For the best experience, open
https://m.samyuktakarnataka.in
on your mobile browser.

ಸಿಎಂ ವಿಚಾರಣೆ ನಡೆಸುವಂತೆ ಸ್ನೇಹಮಯಿ ಕೃಷ್ಣ ಮನವಿ

03:34 PM Oct 14, 2024 IST | Samyukta Karnataka
ಸಿಎಂ ವಿಚಾರಣೆ ನಡೆಸುವಂತೆ ಸ್ನೇಹಮಯಿ ಕೃಷ್ಣ ಮನವಿ

ಮೈಸೂರು: ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ಧ ದಾಖಾಲಾಗಿರುವ ಎಫ್​ಐಆರ್​ ಸಂಬಂಧ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಲೋಕಾಯುಕ್ತ ಕಚೇರಿಗೆ ಇಂದು 25 ಪುಟಗಳ ಮಾಹಿತಿಯನ್ನು ನೀಡಿ ದೂರುದಾರ ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಸಿಎಂ ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂಬ ಬಗ್ಗೆ ಕೆಲವು ಮಾಹಿತಿಗಳನ್ನು ಲೋಕಾಯುಕ್ತರಿಗೆ ನೀಡಿದ್ದೇನೆ. ಸಿಎಂ ಹೈಕೋರ್ಟ್​ಗೆ ಸಲ್ಲಿಸಿರುವ ರಿಟ್‌ ಅರ್ಜಿಯ ಅಂಶಗಳನ್ನು ಉಲ್ಲೇಖ ಮಾಡಿರುವ ಮಾಹಿತಿಯನ್ನ ಲೋಕಾಯುಕ್ತ ಎಸ್​ಪಿ ಅವರಿಗೆ 25 ಪುಟದಲ್ಲಿ ನೀಡಿದ್ದೇನೆ. ಹೈಕೋರ್ಟ್​ನಲ್ಲಿ ಸಿಎಂ ಮಾಹಿತಿಯನ್ನು ಕೊಡದೇ ಮುಚ್ಚಿಟ್ಟಿದ್ದಾರೆ. ಆ ಅಂಶಗಳನ್ನು ಸಹ ನಾನು ಲೋಕಾಯುಕ್ತರಿಗೆ ಪತ್ರದ ಮೂಲಕ ಕೊಟ್ಟಿದ್ದೇನೆ. ವೈಟ್ನರ್‌ ಹಾಕಿರುವ ವಿಚಾರವನ್ನು ಸಹ ಮುಚ್ಚಿಟ್ಟಿದ್ದಾರೆ. ಈ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಈ 25 ಪುಟಗಳ ಮಾಹಿತಿ ನೀಡಿದ್ದೇನೆ ಎಂದರು. ಸಿಎಂ ಹೋದ ಕಡೆ ಪ್ರಚಾರಗಳಲ್ಲಿ ಪ್ರಚೋದನೆ ಹೇಳಿಕೆಗಳನ್ನು ಕೊಡ್ತಿದ್ದಾರೆ. ಇದರಿಂದ ನನಗೆ ನನ್ನ ಕುಟುಂಬಕ್ಕೆ ಭಯವಿದೆ. ಲೋಕಾಯುಕ್ತ ಕಚೇರಿಯಲ್ಲಿ ಸಿಸಿಟಿವಿ ಇಲ್ಲ. ಸುಪ್ರೀಂ ಕೋರ್ಟ್ ಸೂಚನೆಯಂತೆ ಲೋಕಾಯುಕ್ತಕ್ಕೆ ಸಿಸಿಟಿವಿ ಅಳವಡಿಕೆ ಮಾಡಿ ಎಂದಿದ್ದೇನೆ. ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಮುಖ್ಯಮಂತ್ರಿಯನ್ನ ವಿಚಾರಣೆಗೆ ಒಳಪಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Tags :