For the best experience, open
https://m.samyuktakarnataka.in
on your mobile browser.

ಸಿಎಂ, ಡಿಸಿಎಂ ಕುರ್ಚಿ ಕಿತ್ತಾಟ, ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ

04:52 PM Jun 30, 2024 IST | Samyukta Karnataka
ಸಿಎಂ  ಡಿಸಿಎಂ ಕುರ್ಚಿ ಕಿತ್ತಾಟ  ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ

ಹಾವೇರಿ: ರಾಜ್ಯ ಸರ್ಕಾರದಲ್ಲಿ ಬರಿ ಖುರ್ಚಿಯ ಕಚ್ಚಾಟ ನಡೆದಿದೆ. ಇಷ್ಟು ಅನುಭವ ಇರುವ ಸಿಎಂ, ಡಿಸಿಎಂ, ಮಂತ್ರಿಗಳಿದ್ದರೂ ಖುರ್ಚಿಗಾಗಿ ಕಿತ್ತಾಟ ಮಾಡುವುದು ಕರ್ನಾಟಕದ ಹಿತದೃಷ್ಟಿಯಿಂದ ಸರಿ ಅಲ್ಲ. ಈ ಸರಕಾರವನ್ನು ಜನಸಾಮಾನ್ಯರು ಅತ್ಯಂತ ಖಂಡನೀಯವಾಗಿ ನೋಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಬೀಳುತ್ತದೆ ಎಂದು ಬಸವರಾಜ್ ಬೊಮ್ಮಾಯಿ ಹಗಲುಗನಸು ಕಾಣುತ್ತಿದ್ದಾರೆ. ಕೇಂದ್ರ ಸರ್ಕಾರದ ಸ್ಥಿತಿ ಬಗ್ಗೆ ಯೋಚನೆ ಮಾಡಲಿ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್‌ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಬಸವರಾಜ ಬೊಮ್ಮಾಯಿ, ಸಲೀಂ ಅಹ್ಮದ್‌ ವಿಧಾನ ಪರಿಷತ್ ಸದಸ್ಯರು ವಿಧಾನಸಭೆಯಲ್ಲಿ ಏನು ಆಗುತ್ತೆ..? ಮಂತ್ರಿ ಮಂತ್ರಿಗಳ ನಡುವೆ ಏನಾಗುತ್ತದೆ.? ಸಿಎಂ, ಡಿಸಿಎಂ ನಡುವೇ ಏನಾಗುತ್ತಿದೆ ಎಂದು ತಿಳಿದುಕೊಳ್ಳಲಿ ಅವರಿಗೆ ಎಲ್ಲವು ಗೊತ್ತಿದ್ದು ಹೀಗೆ ಹೇಳುತ್ತಿದ್ದಾರೋ ಅಥವಾ ಅವರ ಗಮನಕ್ಕೆ ಇಲ್ಲವೊ ನನಗೆ ಗೊತ್ತಿಲ್ಲಾ ಸಲೀಂ ಅಹ್ಮದ್‌ ಬಗ್ಗೆ ನನಗೆ ಕನಿಕರ ಬರುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚುತ್ತಿದ್ದರೂ ಹೀಗೆ ಹೇಳಿದರೆ ನಾನು ಏನು ಹೇಳಲಿ ಎಂದರು.
ಶಾಸಕರಿಗೆ ನೀಡುವ ಬತ್ತೆ, ಚಹಾ ಕುಡಿಯಲಿಕ್ಕೆ ಸಾಲುವುದಿಲ್ಲಾ ಎಂದು ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯು.ಟಿ ಖಾದರ್ ಯಾವ ಆಧಾರದ ಮೇಲೆ ಹೇಳಿದ್ದಾರೆ ನನಗೆ ಗೊತ್ತಿಲ್ಲ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆಯಾಗಲಿ ಎಂದರು.
ಡೆಂಗ್ಯೂ ಮುನ್ನೆಚ್ಚರಿಕೆ ವಹಿಸಿ
ರಾಜ್ಯದಲ್ಲಿ ಡೆಂಗ್ಯೂ ಮಹಾಮಾರಿ ಹಾವಳಿ ಕುರಿತು ಮಾತನಾಡಿದ ಅವರು, ಒಂದು ಕಾಲದಲ್ಲಿ ಹೇಗೆ ಕಾಲರಾ, ಮಲೇರಿಯಾ ಹೇಗೆ ಬಂದಿತ್ತೊ ಹಾಗೆ ಈಗಾ ಡೆಂಗ್ಯೂ ಬಂದಿದೆ
ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಳ್ಳಬೇಕು. ಅಧಿಕಾರಿಗಳು ಯಾವುದೇ ಮುಂಜಾಗ್ರತ ಕ್ರಮ ತೆಗೆದುಕೊಳ್ಳುವುದಿಲ್ಲಾ ಹೀಗಾಗಿ ಡೆಂಗ್ಯೂ ಉಲ್ಬಣವಾಗುತ್ತದೆ ಆಗ ಮೇಲಧಿಕಾಗಳ ಗಮನಕ್ಕೆ ತರುತ್ತಾರೆ. ನಾನು ಡಿಸಿ, ಡಿಎಚ್ಓ, ಡಿ.ಎಸ್‌ಗೆ ಆಗ್ರಹ ಮಾಡುತ್ತೇನೆ ಡೆಂಗ್ಯೂ ಪ್ರಕರಣದ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಸೂಕ್ತ ಚಿಕಿತ್ಸೆ ನೀಡಬೇಕು ಎಂದರು.
ಡೆಂಗ್ಯೂ ಡೇತ್ ಕೇಸ್ ಮರೆಮಾಚುತ್ತಿದ್ದಾರೆ ಎಂಬ ಆರೋಪದ‌ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡೆಂಗ್ಯೂವಿನಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಅಧಿಕಾರಿಗಳು ಸರಕಾರಿ ಆಸ್ಪತ್ರೆಯ ಸಂಖ್ಯೆ ಮಾತ್ರ ಗಣನೆಗೆ ತೆಗೆದುಕೊಳ್ಳುತ್ತಿದ್ದಾರೆ. ಡೆಂಗ್ಯೂ ಸೊಂಕಿತರು ಹುಬ್ಬಳ್ಳಿ ದಾವಣಗೆರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಅವುಗಳನ್ನು ಲೆಕ್ಕಕ್ಕೆ ತೆಗೆದು ಕೊಳ್ಳಬೇಕು ಎಂದು ಆಗ್ರಹಿಸಿದರು.