ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸಿದ್ದರಾಮಯ್ಯ ಅವರೇ ‌ನಿಮ್ಮ ೯೯ ತಪ್ಪುಗಳು ಈಗಾಗಲೇ ‌ಆಗಿವೆ…

01:40 PM Nov 04, 2024 IST | Samyukta Karnataka

ರಾಜ್ಯದಲ್ಲೂ ವಕೀಲರ ನೇತೃತ್ವದಲ್ಲಿ ಕಮಿಟಿ‌ ಮಾಡಿದ್ದೆವೆ. ಯಾರಿಗೆ ಅನ್ಯಾಯ ಆಗಿದೆ ಅವರೆಲ್ಲ ವಕೀಲರನ್ನ ಸಂಪರ್ಕ ಮಾಡಿ ನಿಮಗೆ ಆದ ಅನ್ಯಾಯ ಹೇಳಿಕೊಳ್ಳಿ. ರೈತರು ಯಾವುದೆ ಕಾರಣಕ್ಕೂ ಹೆದರಬೇಡಿ. ನಾವು ಒಂದಿಂಚೂ ಭೂಮಿಯನ್ನು ವಕ್ಫಗೆ ಬಿಟ್ಟುಕೊಡುವುದಿಲ್ಲ

ಬಳ್ಳಾರಿ: ರಾಜ್ಯದಲ್ಲಿ ‌ನಡೆದ ವಕ್ಫ ಆಸ್ತಿ ನೋಂದಣಿ ಪ್ರಕರಣ ವಿರೋಧಿಸಿ ರಾಜ್ಯ ಬಿಜೆಪಿ ‌ಅಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬಳ್ಲಾರಿಯ ರಾಯಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್ ಬಹಿರಂಗ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾಕಾರರು ಡಿಸಿ‌ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮಾತನಾಡಿ,‌ ದುಷ್ಟ ಕಾಂಗ್ರೆಸ್ ಸರಕಾರದ ‌ವಿರುದ್ದ ಬಳ್ಳಾರಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಉಪಚುನಾವಣೆ ಸಲುವಾಗಿ‌ ನಾವು ಹೋರಾಟ ಮಾಡುತ್ತೇವೆ ಎನ್ನುವ ಭಾವನೆ ತೆಗೆಯರಿ. ರೈತ ಪರ ಹೋರಾಟ ಮಾಡ್ತಾ ಇದೀವಿ.
ರಾಜರ ಆಡಳಿತದ ಅವಧಿಯಲ್ಲಿನ ದಿನಗಳು‌ ಈಗ ರಾಜ್ಯದಲ್ಲಿ ‌ನಡೆದಿವೆ. ವಕ್ಫ ಕಾಯಿದೆಯನ್ನು ದುರುಪಯೋಗ ‌ಪಡೆಸಿಕೊಂಡು ಜಮೀನು ಹೊಡೆಯುವ ಕೆಲಸ ನಡೆಯುತ್ತಿದೆ. ರಾಜ್ಯದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯ ‌ನೇತೃತ್ವದ ಸರಕಾರ ಮಾಡ್ತಾ ಇದೆ.
ದೇಶ ವಿರೋಧಿ ‌ಮಂತ್ರಿ ಜಮೀರ್‌ನ ಹಿಡ್ಕೊಂಡು‌ ಇಂತಹ ಕೃತ್ಯ ಮಾಡ್ತಾ ಇದಾರೆ. ಜಮೀರ್ ಮಾಡುವ ಹಲ್ಕಟ, ಜನವಿರೋಧಿ ಕೆಲಸ, ಮಠ ಮಾನ್ಯಗಳ ಜಮೀನು, ದಲಿತರ ಜಮೀನು ಹೊಡೆಯುತ್ತಿದ್ದಾರೆ. ಕಲಬುರಗಿ, ಕೊಪ್ಪಳ, ಬಿಜಾಪೂರ ಜಿಲ್ಲೆಯ ಜಮೀನುಗಳನ್ನು ವಕ್ಫ ಹೆಸರಿಗೆ ಮಾಡ್ತಾ ಇದಾರೆ. ಅಹಿಂದ ಹೆಸರು ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಜಮೀರ್ ಎನ್ನುವ ೪೨೦ ನ ಹಿಡ್ಕೊಂಡು ಹೀಗೆ ಮಾಡ್ತಾ ಇದಿರಿ. ಇದನ್ನು