For the best experience, open
https://m.samyuktakarnataka.in
on your mobile browser.

ಸಿಎಂ ಸಮ್ಮುಖದಲ್ಲಿ ನಕ್ಸಲ್ ಶರಣಾಗತಿ

12:33 PM Jan 08, 2025 IST | Samyukta Karnataka
ಸಿಎಂ ಸಮ್ಮುಖದಲ್ಲಿ ನಕ್ಸಲ್ ಶರಣಾಗತಿ

ಚಿಕ್ಕಮಗಳೂರು: ಜಿಲ್ಲಾಡಳಿತ ಮುಂದೆ ಶರಣಾಗಬೇಕಿದ್ದ ಆರು ಜನ ನಕ್ಸಲರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶರಣಾಗತಿಯಾಗಲಿದ್ದಾರೆ.

ಚಿಕ್ಕಮಗಳೂರು ಜಿಲ್ಲಾಡಳಿತ ಮುಂದೇ ಶರಣಾಗತಿಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳ ಲಾಗಿತ್ತು ಆದರೆ. ಮುಖ್ಯಮಂತ್ರಿ ಗಳ ಆಹ್ವಾನದ ಮೇರೆಗೆ ಬೆಂಗಳೂರಿನಲ್ಲಿ ಶರಣಾಗಲಿ ದ್ದಾರೆ.
ಆರು ಜನ ನಕ್ಸಲರ ಪೋಷಕರು ಚಿಕ್ಕಮಗಳೂರು ಜಿಲ್ಲಾಡಳಿದ ಮುಂದೇ ತಮ್ಮವರನ್ನು ನೋಡಲು ಕಾತುರದಿಂದ ಕಾದಿದ್ದರು. ಆದರೆ, ದಿಢೀರ್ ಬದಲಾವಣೆ ಗೊಂಡಿದ್ದು, ಪೋಷರನ್ನು ಬೆಂಗಳೂರಿಗೆ ಕಳಿಸಲು ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಇಂದು ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಬೆಂಗಳೂರಿನಲ್ಲಿ ಸಿ.ಎಂ.ಸಮ್ಮುಖದಲ್ಲಿ ಶರಣಾಗಲಿದ್ದಾರೆ.
ನರಸಿಂಹರಾಜಪುರ ವರೆಗೂ ಆಗಮಿಸಿದ ನಕ್ಸಲರು ನಂತರ ಸಿ.ಎಂ ಆದೇಶದ ಮೇರೆಗೆ ಮಾರ್ಗ ಬದಲಾಯಿಸಿ ಬೆಂಗಳೂರಿಗೆ ತೆರಳಿದ್ದಾರೆ.

ಚಿಕ್ಕಮಗಳೂರು ಆಗಮಿಸಿದ ಸಂಘಟನೆ ಮುಖಂಡರು ಬೆಂಗಳೂರಿನತ್ತಾ ಮುಖ ಮಾಡಿದ್ದಾರೆ.
ಬೆಂಗಳೂರಿಗೆ ತೆರಳುವ ವಿಚಾರವನ್ನು ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡ ಕೆ.ಎಲ್.ಅಶೋಕ್ ಘೋಷಿಸಿದರು.

Tags :