For the best experience, open
https://m.samyuktakarnataka.in
on your mobile browser.

ಸಿದ್ದು-ಬೊಮ್ಮಾಯಿ-ಅಶೋಕ್ ಜಗಳ್ ಬಂದಿ

02:00 AM Feb 21, 2024 IST | Samyukta Karnataka
ಸಿದ್ದು ಬೊಮ್ಮಾಯಿ ಅಶೋಕ್ ಜಗಳ್ ಬಂದಿ

ಸಿಎಂ: ನರೇಂದ್ರಮೋದಿ ಗುಜರಾತ್ ಸಿಎಂ ಆಗಿದ್ದಾಗ ಅಂದಿನ ಕೇಂದ್ರ ಸರ್ಕಾರದಿಂದ ಶೇ. ೫೦ರಷ್ಟು ಪಾಲು ಕೇಳಿದ್ರು ಗೊತ್ತಾ? ನಾವು ನ್ಯಾಯಯುತ ಪಾಲು ಕೇಳಿದ್ರೆ ದೇಶ ವಿಭಜನೆ ಅಂತೀರಿ? ಇದು ಯಾವ ನ್ಯಾಯ
ಆರ್.ಅಶೋಕ್: ಮೋದಿ ಅವರು ಟ್ಯಾಕ್ಸ್ ಬಗ್ಗೆ ಮಾತಾಡಿದ್ರು? ನಿಮ್ಮವರು ದೇಶ ಒಡೆಯೋ ಮಾತಾಡಿದಾರೆ. ಅನ್ಯಾಯ ಆಗಿದ್ದರೆ ಲೋಕಸಭೆಯಲ್ಲಿ ಪ್ರಶ್ನಿಸಬಹುದಿತ್ತು. ನಿಮ್ಮ ಪಕ್ಷಾಧ್ಯಕ್ಷರೇ ರಾಜ್ಯಸಭೆ ವಿಪಕ್ಷ ನಾಯಕರು. ಏಕೆ ನಿಮ್ ಸಂಸದರು ನಿದ್ರೆ ಮಾಡಿದ್ರಾ?
ಸಿಎಂ: ಬಜೆಟ್ ಗಾತ್ರಕ್ಕೆ ತಕ್ಕಂತೆ ಅನುದಾನ ಹಂಚಿಕೆ ಆಗ್ತಿಲ್ಲ. ೧೦೦ ರೂ ನಾವು ಕೊಟ್ರೆ ನಮ್ಗೆ ಸಿಗ್ತಿರೋದು ೧೨-೧೩ ರೂ ಮಾತ್ರ. ಇದನ್ನು ಕೇಳಬಾರದಾ?
ಬೆಲ್ಲದ್: ಎಲ್ಲ ತಪ್ಪು ಲೆಕ್ಕ. ಬರೀ ಸುಳ್ಳೇ ಹೇಳ್ತಿದೀರಿ. ನೀವು ಮೈಸೂರಿಗೆ ಹೋಗ್ತೀರಲ್ಲ ಎಕ್ಸ್ಪ್ರೆಸ್ ವೇ ಅದಕ್ಕೆ ಯಾರು ಹಣ ಕೊಟ್ಟಿದ್ದು. ರೈಲ್ವೇ ಯೋಜನೆಗೆ ಎಷ್ಟು ದುಡ್ಡು ಕೇಂದ್ರದಿಂದ ಬಂದಿದೆ ಎಲ್ಲವನ್ನೂ ಹೇಳಿ.