ನೋಡಿ ನಾವು ಸುಮ್ಮನೇ ಕೂಡಲ್ಲ. ನಿರಂತರ ಹೋರಾಟ ಮಾಡ್ತಾ‌‌ ಇದಿವಿ. ‌ಕೇಂದ್ರದ ಮೋದಿ‌‌ ನೇತೃತ್ವದಲ್ಲಿನ ಸರಕಾರ ಇದರ‌ ಬಗ್ಗೆ ತನಿಖೆ ಮಾಡಿ ಸರಿಪಡಿಸಲು ಕ್ಯಾಬಿನೆಟ್ ಸಬ್ ಕಮಿಟಿ‌ ರಚನೆ ಮಾಡಲಾಗಿದೆ. ಈ ವರದಿ ಬರುತ್ತದೆ ಎನ್ನುವ ಕಾರಣಕ್ಕೆ ಈಗ ರೈತರಿಗೆ ಕೊಟ್ಟ ನೋಟಿದ್ ವಾಪಸ್ಸು ಪಡದಿರಿ.‌ ಸಿದ್ದರಾಮಯ್ಯ ಅವರೇ ‌ನಿಮ್ಮ ೯೯ ತಪ್ಪುಗಳು ಈಗಾಗಲೇ ‌ಆಗಿವೆ. ಆ ದೇವರು ನಿಮ್ಮ ಎಲ್ಲ ತಪ್ಪುಗಳನ್ನು ನೋಡ್ತಾ ಇದಾನೆ. ಇದಕ್ಕೆ‌ ತಕ್ಕ ಶಾಸ್ತಿ ಆಗಿತ್ತದೆ. ನೀವು ಪ್ರಮಾಣಿಕರಾಗಿದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಿ, ಸತ್ಯ ಶೋಧನಾ ಸಮಿತಿ ‌ಮಾಡಿದ್ದೇವೆ. ವರದಿ‌‌ ಕೊಟ್ಟಿದೆ. ರಾಜ್ಯದಲ್ಲೂ ವಕೀಲರ ನೇತೃತ್ವದಲ್ಲಿ ಕಮಿಟಿ‌ ಮಾಡಿದ್ದೆವೆ. ಯಾರಿಗೆ ಅನ್ಯಾಯ ಆಗಿದೆ ಅವರೆಲ್ಲ ವಕೀಲರನ್ನ ಸಂಪರ್ಕ ಮಾಡಿ ನಿಮಗೆ ಆದ ಅನ್ಯಾಯ ಹೇಳಿಕೊಳ್ಳಿ. ರೈತರು ಯಾವುದೆ ಕಾರಣಕ್ಕೂ ಹೆದರಬೇಡಿ. ನಾವು ಒಂದಿಂಚೂ ಭೂಮಿಯನ್ನು ವಕ್ಫಗೆ ಬಿಟ್ಟುಕೊಡುವುದಿಲ್ಲ ಎಂದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ರಾಜ್ಯ ಸರಕಾರ ಎಲ್ಲ ರೈತರ ಆಸ್ತಿ ಕಬಳಿಸಲು ಹುನ್ನಾರ ನಡೆಸಿದ್ದು ಬಹಿರಂಗವಾಗಿದೆ. ನಮ್ಮ ಅಕ್ಕ ತಂಗಿಯರ ತಾಳಿಗೂ ಕಾಂಗ್ರೆಸ್ ಕೈ ಹಾಕಿದೆ. ನಮ್ಮ ಎಲ್ಲ ಆಸ್ತಿಗಳನ್ನು ಕಬಳಿಸುತ್ತಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಈ ಸಂಚು ನಡೆದಿದೆ. ಜಮೀರ್ ಎಲ್ಲ ಜಿಲ್ಲೆಗೂ ಹೋಗಿ ಮೀಟಿಂಗ್ ಮಾಡಿ ಆಸ್ತಿ ಹೊಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ನಾವು ಪ್ರತಿಭಟನೆ, ಹೋರಾಟ ಮಾಡುತ್ತಿರುವುದಕ್ಕೆ ಎಚ್ಚೆತ್ರು ಆದೇಶ ಮಾಡಿದ್ದಾರೆ. ಸಿದ್ದರಾಮಯ್ಯ ಆದರೆ ಇದು ತಾತ್ಕಾಲಿಕ ಆದೇಶ ವಕ್ಫ ಸಂಸ್ಥೆಗೆ ಮಾಡಲಾಗುತ್ತಿರುವ ಆಸ್ತಿ ನೋಂದಣಿಯನ್ನು ‌ಕೈ ಬಿಡಬೇಕಾದರೆ ಶಾಶ್ವತ ಆದೇಶ ಹೊರಡಿಸಿ‌ ವಕ್ಫ ಕಾಯಿದೆಗೆ ತಿದ್ದುಪಡೆ ತರಬೇಕು ಎಂದರು. ಮಾಜಿ ಸಚಿವರಾದ ಬಿ.ಶ್ರೀರಾಮುಲು, ಜನಾರ್ದನರೆಡ್ಡಿ ಸೇರಿ ಹಲವು ಮುಖಂಡರು ಇದ್ದರು.

Tags :
#ಪ್ರತಿಭಟನೆ#ಬಳ್ಳಾರಿ#ಬಿಜೆಪಿ#ವಕ್ಫ್‌#ವಿಜಯೇಂದ್ರ#ಸಿದ್ದರಾಮಯ್ಯ
Next Article