ಸಿಎಂ ಬಂದುಹೋದ ಮೇಲೆ ಗೇಟ್ ಹೊಂದಿಸಲಾಗುವುದು: ಬಾದರ್ಲಿ
ಕೊಪ್ಪಳ: ತುಂಗಭದ್ರಾ ಜಲಾಶಯದ ಗೇಟ್ ಕಿತ್ತು ಹೋಗಿದ್ದು, ಇವತ್ತು ಸಂಜೆಯಿಂದ ಗೇಟ್ ಫಿಟ್ ಮಾಡುವ ಕೆಲಸ ಶುರುವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದು ಹೋದ ಮೇಲೆ ಕೆಲಸ ಶುರು ಮಾಡುತ್ತೇವೆ ಎಂದು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ತಾಲ್ಲೂಕಿನ ಬಸಾಪುರ ಬಳಿಯ ಖಾಸಗಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟರ್ಸಗಳನ್ನು ಹೇಗೆ ಹೊಂದಾಣಿಕೆ ಮಾಡಬೇಕು ಎಂಬುದರ ಬಗ್ಗೆ ಚರ್ಚೆಯಾಗಿದೆ. ಸಿಎಂ ಬಂದ ಮೆಲೆ ಅವರ ಜೊತೆ ಚರ್ಚೆ ಮಾಡಿ, ಇವತ್ತು ಸಂಜೆಯಿಂದ ಶೆಟರ್ಸ್ ಸೆಟ್ ಮಾಡುವ ಕೆಲಸ ಮಾಡಲಾಗತ್ತೇವೆ. 20 ಮೀಟರ್, 12 ಮೀಟರ್ ಮದ್ಯ ಕಟ್ ಮಾಡಿ, ಶೆಟರ್ಸ್ ಹಾಕುವ ಬಗ್ಗೆ ಚರ್ಚೆ ಮಾಡಲಾಗಿದೆ.
17ರಿಂದ ಮಳೆಯಿಂದ ಪ್ರವಾಹದ ಮೂನ್ಸೂಚನೆ ಇದೆ. ಇದರಿಂದ ಈಗ ಗೇಟ್ ಹೊಂದಿಸಿದರೆ, ಬರುವ ನೀರನ್ನು ಉಳಿಸುವ ಉದ್ದೇಶ ಇದೆ ಎಂದರು.
ಜಲಾಶಯದ ಇಂಜಿನಿಯರ್ ಆಗಿದ್ದ ಕನ್ನಯ್ಯ ನಾಯ್ಡು ಅವರ ಜೊತೆ ಚರ್ಚೆ ಮಾಡಿದ್ದೇವೆ. ನೀರಿನ ಜೊತೆ ಗೇಟ್ ಅಳವಡಿಸಲು ಸಾಧ್ಯಸಾಧ್ಯತೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ. ಕನ್ನಯ್ಯ ನಾಯ್ಡು ಅವರ ಈ ಪ್ರಯತ್ನದಿಂದ ನೀರು ಉಳಿಯುವ ಬರವಶೆ ಇದೆ, ಪ್ರಯತ್ನ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಡ್ಯಾಂ ಆಧುನೀಕರಣ ಮಾಡಲು ಸರ್ಕಾರಕ್ಕೆ ಬೋರ್ಡ್ ಮೂಲಕ ಪ್ರಸ್ಥಾವನೆ ಕಳಿಸಲು ತೀರ್ಮಾನ ಮಾಡಲಾಗಿದೆ. ಜಲಾಶಯ ನಿರ್ವಹಣೆ ಮಾಡಬೇಕಾಗಿರುವುದು ಟಿ.ಬಿ.ಬೋರ್ಡ್ ಆಗಿದ್ದು, ಇದು ಕೇಂದ್ರ ಸರ್ಕಾರದ ಅಧೀನದಲ್ಲಿದೆ ಎಂದರು.