರುವ ಕಾರಣ ಕೆಇಎ ಇವುಗಳ ಕುರಿತು ಸ್ಪಷ್ಟೀಕರಣವನ್ನು ಹಾಗೂ ಮಹತ್ವದ ಸೂಚನೆಗಳನ್ನು ನೀಡಿದೆ. ಹೆಚ್ಚಿನ ಮಾಹಿತಿಗಾಗಿ https://bit.ly/3uam4Ak ಲಿಂಕ್ ನೋಡಿ
೧. ಅರ್ಜಿಯಲ್ಲಿ ಅಭ್ಯರ್ಥಿಯು ಓದಿರುವ ಬೋರ್ಡ್ನ ಹೆಸರಿನಲ್ಲಿ ವ್ಯತ್ಯಾಸವಿದ್ದರೆ, ಆತಂಕ ಪಡಬೇಕಾಗಿಲ್ಲ. ಶಾಲೆಯ ಹೆಸರು ಮತ್ತು ಅಭ್ಯಾಸ ಮಾಡಿರುವ ವರ್ಷಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುವುದು.
೨. ಸ್ಯಾಟ್ಸ್ ಡಾಟಾಬೇಸ್‌ನಲ್ಲಿ ಯಾವುದಾದರು ಒಂದು ವರ್ಷ ತಪ್ಪಾಗಿದ್ದಲ್ಲಿ ಅವುಗಳನ್ನು ಹೇಗೆ ನಮೂದಿಸಬೇಕು ಎಂದು ಉದಾಹರಣೆ ಸಹಿತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
೩. ಇತರೆ ಹಿಂದುಳಿದ ವರ್ಗದ ಜಾತಿ ಮತ್ತು ಆದಾಯವನ್ನು ಒಂದೇ ಪ್ರಮಾಣ ಪತ್ರದಲ್ಲಿ ಕಂದಾಯ ಇಲಾಖೆಯಿಂದ ನೀಡಲಾಗಿರುತ್ತಿರುವ ಕಾರಣ ಸದರಿ ಮೀಸಲಾತಿ ಕೋರಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಒಂದು ಬಾರಿ ತಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಅಪ್‌ಲೋಡ್ ಮಾಡುವುದು, ಆದಾಯ ಮಿತಿಗೆ ಮತ್ತೊಮ್ಮೆ ಸರ್ಟಿಫಿಕೇಟ್ ಅನ್ನು ಅಪ್‌ಲೋಡ್ ಮಾಡುವ ಅವಶ್ಯಕತೆ ಇರುವುದಿಲ್ಲ.
೪. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಅಭ್ಯರ್ಥಿಗಳ ಹೆಸರು ಆರ್‌ಡಿ ಸರ್ಟಿಫಿಕೇಟ್‌ನಲ್ಲಿ ಸರಿಯಾಗಿದ್ದು, ಯುಜಿಸಿಇಟಿ ೨೦೨೪ರ ಅರ್ಜಿ ತುಂಬುವಾಗ ಹೆಸರು ಹೊಂದಾಣಿಕೆ ಆಗದಿದ್ದರೆ ಅಂತಹ ಅಭ್ಯರ್ಥಿಗಳು ಕೆಇಎ ಪೋರ್ಟಲ್‌ನಲ್ಲಿರುವ ಗ್ರೀವನ್ಸ್ ಮ್ಯಾನೇಜ್ಮೆಂಟ್ ಪೋರ್ಟಲ್‌ನಲ್ಲಿ ತಮ್ಮ ಮಾಹಿತಿಯನ್ನು ಸಲ್ಲಿಸುವುದು, ಕೆಇಎ ಸಹಾಯವಾಣಿ ಇಂತಹ ಗ್ರೀವನ್ಸ್ಗಳನ್ನು ಸರಿಪಡಿಸಲು ಕ್ರಮವಹಿಸಲಾಗುವುದು.
೫. ಅಭ್ಯರ್ಥಿಗಳಿಗೆ ಅರ್ಜಿಯಲ್ಲಿ ನಮೂದಿಸಿರುವ ಮಾಹಿತಿಯನ್ನು ತಿದ್ದುಪಡಿ ಮಾಡಲು ಇಚ್ಛಿಸಿದ್ದಲ್ಲಿ ದಿನಾಂಕ ೧೦-೦೨-೨೦೨೪ ರಿಂದ ತಿದ್ದುಪಡಿ ಮಾಡಲು ಅವಕಾಶ ನೀಡಲಾಗುವುದು.
೬. ಬ್ರೌಸರ್‌ನಲ್ಲಿ ಒಂದಕ್ಕಿಂತ ಹೆಚ್ಚಿನ ಅರ್ಜಿಯನ್ನು ಏಕಕಾಲದಲ್ಲಿ ಭರ್ತಿ ಮಾಡಲು ಯತ್ನಿಸಿದ್ದರೆ, ಮೊದಲು ತೆರೆದಿದ್ದ ಅರ್ಜಿಯ ಮಾಹಿತಿ ಎರಡನೇ ಅರ್ಜಿಯಲ್ಲಿ ಸ್ವಯಂಕೃತವಾಗಿ ತೆಗೆದುಕೊಳ್ಳುತ್ತದೆ. ಆದ್ದರಿಂದ ಬ್ರೌಸಿಂಗ್ ಸೆಂಟರ್‌ನಿಂದ ಅರ್ಜಿಯನ್ನು ಭರ್ತಿ ಮಾಡಿಸುವ ಅಭ್ಯರ್ಥಿಗಳು, ಬ್ರೌಸಿಂಗ್ ಸೆಂಟರ್‌ನ ಸಿಬ್ಬಂದಿಯವರಿಗೆ ಸದರಿ ಮಾಹಿತಿಯನ್ನು ತಿಳಿಸುವುದು.
೭. ತಪ್ಪಾಗಿ ಸ್ಯಾಟ್ಸ್ ಸಂಖ್ಯೆಯನ್ನು ನಮೂದು ಮಾಡಿರುವ ಅಥವಾ ಬೇರೆ ಅಭ್ಯರ್ಥಿಗಳು ತಮ್ಮ ಸ್ಯಾಟ್ಸ್ ಸಂಖ್ಯೆಯನ್ನು ನಮೂದು ಮಾಡಿರುವ ಕಾರಣ, ತಮಗೆ ಅರ್ಜಿಯನ್ನು ತುಂಬಲು ನಿಷೇಧಿಸುವ ಹಿನ್ನೆಲೆಯಲ್ಲಿ, ಇಂತಹ ಅಭ್ಯರ್ಥಿಗಳು ತಮ್ಮ ಗ್ರೀವನ್ಸ್ ಅನ್ನು ಗ್ರೀವನ್ಸ್ ಮ್ಯಾನೇಜ್ಮೆಂಟ್ ಪೋರ್ಟಲ್‌ನಲ್ಲಿ ನಮೂದಿಸಿದ್ದಲ್ಲಿ, ಅದನ್ನು ಸರಿಪಡಿಸಲು ಕ್ರಮವಹಿಸಲಾಗುವುದು.