ಅಶೋಕ್: ಚಾಲೆಂಜ್ ಮಾಡಿ ಹೇಳ್ತೀನಿ. ಯುಪಿಎ ಸರ್ಕಾರದ ಅವಧಿಗಿಂತ ಮೂರುಪಟ್ಟು ಹೆಚ್ಚು ಹಣ ಎನ್‌ಡಿಎ ಸರ್ಕಾರದಿಂದ ರಾಜ್ಯಕ್ಕೆ ಬಂದಿದೆ. ಆದ್ರೆ ನೀವು ಸುಳ್ಳೇ ಹೇಳ್ತಿದೀರಿ
ಬೊಮ್ಮಾಯಿ: ಸಿಎಂ ಸತ್ಯವನ್ನು ಮರೆಮಾಚಿ, ಕಾನೂನು ತಿರುಗಿಸಿ ವಾದ ಮಾಡ್ತಿದಾರೆ
ಸಿಎಂ: ನಿಜ ಹೇಳಿದ್ರೆ ಬಿಜೆಪಿಯವರಿಗೆ ಮೈಯೆಲ್ಲ ಉರಿಯುತ್ತೆ. ಸತ್ಯ ಯಾವತ್ತೂ ಕಹಿಯಾಗಿಯೇ ಇರುತ್ತೆ. ಮಿಸ್ಟರ್ ಬೊಮ್ಮಾಯಿ
ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆ ಎಂದು ಕೇಂದ್ರ ಘೋಷಿಸಲಿದೆ ಎಂದು ನೀವೇ(ಬೊಮ್ಮಾಯಿ) ಬಜೆಟ್‌ನಲ್ಲಿ ಹೇಳಿದ್ರಿ. ಅದಕ್ಕೆ ಕೇಂದ್ರ ಬಜೆಟ್‌ನಲ್ಲಿ ಪ್ರಕಟಿಸಿದ್ದ ೫೩೦೦ ಕೋಟಿ ರೂ ಬಂತಾ..ಇಲ್ಲ ಇದು ಸುಳ್ಳಲ್ವಾ.
ಬೊಮ್ಮಾಯಿ: ಬಜೆಟ್ ಘೋಷಣೆ ಇವತ್ತು ನಮಗದು ಸಿಕ್ಕೇ ಸಿಗುತ್ತೆ. ನೀವು ಕೇವಲ ಪತ್ರ ಬರೆದು ಕೂತ್ರೆ ಆಗಲ್ಲ. ಎನ್.ಫಾರ್ಮ್ಯಾಟ್‌ನಲ್ಲಿ ಪ್ರಕ್ರಿಯೆ ಮೂವ್ ಮಾಡಿ ಸಿಡ್ಬಬ್ಲ್ಯಸಿ ಬಳಿಕ ಫೈನಾನ್ಸ್ನಲ್ಲೂ ಕ್ಲಿಯರ್ ಆಗಿಯೇ ಆಗುತ್ತೆ. ನೀವು ಕೇಳಿದ್ರಾ?
ಸಿಎಂ: ಅದ್ಯಾವ್ದಪ್ಪಾ ನಂಗೆ ಗೊತ್ತಿಲ್ಲದ ಎನ್-ಫಾರ್ಮ್ಯಾಟ್. ಬೊಮ್ಮಾಯಿ ನೀವು ತರಿಸಿಕೊಡಿ ನಿಮಗೆ ಧನ್ಯವಾದ ಹೇಳ್ತೇನೆ. ನಾನು ಹೇಳ್ತೇನೆ ೫೩೦೦ ಕೋಟಿ ನಮಗೆ ಬಂದಿಲ್ಲ..ಬಂದಿಲ್ಲ..
ಬೊಮ್ಮಾಯಿ: ಪ್ರಕ್ರಿಯೆ ಕ್ಲಿಯರ್ ಆಗ್ದೆ ಯಾವುದೇ ಯೋಜನೆಗೆ ನೀವು ಹಣ ರಿಲೀಸ್ ಮಾಡ್ತೀರಾ ಸಿದ್ದರಾಮಯ್ಯನೋರೆ. ಎಲ್ಲವೂ ಗೊತ್ತಿದ್ದು ಬರೀ ಸುಳ್ಳು ಆರೋಪ ಏಕೆ ಮಾಡ್ತೀರಿ. ಹಣ ರ‍್ದೇ ಇರೋದಕ್ಕೆ ನಿಮ್ಮ ಸರ್ಕಾರಾನೇ ಕಾರಣ.
ಸಿಎಂ: ೧೫ನೇ ಹಣಕಾಸು ಆಯೋಗದಲ್ಲೂ ತಾರತಮ್ಯ. ನಮ್ ತೆರಿಗೆ ಹಣದಲ್ಲೂ ಅನ್ಯಾಯ. ಭದ್ರಾ ದುಡ್ಡೂ ಇಲ್ಲ. ಒಟ್ಟಾರೆ ಕೇಂದ್ರದಿಂದ ರಾಜ್ಯಕ್ಕೆ ಪಂಗನಾಮ ಹಾಕ್ತಿದಾರೆ. ನಮ್ಗೆ ಹಣ ಕೊಟ್ಟಿಲ್ಲ.
