ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸಿಎಂ ಬಳಸಿದ ಪದಕ್ಕೆ ತೀವ್ರ ಆಕ್ಷೇಪ: ಪ್ರತಿಪಕ್ಷ ಸಭಾತ್ಯಾಗ

11:22 PM Feb 15, 2024 IST | Samyukta Karnataka

ವಿಧಾನ ಪರಿಷತ್ತು: ಪ್ರಶ್ನೋತ್ತರ ಕಲಾಪದಲ್ಲಿ ಪ್ರತಿಪಕ್ಷಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಸಿದ ಪದಗಳು ಮೇಲ್ಮನೆಯಲ್ಲಿ ಗದ್ದಲ ಕೋಲಾಹಲ ಸೃಷ್ಟಿಗೆ ಕಾರಣವಾಗಿ ಸಿಎಂ ಕ್ಷಮೆ ಕೋರಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದು ಸಭಾತ್ಯಾಗ ಮಾಡಿದವು.
ಪ್ರಶ್ನೋತ್ತರ ಕಲಾಪ ಆರಂಭವಾಗಿ ಮೊದಲನೇ ಪ್ರಶ್ನೆ ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ್ ಅವರದ್ದಾಗಿತ್ತು. ರಾಜ್ಯದಿಂದ ಕೇಂದ್ರಕ್ಕೆ ಹೆಚ್ಚು ತೆರಿಗೆ ಹೋದರೂ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ಇಳಿಮುಖ ವಾಗುತ್ತಿರುವುದು, ಕೇಂದ್ರ ಸರ್ಕಾರ ತೆರಿಗೆ ಪಾಲನ್ನು ನೀಡಲು ತಾರತಮ್ಯ ನೀತಿಯನ್ನು ಅನುಸರಿಸುತ್ತಿರುವುದು ರಾಜ್ಯದ ಗಮನಕ್ಕೆ ಬಂದಿದೆಯೇ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಉತ್ತರ ನೀಡುವಾಗ ನಮ್ಮ ಪಾಲನ್ನು ನೀಡುತ್ತಿಲ್ಲ. ರಾಜ್ಯದಿಂದ ಹೆಚ್ಚು ತೆರಿಗೆ ಹೋದರೂ ನಮಗೆ ಬರುತ್ತಿರುವ ಪಾಲು ಕಡಿಮೆ ಎಂದು ದೀರ್ಘ ಉತ್ತರ ನೀಡಲು ಹೋದಾಗ ಇದಕ್ಕೆ ಪ್ರತಿಪಕ್ಷಗಳ ಸದಸ್ಯರು ಆಕ್ಷೇಪಿಸಿ ಪ್ರಶ್ನೋತ್ತರ ಕಲಾಪದಲ್ಲಿ ರಾಜಕೀಯ ಭಾಷಣ ಮಾಡುತ್ತಿದ್ದಾರೆ ಎಂದರು.
ಈ ವೇಳೆ ಎರಡೂ ಕಡೆಯ ಸದಸ್ಯರು ವಾದ ವಿವಾದಕ್ಕೆ ಇಳಿದರು. ಕೆಲ ಕಾಲ ಮಾತಿನ ಚಕಮಕಿಯೂ ನಡೆಯಿತು. ಈ ವೇಳೆ ಸಭಾಪತಿ ಮಧ್ಯ ಪ್ರವೇಶಿಸಿ ಕುಳಿತುಕೊಳ್ಳುವಂತೆ ಕೋರಿದರೂ ಸದಸ್ಯರು ಸುಮ್ಮನಾಗಲಿಲ್ಲ. ಈ ವೇಳೆ ಮುಖ್ಯಮಂತ್ರಿ ಎದ್ದು ನಿಂತು ನೀವು ಗೂಂಡಾಗಿರಿ ರೀತಿ ಮಾಡಿದರೆ ಅದಕ್ಕೆ ನಾವು ಹೆದರುವುದಿಲ್ಲ. ರಾಜ್ಯದ ೭ ಕೋಟಿ ಜನರು ನಿಮ್ಮನ್ನ ಛೀ ಥೂ ಎಂದು ಉಗಿಯುತ್ತಿದ್ದಾರೆ ಎಂದರು. ಇದರಿಂದ ಗದ್ದಲ ಮತ್ತಷ್ಟು ಹೆಚ್ಚಾಯಿತು. ಬೇಸತ್ತ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಲಾಪವನ್ನು ೧೦ ನಿಮಿಷ ಕಾಲ ಮುಂದೂಡಿದರು. ಮ. ೧.