ಸಿನಿಮೀಯ ರೀತಿಯಲ್ಲಿ ಸುಲಿಗೆ: ಮೂವರ ಬಂಧನ
ಮುದ್ದೇಬಿಹಾಳ: ಮಹಾರಾಷ್ಟ್ರದ ಕೋಲ್ಹಾಪುರದ ಉದ್ಯಮಿಗೆ ಸಿನಿಮೀಯ ರೀತಿಯಲ್ಲಿ ಸುಲಿಗೆ ಮಾಡಿದ ಆರೋಪಿಗಳನ್ನು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಕೊಲ್ಹಾಪುರದ ಉದ್ಯಮಿ ಅಶೋಕ ಕುಲಕರ್ಣಿಯವರು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಯರಗಲ್ಲ ಗ್ರಾಮದ ಬಾಲಾಜಿ ಶುಗರ್ಶ ಕಂಪನಿಗೆ ವ್ಯಾಪಾರಕ್ಕಾಗಿ ಭೇಟಿ ನೀಡಿ ಮರಳುವಾಗ ಹತ್ತಿರದ ಕೋಳೂರ ಕ್ರಾಸ್ ಬಳಿ ಕಾರ್ ಗೆ ಅಡ್ಡಗಟ್ಟಿ ನಿಲ್ಲಿಸಿ, ಚಾಕು ತೋರಿಸಿ, ಕಣ್ಣಿಗೆ ಖಾರದ ಪುಡಿ ಎರಚಿ ಬಂಗಾರದ ಆಭರಣಗಳು ಹಾಗೂ ಹಣವನ್ನು ಕಸಿದು ಪರಾರಿಯಾಗಿದ್ದರು.
ಪ್ರಕರಣದ ದೂರು ದಾಖಲಾಗುತ್ತಿದ್ದಂತೆಯೇ ತನಿಖೆ ಪ್ರಾರಂಭಿಸಿದ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪರೆಡ್ಡಿ, ಕ್ರೈಂ ಪಿಎಸ್‌ಐ ಆರ್.ಎಲ್.ಮನ್ನಾಬಾಯಿ ಸಿಬ್ಬಂದಿಗಳಾದ ಬಿ,ಕೆ,ಗುಡಿಮನಿ, ಆರ್.ಎಸ್.ಪಾಟೀಲ, ವಿ.ಎಸ್.ಹಾಲಗಂಗಾಧರಮಠ, ಸಿ.ಎಸ್.ಬಿರಾದಾರ, ಆರ್.ಎಸ್.ಮಾದರ, ಎಲ್.ಎಸ್.ಹತ್ತರಕಿಹಾಳ ಇವರು ಆರೋಪಿತರಾದ ನಿಪ್ಪಾಣಿ ಮೂಲದ ರಾಕೇಶ ಸಾವಂತ, ರೋಹನ ನಿಪ್ಪಾಣಿ, ಪ್ರಥಮೇಶ ಹವಾಲ್ದಾರ ಈ ಮೂವರನ್ನು ಹೆಡೆಮುರಿ ಕಟ್ಟುವಲ್ಲಿ ಸಫಲರಾಗಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಲ್ಲದೇ ಎಸ್‌ಪಿ ಅವರಿಂದ ಶ್ಲಾಘನೆ, ಪ್ರಶಂಸನಾ ಪತ್ರದ ಜೊತೆಗೆ ನಗದು ಬಹುಮಾನವನ್ನು ಪಡೆದಿದ್ದಾರೆ.