ಸಿದ್ದರಾಮಯ್ಯ ರಾಜೀನಾಮೆ ನೀಡೋವರೆಗೂ ಹೋರಾಟ
ತುಕಾರಾಂ ನನಗೆ ಸವಾಲು ಹಾಕುವ ಬದಲು ಈಡಿ ಅಧಿಕಾರಿಗಳಿಗೆ ಉತ್ತರ ಕೊಡ್ಬೇಕು. ಸಂತೋಷ್ ಲಾಡ್ ಕೃಪೆಯಿಂದ ಇದುವರೆಗೆ ಗೆದ್ದಿದ್ದೀರಿ
ಬಳ್ಳಾರಿ: ಸಿಎಂ ಸಿದ್ದರಾಮಯ್ಯ ಮೇಲೆ ಭ್ರಷ್ಟಚಾರದ ಆರೋಪ ಬಂದಿದೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಬಳ್ಳಾರಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಹಿಂದೆ ಇದೇ ಸಿದ್ದರಾಮಯ್ಯ ಭ್ರಷ್ಟಾಚಾರ ಆರೋಪ ಬಂದವರಿಗೆ ರಾಜೀನಾಮೆ ಕೇಳಿದ್ದರು. ಈಗ ಅವರು ಯಾಕೆ ರಾಜೀನಾಮೆ ಕೊಡುತ್ತಿಲ್ಲ ಉತ್ತರಿಸಬೇಕು. ತನಿಖೆ ಪಾರದರ್ಶಕತೆ ನಡೆಯಬೇಕಾದ್ರೆ ಸಿದ್ದರಾಮಯ್ಯ ರಾಜೀನಾಮೆ ಕೊಡ್ಬೇಕು. ಸರ್ಕಾರ ಬಂದೂ ಎರಡು ವರ್ಷ ಕಳೆದ್ರೂ ಅಭಿವೃದ್ಧಿ ಇಲ್ಲ. ಕುರ್ಚಿ ಉಳಿಸುಕೊಳ್ಳಲು ಪ್ರಯತ್ನ ಮಾಡ್ತಾ ಇದ್ದಾರೆ. ಕಲ್ಯಾಣ ಕರ್ನಾಟಕ ಭಾಗ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ಸಾಭೀತಾಗಿದೆ. ಬಳ್ಳಾರಿ ಲೋಕಸಭಾ ಚುನಾವಣೆಗೆ 21 ಕೋಟಿ ಹಣ ಬಳಕೆಯಾಗಿದೆ. ಇದನ್ನ ಇಡಿ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ. ಈ ತುಕಾರಾಂ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡ್ಬೇಕು. ತುಕಾರಾಂ ನನಗೆ ಸವಾಲು ಹಾಕುತ್ತಿದ್ದಾರೆ. ತುಕಾರಾಂ ನನಗೆ ಸವಾಲು ಹಾಕುವ ಬದಲು ಈಡಿ ಅಧಿಕಾರಿಗಳಿಗೆ ಉತ್ತರ ಕೊಡ್ಬೇಕು. ಸಂತೋಷ್ ಲಾಡ್ ಕೃಪೆಯಿಂದ ಇದುವರೆಗೆ ಗೆದ್ದಿದ್ದೀರಿ ?. ಇಲ್ಲಂದ್ರೆ ನಿಗಮದ ಹಣ ಖರ್ಚು ಮಾಡಿ ಗೆಲ್ಲಬೇಕು.ಸಂಡೂರು ನಾರಿಹಳ್ಳದಿಂದ ಕುಡಿಯುವ ನೀರಿಗಾಗಿ 1600 ಕೋಟಿ ಅನುದಾನ ತಂದಿದ್ದೆ.
ಸಂಸದ ಈ ತುಕಾರಾಂ ಈ ಯೋಜನೆಯನ್ನ ಸ್ಥಗಿತಗೊಳಿಸಿದ್ದಾರೆ. ಸಂಸದ ಆಯ್ಕೆ ಅಸಿಂಧುಗೊಳಿಸಲು ಖಾಸಗಿ ದೂರು ಸಲ್ಲಿಸುವೆ ಎಂದ ಶ್ರೀರಾಮುಲು, ಈ ಬಗ್ಗೆ ಹಿರಿಯ ವಕೀಲರ ಕಾನೂನು ಸಲಹೆ ಪಡೆಯುತ್ತಿರುವೆ. ಸಂಡೂರು ಉಪ ಚುನಾವಣೆ ಹಿನ್ನಲೆ ಟೆಂಡರ್ ಕರೆಯದೇ ಕಾಮಗಾರಿ ಮಾಡ್ತಾರೆ. ಉಪ ಚುನಾವಣೆಗಾಗಿ ಈ ತುಕಾರಾಂ ಗಿಮಿಕ್ ಮಾಡ್ತಾ ಇದ್ದಾರೆ. ಲೋಕಾಯುಕ್ತ ವರದಿಯಲ್ಲಿ ನನ್ನ ಹೆಸರು ಪ್ರಸ್ತಾಪ ಆಗಿತ್ತು. ಸ್ವಾಭಿಮಾನದಿಂದ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಜನಾರ್ಧನರೆಡ್ಡಿ ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಸಿದ್ದರಾಮಯ್ಯ ಕೂಡ ರಾಜೀನಾಮೆ ನೀಡಬೇಕು. ಇದರ ವಿರುದ್ದ ನಮ್ಮ ಹೋರಾಟ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗ್ತೇವೆ ಎಂದರು.