ಸಿಎಂ ಜೊತೆ ನಾವೆಲ್ಲ ಇದ್ದೇವೆ
ಬಳ್ಳಾರಿ: ಪ್ರಾಸಿಕ್ಯೂಶನ್ ಕೋರಿ ರಾಜ್ಯಪಾಲರು ಜಾರಿ ಮಾಡಿದ ನೋಟಿಸ್ ಹಿಂಪಡೆಯುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಅವರು ಅದನ್ನು ಹಿಂಪಡೆಯುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಪ್ರಥಾಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬಳ್ಳಾರಿಯ ತೋರಣಗಲ್‌ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಅವರು ಮುಡಾ ಹಗರಣ ಬಿಜೆಪಿಯವರ ಸೃಷ್ಠಿಯೇ ವಿನಃ ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯಾವ ಪಾತ್ರವೂ ಇಲ್ಲ. ದೇಶದಲ್ಲಿ ಜನಪರ ಆಡಳಿತ ನೀಡುವ ಸರಕಾರಗಳನ್ನು ಬಿಜೆಪಿಗೆ ಎಂದೂ ಸಹಿಸುವುದಿಲ್ಲ. ಆಂಧ್ರ, ಮಹಾರಾಷ್ಟ್ರ, ದೆಹಲಿ ಸೇರಿ ಎಲ್ಲವೂ ಮುಗಿದವು ಈಗ ಕರ್ನಾಟಕ ರಾಜ್ಯದ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಬಿಜೆಪಿ ಮುಂದಾಗಿದೆ. ಅದು ನಡೆಯುವುದಿಲ್ಲ. ದೇಶದಲ್ಲಿ ಕಾನೂನು ಎಲ್ಲರಿಗಿಂತಲೂ ದೊಡ್ಡದು ಕಾನೂನು ಗೆದ್ದ ಇತಿಹಾಸವಿದೆ. ರಾಜ್ಯಪಾಲರು ಸಾಂವಿಧಾನಿಕ ಹುದ್ದೆಯಲ್ಲಿರುವವರು ಸತ್ಯ, ಅಸತ್ಯವೂ ಅವರಿಗೆ ತಿಳಿದಿದೆ. ನಾವು ಸಂಪುಟದಲ್ಲಿ ತೆಗೆದುಕೊಂಡ ತೀರ್ಮಾನವನ್ನು ರಾಜ್ಯಪಾಲರು ಗೌರವಿಸುತ್ತಾರೆ ಎನ್ನುವ ನಂಬಿಕೆ ಇದೆ. ಒಂದು ವೇಳೆ ಪ್ರಾಸಿಕ್ಯೂಶನ್ ಅನುಮತಿ ಪಡೆದರೆ ಸಿಎಂ ಸಿದ್ದ ರಾಮಯ್ಯ ಅವರನ್ನು ಒಂಟಿ ಮಾಡುವುದಿಲ್ಲ. ನಾವೆಲ್ಲ ಅವರ ಜತೆಗೆ ಇರುತ್ತೇವೆ. ಅಬ್ರಾಂಹ ಅವರು ಹಾಕಿರುವ ಎಲ್ಲ ಕೇಸ್ ಗಳ ತನಿಖೆಯೂ ನಡೆಯಲಿ ಎಲ್ಲ ಕೇಸ್‌ಗಳಿಗೂ ಪ್ರಾಸಿಕ್ಯೂಶನ್ಗೆ ಅನುಮತಿ ಪಡೆಯಲಿ ಎಂದು ಮಧುಬಂಗಾರಪ್ಪ ಹೇಳಿದರು.