For the best experience, open
https://m.samyuktakarnataka.in
on your mobile browser.

ಸಿಎಂ‌ ರಾಜೀನಾಮೆ

12:10 PM Jan 28, 2024 IST | Samyukta Karnataka
ಸಿಎಂ‌ ರಾಜೀನಾಮೆ

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ರಾಜೀನಾಮೇ ನೀಡುವ ಮೂಲಕ
ಬಿಹಾರದಲ್ಲಿ ಆರ್‌ಜೆಡಿ ಹಾಗೂ ಜೆಡಿಯು ಸಮ್ಮಿಶ್ರ ಸರ್ಕಾರ ಪತನವಾಗಿದೆ.
ಆರ್‌ಜೆಡಿ ಜತೆಗಿನ ಮೈತ್ರಿಗೆ ವಿದಾಯ ಹೇಳಿದ್ದಾರೆ. ತಮ್ಮ ಬೆಂಬಲಿಗರ, ಶಾಸಕರ ಸಭೆ ನಡೆಸಿದ ನಿತೀಶ್‌ ಕುಮಾರ್‌ ಅವರು ನಂತರ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದರು. ನಿತೀಶ್‌ ಕುಮಾರ್ ಅವರು ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಳೆದ ಒಂಬತ್ತು ವರ್ಷಗಳಲ್ಲಿ ನಾಲ್ಕನೇ ಬಾರಿಗೆ ನಿತೀಶ್‌ ಅವರು ರಾಜಕೀಯ ನಿರ್ಧಾರವನ್ನು ಬದಲಿಸಿದ್ದಾರೆ, ಎನ್‌ಡಿಎ ತೊರೆದ 18 ತಿಂಗಳಲ್ಲೇ ನಿತೀಶ್ ಅವರು ಎನ್‌ಡಿಎ ಮೈತ್ರಿಕೂಟಕ್ಕೆ ಮತ್ತೆ ಮರಳಿದ್ದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.