ಬೊಮ್ಮಾಯಿ: ನೀವು ಪಡ್ಕೊಳ್ಳೋಕೆ ಆಗಿಲ್ಲ. ಪಡ್ಕೊಳ್ಳೊ ರೀತಿನೂ ನಿಮಗೆ ಗೊತ್ತಿಲ್ಲ. ಫಾರ್ಮ್ಯಾಟ್‌ನಲ್ಲಿ ಕೊಡ್ಲಿಲ್ಲ
ಸಿಎಂ: ಕೇವಲ ಭಂಡತನದ ವಾದ ನಿಮ್ಮದು.
ಬೊಮ್ಮಾಯಿ: ಭಂಡತನದ ಪೇಟೆಂಟ್ ನಿಮ್ಮ ಸರ್ಕಾರ ಮತ್ತು ಪಕ್ಷಕ್ಕೆ ಸಿಕ್ಕಿದೆ
ಡಿಕೆಶಿ: ನಿಮ್ಮ ವೈಫಲ್ಯವನ್ನು ನಮ್ಮ ಮೇಲೇಕೆ ಹಾಕ್ತೀರಿ? ನಾವು ನಿರ್ಮಲಾ ಸೀತಾರಾಮನ್ ಅವರನ್ನು ಖುದ್ದು ಭೇಟಿ ಮಾಡಿ ಕನ್ವಿನ್ಸ್ ಮಾಡಲು ಪ್ರಯತ್ನಿಸಿದ್ದೇವೆ.
ಬೊಮ್ಮಾಯಿ: ನಿಮ್ ಕಮ್ಯುನಿಕೇಷನ್ ಸರಿ ಇಲ್ಲ. ಇಲಾಖೆ ಫಾರ್ಮ್ಯಾಟ್ ಮುಖೇನ ಕೊಟ್ರೆ ಆಗುತ್ತೆ
ಡಿಕೆಶಿ: ನಾವೂ ಕೂಡಾ ಫಾರ್ಮ್ಯಾಟ್ ಮೂಲಕವೇ ಕೊಟ್ಟಿದ್ದೀವಿ
ಬೊಮ್ಮಾಯಿ: ಅದು ಹಾಗಲ್ಲ. ಎನ್-ಫಾರ್ಮ್ಯಾಟ್ ಮುಕೇನ ಕಳಿಸಿ ಬರುತ್ತೆ. ಅಗತ್ಯ ಬಿದ್ರೆ ನಾವೂ ಒಟ್ಟಿಗೆ ಬರಲು ಸಿದ್ದರಿದ್ದೇವೆ. ಕಳೆದ ೯ ತಿಂಗಳು ಮಲ್ಕೊಂಡು ಈವಾಗ ಕೇಳಿದ್ರೆ ಹೇಗೆ? ಬೇಕೆಂದೇ ಕೇಂದ್ರದ ಜೊತೆ ಸಂಘರ್ಷಕ್ಕೆ ಇಳಿತಿದೀರಿ
ಸಿಎಂ: ನಾವು ಯಾರೊಂದಿಗೂ ಸಂಘರ್ಷ ಮಾಡಲ್ಲ. ೭ ಕೋಟಿ ಕನ್ನಡಿಗರ ಪರವಾಗಿ ಅನ್ಯಾಯ ಪ್ರಶ್ನಿಸ್ತೇವೆ. ಇದು ನಮ್ಮ ಕರ್ತವ್ಯ ಕೂಡಾ. ಇದಕ್ಕೆ ನಾನು ಹೇಳೋದು ನಿಮ್ದು ಡಬಲ್ ಸ್ಟ್ಯಾಂಡರ್ಡ್ ಅಂತ.
ಸಿಎಂ: ಕುಮಾರಸ್ವಾಮಿ ಇಲ್ಲಿಲ್ಲ. ಅವರು ಯಾವ್ದೋ 'ಸಿದ್ದನಾಮಿಕ್ಸ್' ಶಬ್ದ ಹುಡುಕಿದಾರೆ. ನನಗೆ ಗೊತ್ತಿರೋದು ಗುಡ್ ಎಕನಾಮಿಕ್ಸ್ ಮತ್ತು ಬ್ಯಾಡ್ ಎಕನಾಮಿಕ್ಸ್ ಮಾತ್ರ.
ಅಶೋಕ್: ಸಿದ್ರಾಮಯ್ಯನೋರೇ ಗುಡ್-ಬ್ಯಾಡ್ ಮಧ್ಯೆ ಅಗ್ಲಿ ಅಂತಾನೂ ಒಂದಿದೆ.