೧೫ ಗಂಟೆ ನಂತರ ಕಲಾಪ ಆರಂಭವಾಗುತ್ತಿದ್ದಂತೆ, ಜೆಡಿಎಸ್ ಸದಸ್ಯ ಶರವಣ ಮಾತನಾಡಿ, ಪ್ರಶ್ನೋತ್ತರಕ್ಕೆ ಎಷ್ಟು ಸಮಯ ನಿಗದಿ ಇದೆ. ಐದು ನಿಮಿಷದವರೆಗೆ ಮಾತನಾಡಬಹುದು. ಆದರೆ ಸಿಎಂ ಭಾಷಣದ ರೀತಿ ಮಾತನಾಡಿದ್ದಾರೆ, ಒಂದು ಪ್ರಶ್ನೆಗೆ ಎಷ್ಟು ಸಮಯ ನಿಗದಿಯಾಗಿದೆ. ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ನಮ್ಮನ್ನು ಉದ್ದೇಶಿಸಿ ಬಳಸಿದ ಕೆಲ ಪದಗಳು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಈ ವೇಳೆ ಮತ್ತೆ ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಸದಸ್ಯರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾತನಾಡಿ, ಕೆಲವು ಪದಗಳನ್ನು ಕಡತದಿಂದ ತೆಗೆಯುವಂತೆ ಸೂಚಿಸಿದ್ದೇನೆ. ನನ್ನ ಸೌಜನ್ಯ ದುರುಪಯೋಗಪಡಿಸಿಕೊಳ್ಳಬೇಡಿ, ಸದನ ನಡೆಸಲು ಅವಕಾಶ ನೀಡಿ ಎಂದು ಎಚ್ಚರಿಸಿದರು.
ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಿಎಂ ಈ ರೀತಿ ಪದ ಬಳಸಿದ್ದಕ್ಕೆ ನೋವಾಗಿದೆ. ಹಾಗಾಗಿ ಅವರು ವಿಷಾದ ವ್ಯಕ್ತಪಡಿಸಬೇಕು ಎಂದು ಮನವಿ ಮಾಡಿದರು. ಬಿಜೆಪಿ ಬೇಡಿಕೆಯನ್ನು ಕಾನೂನು ಸಚಿವ ಎಚ್.ಕೆ ಪಾಟೀಲ್ ತಳ್ಳಿ ಹಾಕಿ ಸಭಾಪತಿಗಳು ಕೆಲ ಪದ ಕಡತದಿಂದ ತೆಗೆಸಿದ್ದಾರೆ. ಇದರಿಂದ ವಿಷಯ ಅಲ್ಲಿಗೆ ಮುಕ್ತಾಯವಾಗಿದೆ. ಹಾಗಾಗಿ ಅದರ ಬಗ್ಗೆ ಮತ್ತೆ ಚರ್ಚೆ, ಮತ್ತೆ ಪ್ರಸ್ತಾಪ ಸರಿಯಲ್ಲ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿ ತಮ್ಮ ಮಾತಿಗೆ ವಿಷಾದ ವ್ಯಕ್ತಪಡಿಸಲಿಲ್ಲ. ತಾವು ಗೂಂಡಾಗಳು ಎಂದಿಲ್ಲ ಎಂದರು. ಆದರೆ, ಪ್ರತಿಪಕ್ಷ ಸದಸ್ಯರು ಮುಖ್ಯಮಂತ್ರಿಗಳು ವಿಷಾದ ವ್ಯಕ್ತಪಡಿಸಲಿ ಇಲ್ಲವೇ ಕ್ಷಮೆ ಕೇಳಲಿ ಎಂದು ಪಟ್ಟು ಹಿಡಿದು ಸಭಾತ್ಯಾಗ ಮಾಡಿದರು.

Next Article