ಸಿಎಂ: ಐ ಸೇ ನನ್ನ ಬಜೆಟ್ ಗುಡ್ ಎಕನಾಮಿಕ್ಸ್ನದು. ಸ್ವಾಭಿಮಾನದ ಎಕನಾಮಿಕ್ಸ್. ಸ್ವಾಹ ಅಲ್ಲ. ಶ್ರೀಮಂತರಿಂದ ಕಾನೂನು ರೀತಿ ತೆರಿಗೆ ವಸೂಲಿ ಮಾಡಿ ಎಲ್ಲಾ ಜಾತಿ, ಧರ್ಮದ ಬಡವರಿಗೆ ಹಂಚಿರುವುದಕ್ಕೆ ನಮ್ಮ ಐದು ಗ್ಯಾರಂಟಿಗಳೇ ಸಾಕ್ಷಿ. ಬರುವ ವರ್ಷಕ್ಕೂ ಬಜೆಟ್‌ನಲ್ಲಿ ೫೨ ಸಾವಿರ ಕೋಟಿ ಮೀಸಲಿಟ್ಟಿದ್ದೇನೆ.
ಬೊಮ್ಮಾಯಿ: ಎಸ್‌ಸಿಪಿಟಿಎಸ್‌ಪಿ ಹಣವನ್ನು ದಲಿತರಿಗೆ ಮಾತ್ರ ಬಳಸುವ ಕಾನೂನು ಮಾಡಿದ ನೀವೇ ಅದನ್ನು ಡೈವೊರ್ಟ್ ಮಾಡಿದ್ದು ಏಕೆ? ದಲಿತರಿಗೆ ಮಾಡಿದ ಅನ್ಯಾಯ ಅಲ್ವಾ ಇದು. ಕಾನೂನು ಮಾಡ್ದೋರೇ ಬ್ರೇಕ್ ಮಾಡೋದಾ?
ಸಿಎಂ: ಇಡೀ ದೇಶದಲ್ಲಿ ಇಂತದ್ದೊಂದು ಕಾನೂನು ಮಾಡಿದ್ದು ನಾವು. ಕೇಂದ್ರದವರಿಂದನೂ ಮಾಡ್ಸಿ ನೋಡೋಣ. ಮೀಸಲು ಬಡ್ತಿ, ಗುತ್ತಿಗೆ ಮೀಸಲು ಎಲ್ಲವೂ ನಮ್ಮ ಸರ್ಕಾರದಿಂದಲೇ ಆಗಿದ್ದು. ಕೇವಲ ದಲಿತರ ಹೆಸರು ಹೇಳಿದ್ರೆ ಉದ್ದಾರ ಆಗೊಲ್ಲ.
ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದೂ ನಾವೇ. ಚಪ್ಪಾಳೆ ತಟ್ಟಿ ಯತ್ನಾಳ್.
ವಿಪಕ್ಷ ಮುಖಂಡರು ಸಾಮೂಹಿಕವಾಗಿ ರಾಜ್ಯಪಾಲರಿಂದ ಸುಳ್ಳು ಹೇಳಿಸಿದ ಸರ್ಕಾರ. ಮುಖ್ಯಮಂತ್ರಿಗಳದ್ದು ರಾಜಕೀಯ ಭಾಷಣ. ಅಭಿವೃದ್ಧಿ ಪರ ಏನಿಲ್ಲ. ನಾವು ಕಲಾಪ ಬಹಿಷ್ಕರಿಸುತ್ತೇವೆಂದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಹೊರನಡೆದರು. ಬಳಿಕವೂ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿಯವರದ್ದು ರೈತ, ಬಡವ, ದಲಿತ, ಮಹಿಳಾ, ಕಾರ್ಮಿಕ ವಿರೋಧಿ ನೀತಿ. ಅಷ್ಟೇ ಅಲ್ಲ ಸಂವಿಧಾನ ವಿರೋಧಿ ಎಂದು ಕಿಡಿಕಾರಿದರು. ಸಂವಿಧಾನ ರಕ್ಷತಿ ರಕ್ಷಿತ: ಎನ್ನುವ ಮೂಲಕ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯಕ್ಕೆ ಕೃತಜ್ಞತೆ ಸಲ್ಲಿಸಿದರು.